Bengaluru Airport: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಏನಾದ್ರೂ ಕಳ್ಕೊಂಡ್ರೆ ಇವ್ರಿಗೆ ಹೇಳಿ, ನಿಮಿಷಗಳಲ್ಲೇ ಹುಡುಕಿಕೊಡ್ತಾರೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಬೆಂಗಳೂರು ವಿಮಾನ ನಿಲ್ದಾಣ


Last Updated:

ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾವನಾ ಅರೋರಾ ಕಳೆದುಕೊಂಡ ಫೋನ್ ಅನ್ನು CISF ಸಿಬ್ಬಂದಿ 15 ನಿಮಿಷಗಳಲ್ಲಿ ಪತ್ತೆಹಚ್ಚಿ ಹಿಂತಿರುಗಿಸಿದರು, ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಹೆಚ್ಚಿತು

ಬೆಂಗಳೂರು ವಿಮಾನ ನಿಲ್ದಾಣ
ಬೆಂಗಳೂರು ವಿಮಾನ ನಿಲ್ದಾಣ

ಬೆಂಗಳೂರು: ನಿಮ್ಮ ದುಬಾರಿ ಮೊಬೈಲ್ ಫೋನ್ (Phone) ವಿಮಾನ ನಿಲ್ದಾಣದಲ್ಲಿ ಕಳೆದುಹೋದರೆ ಏನಾಗುತ್ತೀರಿ? ಸಹಜವಾಗಿ ಗಾಬರಿಯಾಗುತ್ತೀರಿ, ಆತಂಕಗೊಳ್ಳುತ್ತೀರಿ. ಅಂತಹದ್ದೇ ಒಂದು ಘಟನೆ ಬೆಂಗಳೂರಿನ (Bengaluru) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Airport) ನಡೆದಿದೆ. ಆದರೆ, ಅಲ್ಲಿ ನಡೆದಿದ್ದೇನು ಗೊತ್ತಾ? ಕಳೆದುಹೋದ ಫೋನ್ (Phone) ಕೇವಲ 15 ನಿಮಿಷಗಳಲ್ಲಿ ಮಾಲೀಕರ ಕೈ ಸೇರಿದೆ. ಇದು ಅಸಾಧ್ಯವೆಂದು ನಿಮಗೆ ಅನ್ನಿಸಬಹುದು, ಆದರೆ ಇದು ನಿಜ.

ನಡೆದಿದ್ದೇನು?

ಭಾವನಾ ಅರೋರಾ ಎಂಬ ಪ್ರಯಾಣಿಕರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಮ್ಮ ಮೊಬೈಲ್ ಫೋನ್ ಕಳೆದುಕೊಂಡು ಕಂಗಾಲಾಗಿದ್ದರು. ಫೋನ್ ಕಳೆದುಕೊಂಡ ಕ್ಷಣದಲ್ಲಿ ಅವರು ಅನುಭವಿಸಿದ ಆತಂಕ ಅಷ್ಟಿಷ್ಟಲ್ಲ. ಆದರೆ, ಅವರು ಧೈರ್ಯಗೆಡದೆ ತಕ್ಷಣವೇ ಅಲ್ಲಿ ಕರ್ತವ್ಯದಲ್ಲಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿಯನ್ನು ಸಂಪರ್ಕಿಸಿದ್ದಾರೆ.
ಸಿಐಎಸ್ಎಫ್ (CISF) ಸಿಬ್ಬಂದಿಯ ಮಿಂಚಿನ ಕಾರ್ಯಾಚರಣೆ

ಪ್ರಯಾಣಿಕರ ಮನವಿಯನ್ನು ಸ್ವೀಕರಿಸಿದ ಕೂಡಲೇ ಸಿಐಎಸ್ಎಫ್ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದರು. ಅವರ ಕಾರ್ಯಕ್ಷಮತೆ ಎಷ್ಟೊಂದು ವೇಗವಾಗಿತ್ತು ಎಂದರೆ, ಕಳೆದುಹೋದ ಫೋನ್ ಅನ್ನು ಕೇವಲ 15 ನಿಮಿಷಗಳಲ್ಲಿ ಪತ್ತೆಹಚ್ಚಿ, ಅದನ್ನು ಸುರಕ್ಷಿತವಾಗಿ ಮಾಲೀಕರಿಗೆ ಮರಳಿಸಿದ್ದಾರೆ ಎಂದು ಪ್ರಜಾವಾಣಿ ವೆಬ್‍ಸೈಟ್ ವರದಿ ಮಾಡಿದೆ.
ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಹಾಪೂರ

ಈ ಅನುಭವವನ್ನು ಸ್ವತಃ ಭಾವನಾ ಅರೋರಾ ಅವರು ‘ಎಕ್ಸ್’ (ಟ್ವಿಟ್ಟರ್) ನಲ್ಲಿ ಹಂಚಿಕೊಂಡಿದ್ದಾರೆ. “ನಾನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಫೋನ್ ಕಳೆದುಕೊಂಡು ಗಾಬರಿಯಾಗಿದ್ದೆ. ಬಳಿಕ (CISF) ಸಿಬ್ಬಂದಿಯನ್ನು ಸಂಪರ್ಕಿಸಿದೆ. ಅವರ ಕಾರ್ಯಕ್ಷಮತೆ ಅದ್ಭುತ. ಕೇವಲ 15 ನಿಮಿಷಗಳಲ್ಲಿ ನನ್ನ ಫೋನ್ ಮತ್ತೆ ನನ್ನ ಕೈ ಸೇರಿತು” ಎಂದು ಅವರು ಬರೆದುಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports