ಸೂರ್ಯ ಈ ಚಿತ್ರದಲ್ಲಿ ಲಾಯರ್ ಪಾತ್ರ ಮಾಡಿದ್ದಾರೆ. ನಟಿ ತ್ರಿಷಾ ಕೃಷ್ಣನ್ ಕೂಡ ಇಲ್ಲಿ ವಕೀಲೆ ಪಾತ್ರ ಮಾಡಿದ್ದಾರೆ. ಇವರ ಜೋಡಿಯ ಈ ಚಿತ್ರದಲ್ಲಿ ಒಂದು ವಿಶೇಷ ಮ್ಯಾಜಿಕ್ ಇದೆ.
ಚಿತ್ರದಲ್ಲಿವೆ ಸರ್ಪ್ರೈಸ್
ಇದನ್ನ ಕಂಡ ಜನ ಥ್ರಿಲ್ ಆಗಿದ್ದಾರೆ. ಹಾಗಾಗಿಯೆ ಚಿತ್ರ ಬಾಕ್ಸ್ ಆಫೀಸ್ ಅಲ್ಲಿ ಫುಲ್ ಸೌಂಡ್ ಮಾಡಿದೆ. ಆದರೆ, ಈ ಚಿತ್ರ ರಿಲೀಸ್ ಆದ ತಿಂಗಳ ಒಳಗೇನೆ ಒಟಿಟಿಗೆ ಕಾಲಿಡುತ್ತಿದೆ.
ಕರುಪ್ಪು ಚಿತ್ರ ಬಹು ಭಾಷೆಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ತಮಿಳು, ತೆಲುಗು, ಹಿಂದಿ, ಮಲೆಯಾಳಂ, ಕನ್ನಡ ಭಾಷೆಯಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ.
ಆರ್.ಜೆ.ಬಾಲಾಜಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಡೈರೆಕ್ಷನ್ ಅಷ್ಟೆ ಅಲ್ಲ, ಕತೆ ಕೂಡ ಇವರೇ ಬರೆದಿದ್ದಾರೆ. ಈ ಚಿತ್ರದಲ್ಲಿ ಇವರು ಒಂದು ಪ್ರಮುಖ ರೋಲ್ ಕೂಡ ಮಾಡಿದ್ದಾರೆ.
ಸೂರ್ಯ, ತ್ರಿಷಾ ಕೃಷ್ಣನ್ ಇಲ್ಲಿ ಲಾಯರ್ ಪಾತ್ರ ಮಾಡಿದ್ದಾರೆ. ಜನ ಸಾಮಾನ್ಯರನ್ನ ಶೋಷಿಸುತ್ತಿರೋ ನ್ಯಾಯಾಂಗ ವ್ಯವಸ್ಥೆಯ ಭ್ರಷ್ಟರ ವಿರುದ್ಧದ ಕತೆಯ ಚಿತ್ರ ಇದಾಗಿದೆ.
ಆಕ್ಷನ್ ಡ್ರಾಮ ಸಿನಿಮಾ
ಸಾಯಿ ಅಭಯಂಕರ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಜಿ.ಕೆ.ವಿಷ್ಣು ಕ್ಯಾಮರಾವರ್ಕ್ ಮಾಡಿದ್ದಾರೆ. 130 ರಿಂದ 140 ಕೋಟಿ ಬಜೆಟ್ ಅಲ್ಲಿ ಈ ಚಿತ್ರ ತಯಾರಾಗಿದೆ.
ಈ ಚಿತ್ರ ಬಾಕ್ಸ್ ಆಫೀಸ್ ಅಲ್ಲಿ ಭಾರೀ ಕಲೆಕ್ಷನ್ ಮಾಡಿದೆ. ನೂರಾರು ಕೋಟಿ ಬಜೆಟ್‌ನ ಈ ಚಿತ್ರ ಬಾಕ್ಸ್ ಆಫೀಸ್ ಅಲ್ಲಿ 306.4 ಕೋಟಿ ಕಲೆಕ್ಷನ್ ಮಾಡಿದೆ.
ಈ ವರ್ಷದ ಅತಿ ಹೆಚ್ಚು ಕಲೆಕ್ಷನ್ ಮಾಡಿರೋ ಚಿತ್ರವೂ ಇದಾಗಿದೆ. ಬ್ಲಾಕ್‌ಬಸ್ಟರ್ ಚಿತ್ರವು ಇದಾಗಿದೆ. ಚಿತ್ರಕ್ಕೆ ಒಳ್ಳೆ ರಿವ್ಯೂ ಕೂಡ ಬಂದಿವೆ.
ಕರುಪ್ಪು ಚಿತ್ರದ ಚಿತ್ರಕತೆ ಚೆನ್ನಾಗಿದೆ. ಡೈರೆಕ್ಟರ್ ಆರ್.ಜೆ.ಬಾಲಾಜಿ ಸರ್ಪ್ರೈಸ್ ಇಟ್ಟಿದ್ದಾರೆ. ಸೂರ್ಯ ನಟನೆಯ ಈ ಹಿಂದಿನ ಚಿತ್ರಗಳ ರೆಫರೆನ್ಸ್ ಮತ್ತು ಕಾಮಿಡಿ ಸೀನ್‌ಗಳು ಇಲ್ಲಿ ಪ್ರೇಕ್ಷಕರಿಗೆ ಮಜಾ ಕೊಡುತ್ತವೆ.
ಚಿತ್ರದ ಸಂಗೀತ ಹಾಗೂ ಕ್ಯಾಮರಾವರ್ಕ್ ಪ್ರೇಕ್ಷಕರಿಗೆ ಖುಷಿಕೊಡುತ್ತವೆ. ಒಟ್ಟಾರೆ, ಕರುಪ್ಪು ಚಿತ್ರ ಜನರಿಗೆ ಇಷ್ಟ ಆಗಿದೆ. ಒಟಿಟಿ ಪ್ರಿಯರಿಗೆ ಇದು ಜೂನ್-12 ರಿಂದ ಲಭ್ಯವಿದೆ ಅಂತ ಹೇಳಬಹುದು.












