Karnataka Reservoirs: ರಾಜ್ಯದ 14 ಜಲಾಶಯಗಳಲ್ಲಿ 77% ನೀರು; ಯಾವ ಡ್ಯಾಂ ಎಷ್ಟು ಭರ್ತಿ? ಇಲ್ಲಿದೆ ಸಂಪೂರ್ಣ ಮಾಹಿತಿ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಜಲಾಶಯಗಳ ಮಟ್ಟ

[ad_1]

Last Updated:

ಆಗಸ್ಟ್ 30, 2026ರ ವೇಳೆಗೆ ಕರ್ನಾಟಕದ 14 ಪ್ರಮುಖ ಜಲಾಶಯಗಳಲ್ಲಿ ಒಟ್ಟು 690.73 ಟಿಎಂಸಿ ನೀರು ಸಂಗ್ರಹವಾಗಿದ್ದು, ಒಟ್ಟಾರೆ ಭರ್ತಿ ಪ್ರಮಾಣ ಶೇ.77ರಷ್ಟಿದೆ. ಕೃಷ್ಣಾ ಕೊಳ್ಳದ ಜಲಾಶಯಗಳು ಶೇ.92ರಷ್ಟು ಭರ್ತಿಯಾಗಿವೆ. ಆಲಮಟ್ಟಿ, ನಾರಾಯಣಪುರ ಹಾಗೂ ಘಟಪ್ರಭಾ ಜಲಾಶಯಗಳು ಶೇ.100ರಷ್ಟು ನೀರು ಹೊಂದಿವೆ. ಕಾವೇರಿ ಕೊಳ್ಳದ ಜಲಾಶಯಗಳು ಶೇ.71 ಮತ್ತು ಹೈಡಲ್ ಜಲಾಶಯಗಳು ಶೇ.61ರಷ್ಟು ಭರ್ತಿಯಾಗಿವೆ.

ಜಲಾಶಯಗಳ ಮಟ್ಟ
ಜಲಾಶಯಗಳ ಮಟ್ಟ

ಬೆಂಗಳೂರು: ಕರ್ನಾಟಕದ ಪ್ರಮುಖ ಜಲಾಶಯಗಳ (Reservoirs) ಆಗಸ್ಟ್ 30ರ ನೀರಿನ ಮಟ್ಟ, ಸಂಗ್ರಹ, ಒಳಹರಿವು ಮತ್ತು ಹೊರಹರಿವಿನ ಚಿತ್ರಣ ಬಿಡುಗಡೆಯಾಗಿದ್ದು, ರಾಜ್ಯದ ಹಲವು ಜಲಾಶಯಗಳು ಉತ್ತಮ ಸಂಗ್ರಹ ಕಾಯ್ದುಕೊಂಡಿವೆ. 14 ಪ್ರಮುಖ ಜಲಾಶಯಗಳ ಒಟ್ಟು ಸಾಮರ್ಥ್ಯ 895.65 ಟಿಎಂಸಿ ಇದ್ದು, ಸದ್ಯ 690.73 ಟಿಎಂಸಿ ನೀರು ಸಂಗ್ರಹವಾಗಿದೆ. ಒಟ್ಟಾರೆ ಭರ್ತಿ ಪ್ರಮಾಣ (Level)  ಶೇ.77ರಷ್ಟಿದೆ. ಇನ್ನು ಆಲಮಟ್ಟಿ, ಘಟಪ್ರಭಾ ಹಾಗೂ ನಾರಾಯಣಪುರ ಜಲಾಶಯಗಳು ಶೇ.100ರಷ್ಟು ಭರ್ತಿಯಾಗಿವೆ. ಒಟ್ಟು 14 ಜಲಾಶಯಗಳಿಗೆ ಇಂದು 71,866 ಕ್ಯುಸೆಕ್ ಒಳಹರಿವು ಇದ್ದರೆ, 63,082 ಕ್ಯುಸೆಕ್ ಹೊರಹರಿವು ದಾಖಲಾಗಿದೆ.

[ad_2]

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports