Karnataka Dam Water Level: ನಿಮ್ಮ ಜಿಲ್ಲೆಯ ಡ್ಯಾಂನಲ್ಲಿ ಎಷ್ಟು ನೀರು ಸಂಗ್ರಹವಾಗಿದೆ? ಎಲ್ಲಾ ಪ್ರಮುಖ ಜಲಾಶಯಗಳ ಲೈವ್ ನೀರಿನ ಮಟ್ಟ ಒಂದೇ ಕ್ಲಿಕ್‌ನಲ್ಲಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಜಲಾಶಯದ ಮಟ್ಟ


Last Updated:

ಕರ್ನಾಟಕದ ಪ್ರಮುಖ ಜಲಾಶಯಗಳ ಜುಲೈ 19ರ ನೀರಿನ ಮಟ್ಟ ಪ್ರಕಟವಾಗಿದೆ. ಕೆಆರ್‌ಎಸ್, ಕಬಿನಿ, ಹೇಮಾವತಿ, ಆಲಮಟ್ಟಿ, ತುಂಗಭದ್ರಾ ಸೇರಿದಂತೆ ಎಲ್ಲಾ ಪ್ರಮುಖ ಡ್ಯಾಂಗಳ ಇಂದಿನ ಸಂಪೂರ್ಣ ವರದಿ ಇಲ್ಲಿದೆ.

ಜಲಾಶಯದ ಮಟ್ಟ
ಜಲಾಶಯದ ಮಟ್ಟ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ (Monsoon) ಕೆಲ ಜಿಲ್ಲೆಗಳಲ್ಲಿ ಉತ್ತಮವಾಗಿದ್ದರೆ, ಇನ್ನೂ ಕೆಲವು ಭಾಗಗಳಲ್ಲಿ ಮಳೆಯ ಕೊರತೆ ಮುಂದುವರಿದಿದೆ. ಅದರ ಪರಿಣಾಮ ಪ್ರಮುಖ ಜಲಾಶಯಗಳ (Reservoir) ನೀರಿನ ಮಟ್ಟದಲ್ಲೂ ಸ್ಪಷ್ಟವಾಗಿ ಕಾಣಿಸುತ್ತಿದೆ. ಜುಲೈ 19ರ ಅಂಕಿ-ಅಂಶಗಳ ಪ್ರಕಾರ, ಉತ್ತರ ಕರ್ನಾಟಕದ ಕೆಲವು ಜಲಾಶಯಗಳು ಉತ್ತಮ ಪ್ರಮಾಣದ ನೀರು ಸಂಗ್ರಹಿಸಿಕೊಂಡಿದ್ದರೆ, ದಕ್ಷಿಣ ಕರ್ನಾಟಕದ ಕೆಲವು ಪ್ರಮುಖ ಅಣೆಕಟ್ಟುಗಳು ಇನ್ನೂ ನಿರೀಕ್ಷಿತ ಮಟ್ಟ ತಲುಪಿಲ್ಲ.

ಭರ್ತಿಯತ್ತ ಸಾಗುತ್ತಿರುವ ಪ್ರಮುಖ ಜಲಾಶಯಗಳು

ಈ ಬಾರಿಯ ಪಟ್ಟಿಯಲ್ಲಿ ವಾಣಿವಿಲಾಸ ಸಾಗರ ಶೇ. 78.80 ನೀರು ಸಂಗ್ರಹಿಸಿಕೊಂಡು ಅಗ್ರಸ್ಥಾನದಲ್ಲಿದೆ. ಅದರ ಬೆನ್ನಲ್ಲೇ ಲೋಯರ್ ಮುಲ್ಲಾಮಾರಿ (75.28%) ಹಾಗೂ ಆಲಮಟ್ಟಿ ಅಣೆಕಟ್ಟು (75.22%) ಉತ್ತಮ ಸಂಗ್ರಹದೊಂದಿಗೆ ಮುನ್ನಡೆಯಲ್ಲಿವೆ. ಹಾರಂಗಿ ಅಣೆಕಟ್ಟು ಕೂಡ ಶೇ. 70.20 ನೀರು ಸಂಗ್ರಹಿಸಿಕೊಂಡಿದ್ದು, ಕೊಡಗು ಭಾಗದ ಉತ್ತಮ ಮಳೆಯ ಪರಿಣಾಮ ಗೋಚರಿಸುತ್ತಿದೆ.

60%ಕ್ಕಿಂತ ಹೆಚ್ಚು ನೀರು ಇರುವ ಜಲಾಶಯಗಳು

  1. ವಾಣಿವಿಲಾಸ ಸಾಗರ – 78.80%
  2. ಲೋಯರ್ ಮುಲ್ಲಾಮಾರಿ – 75.28%
  3. ಆಲಮಟ್ಟಿ – 75.22%
  4. ಹಾರಂಗಿ– 70.20%
  5. ಬೆನ್ನಿಥೋರಾ – 66.00%
  6. ಕಬಿನಿ – 63.39%
  7. ಹೇಮಾವತಿ – 60.63%

ಮಧ್ಯಮ ಮಟ್ಟದಲ್ಲಿರುವ ಜಲಾಶಯಗಳು

  1. ನಾರಾಯಣಪುರ – 58.62%
  2. ಗಂಡೋರಿನಾಲಾ – 57.02%
  3. ಅಮರ್ಜಾ – 55.85%
  4. ಭದ್ರಾ – 46.10%
  5. ಹಿಡ್ಕಲ್ – 43.01%
ಇನ್ನೂ ಕಡಿಮೆ ನೀರಿನ ಸಂಗ್ರಹ ಹೊಂದಿರುವ ಅಣೆಕಟ್ಟುಗಳು
  1. ಕೆಆರ್‌ಎಸ್ – 35.74%
  2. ಮಲಪ್ರಭಾ – 33.39%
  3. ಚಂದ್ರಂಪಳ್ಳಿ – 33.77%
  4. ಅಪರ್ ಮುಲ್ಲಾಮಾರಿ – 27.23%
  5. ತುಂಗಭದ್ರಾ – 24.56%
  6. ಹಟ್ಟಿಕುಣಿ – 24.71%
  7. ಸೌದಗರ್ – 22.64%
  8. ಭೀಮಾ ಲಿಫ್ಟ್ – 6.72%
ಒಳಹರಿವು ಹೆಚ್ಚು ಇರುವ ಜಲಾಶಯಗಳು

ಮಳೆಯ ಪರಿಣಾಮ ಕೆಲವು ಜಲಾಶಯಗಳಿಗೆ ಉತ್ತಮ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

  1. ಆಲಮಟ್ಟಿ – ಒಳಹರಿವು 40,559 ಕ್ಯೂಸೆಕ್
  2. ಹಿಡಕಲ್ – 11,141 ಕ್ಯೂಸೆಕ್
  3. ನಾರಾಯಣಪುರ – 7,503 ಕ್ಯೂಸೆಕ್
  4. ಹಾರಂಗಿ – 2,738 ಕ್ಯೂಸೆಕ್
  5. ಭದ್ರಾ – 2,478 ಕ್ಯೂಸೆಕ್
  6. ಹೇಮಾವತಿ – 1,479 ಕ್ಯೂಸೆಕ್
  7. ತುಂಗಭದ್ರಾ – 1,137 ಕ್ಯೂಸೆಕ್ ‌
  8. ಕೆಆರ್‌ಎಸ್ – 1,085 ಕ್ಯೂಸೆಕ್

ಮುಖ್ಯಾಂಶಗಳು

ಇದನ್ನೂ ಓದಿ: Dam Water Level: ನಿಮ್ಮೂರಿನ ಡ್ಯಾಂ ಭರ್ತಿಯಾಗಿದೆಯೇ? ಇಲ್ಲಿದೆ ಇಂದಿನ ನೀರಿನ ಮಟ್ಟದ ಲೈವ್ ರಿಪೋರ್ಟ್!

ಕರ್ನಾಟಕದ ಪ್ರಮುಖ ಹೈಡೆಲ್ ಜಲಾಶಯಗಳಾದ ಲಿಂಗನಮಕ್ಕಿ ಮತ್ತು ಸುಪಾ ಜಲಾಶಯಗಳಿಗೆ  ಮಳೆಯಿಂದಾಗಿ ಉತ್ತಮ ಒಳಹರಿವು ಕಂಡುಬಂದಿದ್ದರೂ, ಇವು ಇನ್ನೂ ಪೂರ್ಣ ಸಾಮರ್ಥ್ಯವನ್ನು ತಲುಪಿಲ್ಲ. ಲಿಂಗನಮಕ್ಕಿ ಜಲಾಶಯದ ಒಟ್ಟು ಸಾಮರ್ಥ್ಯ 151.75 TMC ಆಗಿದ್ದು, ಸದ್ಯಕ್ಕೆ 30.84 TMC (ಶೇ. 20 ರಷ್ಟು) ನೀರು ಸಂಗ್ರಹವಾಗಿದೆ. ಇದರ ಪ್ರಸ್ತುತ ನೀರಿನ ಮಟ್ಟ 537.29 ಮೀಟರ್ (1762.85 ಅಡಿ) ಇದ್ದು, ಇದು ಕಳೆದ ವರ್ಷದ ಇದೇ ದಿನದ ಮಟ್ಟಕ್ಕೆ (1802.60 ಅಡಿ) ಹೋಲಿಸಿದರೆ ಕಡಿಮೆಯಾಗಿದೆ. ಈ ಜಲಾಶಯಕ್ಕೆ ಸದ್ಯ 15,205 ಕ್ಯೂಸೆಕ್ ಒಳಹರಿವು ಇದ್ದು, 5,310 ಕ್ಯೂಸೆಕ್ ಹೊರಹರಿವು ಇದೆ.ಮತ್ತೊಂದೆಡೆ, ಸುಪಾ ಜಲಾಶಯದ ಒಟ್ಟು ಸಾಮರ್ಥ್ಯ 145.33 TMC ಆಗಿದ್ದು, ಪ್ರಸ್ತುತ 37.52 TMC (ಶೇ. 26 ರಷ್ಟು) ನೀರು ಸಂಗ್ರಹವಾಗಿದೆ. ಈ ಜಲಾಶಯದ ಸದ್ಯದ ಮಟ್ಟ 529.45 ಮೀಟರ್ (1737.13 ಅಡಿ) ಇದ್ದು, ಕಳೆದ ವರ್ಷ ಇದೇ ದಿನ 1793.10 ಅಡಿಯಷ್ಟಿತ್ತು. ಸುಪಾ ಜಲಾಶಯಕ್ಕೆ 13,973 ಕ್ಯೂಸೆಕ್ ಒಳಹರಿವು ಹಾಗೂ 3,961 ಕ್ಯೂಸೆಕ್ ಹೊರಹರಿವು ದಾಖಲಾಗಿದೆ. ಒಟ್ಟಾರೆಯಾಗಿ ಲಿಂಗನಮಕ್ಕಿ, ಸುಪಾ ಮತ್ತು ವರಾಹಿ ಸೇರಿದಂತೆ ರಾಜ್ಯದ ಹೈಡೆಲ್ ಜಲಾಶಯಗಳಲ್ಲಿ ಸದ್ಯಕ್ಕೆ ಶೇ. 23 ರಷ್ಟು ನೀರಿನ ಸಂಗ್ರಹವಿದ್ದು, ಒಳಹರಿವು ಸಕ್ರಿಯವಾಗಿದೆ. ಅಂದು ರಾಜ್ಯದ ಒಟ್ಟು ಇನ್‌ಫ್ಲೋ 4.5 TMC ಆಗಿದ್ದು, ಅದರಲ್ಲಿ ಹೈಡೆಲ್ ಜಲಾಶಯಗಳಿಗೆ 2.7 TMC, ಕಾವೇರಿ ಜಲಾನಯನ ಪ್ರದೇಶಕ್ಕೆ 0.5 TMC ಮತ್ತು ಕೃಷ್ಣಾ ಜಲಾನಯನ ಪ್ರದೇಶಕ್ಕೆ 1.3 TMC ನೀರು ಹರಿದುಬಂದಿದೆ.

ಅತಿ ಹೆಚ್ಚು ನೀರಿನ ಮಟ್ಟ: ವಾಣಿವಿಲಾಸ ಸಾಗರ (78.80%) ಆಲಮಟ್ಟಿ: 75.22% ಹಾರಂಗಿ: 70.20% ಕಬಿನಿ: 63.39% ಹೇಮಾವತಿ: 60.63% ಕೆಆರ್‌ಎಸ್: 35.74% ತುಂಗಭದ್ರಾ: 24.56% ಅತಿ ಕಡಿಮೆ ನೀರು: ಭೀಮಾ ಲಿಫ್ಟ್ (6.72%)

ರಾಜ್ಯದ ಬಹುತೇಕ ಜಲಾಶಯಗಳಿಗೆ ಇನ್ನೂ ಉತ್ತಮ ಮಳೆಯ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಮುಂಗಾರು ಚುರುಕುಗೊಂಡರೆ ದಕ್ಷಿಣ ಕರ್ನಾಟಕದ ಪ್ರಮುಖ ಅಣೆಕಟ್ಟುಗಳಾದ ಕೆಆರ್‌ಎಸ್, ಕಬಿನಿ ಮತ್ತು ಹೇಮಾವತಿ ಸೇರಿದಂತೆ ಹಲವು ಜಲಾಶಯಗಳ ನೀರಿನ ಮಟ್ಟದಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed