Karnataka Dam Water Level: ಘಟಪ್ರಭಾ 100% ಭರ್ತಿ; ಆಲಮಟ್ಟಿ 99% ನೀರು! ಕರ್ನಾಟಕದ ಯಾವ ಡ್ಯಾಂ ಎಷ್ಟು ತುಂಬಿದೆ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಜಲಾಶಯಗಳು


Last Updated:

ಕರ್ನಾಟಕದ ಪ್ರಮುಖ ಜಲಾಶಯಗಳ ಒಟ್ಟು 895.65 ಟಿಎಂಸಿ ಸಾಮರ್ಥ್ಯದಲ್ಲಿ 676.46 ಟಿಎಂಸಿ ನೀರು ಸಂಗ್ರಹವಾಗಿದೆ. ಆಲಮಟ್ಟಿ 99%, ಘಟಪ್ರಭಾ 100%, ನಾರಾಯಣಪುರ 98% ಇದ್ದರೆ ಕೆಆರ್‌ಎಸ್‌ನಲ್ಲಿ 62% ಹಾಗೂ ಲಿಂಗನಮಕ್ಕಿಯಲ್ಲಿ 56% ನೀರು ಇದೆ.

ಜಲಾಶಯಗಳು
ಜಲಾಶಯಗಳು

ಬೆಂಗಳೂರು: ಕರ್ನಾಟಕದ ಪ್ರಮುಖ ಜಲಾಶಯಗಳ (Dam) ನೀರಿನ ಮಟ್ಟದಲ್ಲಿ ಜಲಾನಯನ ಪ್ರದೇಶವಾರು ವ್ಯತ್ಯಾಸ ಕಂಡುಬಂದಿದೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ ರಾಜ್ಯದ 14 ಪ್ರಮುಖ ಜಲಾಶಯಗಳ ಒಟ್ಟು ಗರಿಷ್ಠ ಸಂಗ್ರಹ ಸಾಮರ್ಥ್ಯ 895.65 ಟಿಎಂಸಿ ಇದ್ದು, ಸದ್ಯ 676.46 ಟಿಎಂಸಿ ನೀರು (Water) ಸಂಗ್ರಹವಾಗಿದೆ. ಇದು ಒಟ್ಟು ಸಾಮರ್ಥ್ಯದ ಶೇ.76ರಷ್ಟಾಗಿದೆ. ಕಳೆದ ವರ್ಷದ ಇದೇ ದಿನಕ್ಕೆ ಈ 14 ಜಲಾಶಯಗಳಲ್ಲಿ 785.81 ಟಿಎಂಸಿ ನೀರು ಸಂಗ್ರಹವಾಗಿತ್ತು. ಅಂದರೆ ಕಳೆದ ವರ್ಷದ ಮಟ್ಟಕ್ಕೆ ಹೋಲಿಸಿದರೆ ಈ ಬಾರಿ ಒಟ್ಟು ಸಂಗ್ರಹ ಕಡಿಮೆಯಾಗಿದೆ. ಆದರೆ ಕೆಲವು ಜಲಾನಯನ ಪ್ರದೇಶಗಳ ಜಲಾಶಯಗಳು ಉತ್ತಮ ಸ್ಥಿತಿಯಲ್ಲಿದ್ದು, ಕೆಲವು ಜಲಾಶಯಗಳಲ್ಲಿ ಇನ್ನೂ ಹೆಚ್ಚು ನೀರು ತುಂಬಬೇಕಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed