Last Updated:
ಕರ್ನಾಟಕದಲ್ಲಿ ಮುಂಗಾರು ಮಳೆ ಮುಂದುವರಿದಿದ್ದು, ಪ್ರಮುಖ ಜಲಾಶಯಗಳು ಭರ್ತಿಯಾಗುವ ಹಂತದಲ್ಲಿವೆ. ಕಾವೇರಿ, ಕೃಷ್ಣಾ ಕೊಳ್ಳದ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.
ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆಯ (Rain) ಅಬ್ಬರ ಮುಂದುವರಿದಿದ್ದು, ರಾಜ್ಯದ ಜೀವನಾಡಿಗಳಾಗಿರುವ ಪ್ರಮುಖ ಜಲಾಶಯಗಳು (Reservoirs) ಭರ್ತಿಯಾಗುವ ಅಂಚಿಗೆ ತಲುಪಿವೆ. ಕಾವೇರಿ (Cauvery) ಮತ್ತು ಕೃಷ್ಣಾ ಕೊಳ್ಳದ ಪ್ರಮುಖ ಅಣೆಕಟ್ಟುಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ರೈತರಲ್ಲಿ (Farmer) ಮಂದಹಾಸ ಮೂಡಿಸಿದೆ. ಜಲಾಶಯಗಳು ಭರ್ತಿಯಾಗುತ್ತಿರುವ ಈ ಹೊತ್ತಿನಲ್ಲಿ, ನೀರಿನ ಒಳಹರಿವು ಹಾಗೂ ಸಂಗ್ರಹದ ಸಂಪೂರ್ಣ ಚಿತ್ರಣವು ಜಲಕ್ಷಾಮದ ಚಿಂತೆಯನ್ನು ದೂರ ಮಾಡಿದೆ.














