Last Updated:
ಕರಾವಳಿ ಚಿತ್ರದ ಹೊಸ ಸುದ್ದಿ ಹೊರ ಬಂದಿದೆ. ಇನ್ನು ಮೂರು ದಿನವೇ ಬಾಕಿ ಇದೆ. ಆಗಲೇ ಆ ಟ್ರೈಲರ್ ಹೊರಗೆ ಬರುತ್ತದೆ ಅಂತ ಚಿತ್ರ ತಂಡ ಅಧಿಕೃತವಾಗಿಯೇ ಹೇಳಿದೆ. ಅದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕರಾವಳಿ ಚಿತ್ರ (Karavali Movie) ಜುಲೈ-24 ರಂದು ರಿಲೀಸ್ ಆಗುತ್ತಿದೆ. ಈ ಚಿತ್ರ ಕನ್ನಡದ ಮತ್ತೊಂದು ನಿರೀಕ್ಷೆಯ ಚಿತ್ರವೇ ಆಗಿದೆ. ಈ ಸಿನಿಮಾದ ಹೊಸ ಸುದ್ದಿ ಒಂದು ಹೊರ ಬಂದಿದೆ. ಪ್ರಜ್ವಲ್ ದೇವರಾಜ್ (Prajwal Devaraj) ಜುಲೈ-4 ರಂದು ತಮ್ಮ ಜನ್ಮ ದಿನ (Birthday) ಆಚರಿಸಿಕೊಳ್ಳುತ್ತಾರೆ. ಆದರೆ, ಬೆಂಗಳೂರಿನಲ್ಲಿ ಇವರು ಇಲ್ಲದ ಕಾರಣ ಈ ವರ್ಷವೂ ಮನೆ ಮುಂದೆ ಸೆಲೆಬ್ರೇಷನ್ ಏನೂ ಇಲ್ಲ. ಇದರ ನಡುವೆ ಕರಾವಳಿ ಚಿತ್ರ (Karavali Cinema) ತಂಡ ಈ ದಿನ ಒಂದು ಮ್ಯಾಟರ್ ಹೇಳಿಕೊಂಡಿದೆ. ಅದು ಟ್ರೈಲರ್ ಮ್ಯಾಟರ್ ಅನ್ನೋದು ರಿವೀಲ್ ಆಗಿದೆ. ಅದರ ವಿವರ ಇಲ್ಲಿದೆ ಓದಿ.
ಪ್ರಜ್ವಲ್ ಲೈಫ್ನ ವಿಶೇಷ ಚಿತ್ರ
(ಚಿತ್ರ ಕೃಪೆ: ಪ್ರಜ್ವಲ್ ದೇವರಾಜ್ ಇನ್ಸ್ಟಾಗ್ರಾಮ್)
ಈ ಒಂದು ನಂಬಿಕೆಯನ್ನ ಚಿತ್ರದ ಪೋಸ್ಟರ್ಗಳು ಮೂಡಿಸಿವೆ. ಆದರೆ ಟ್ರೈಲರ್ ಅಲ್ಲಿ ಸಾಕಷ್ಟು ವಿಷಯ ಬಿಟ್ಟುಕೊಡ್ತಾರೆ ಅನಿಸುತ್ತದೆ. ಕಾರಣ, ಈ ಸಿನಿಮಾದ ರಿಲೀಸ್ ಕೂಡ ಸನಿಹಕ್ಕೆ ಬರ್ತಿದೆ.
ಜುಲೈ-24 ರಂದು ಚಿತ್ರ ರಿಲೀಸ್ ಆಗುತ್ತಿದೆ. ದೊಡ್ಡಮಟ್ಟದಲ್ಲಿ ಇದು ತೆರೆ ಕಾಣುತ್ತಿದೆ. ಪ್ಯಾನ್ ಇಂಡಿಯಾ ಅನ್ನುವ ಹಾಗೇನೆ ಇದೆ. ಚಿತ್ರದಲ್ಲಿ ವಿಷಯ ಇದೆ. ಅದಕ್ಕೇನೆ ಸಿನಿಮಾ ತಂಡ ಒಂದು ಮಾತು ಹೇಳಿಕೊಂಡಿದೆ.
ಈ ಚಿತ್ರವನ್ನ ನಾವು ಸು ಫ್ರಮ್ ಸೋ ಚಿತ್ರ ಬಂದ ಜುಲೈ-24 ರಂದು ಲಕ್ಕಿ ದಿನವೇ ರಿಲೀಸ್ ಮಾಡ್ತೀದ್ದೀವಿ ಅಂತ ಹೇಳಿಕೊಂಡಿದೆ. ವಾಪಸ್ ನಾವು ಟ್ರೈಲರ್ ವಿಚಾರಕ್ಕೆ ಬರೋದಾದ್ರೆ, ಈ ಟ್ರೈಲರ್ ಜುಲೈ-7 ರಂದು ರಿಲೀಸ್ ಆಗುತ್ತಿದೆ.
ಕರಾವಳಿ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ. ಇನ್ನು ಮೂರೇ ದಿನ ಇದೆ. ಈ ಮೂರು ದಿನಗಳು ಕಳೆದರೆ ಆಯಿತು. ಕರಾವಳಿ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ.
ಇನ್ನು 3 ದಿನ ಬಾಕಿ ಅಂತಿದೆ ಸಿನಿಮಾ ಟೀಮ್
ಆದರೆ, ಯಾವ ಹೊತ್ತಲ್ಲಿ ಈ ಟ್ರೈಲರ್ ರಿಲೀಸ್ ಆಗುತ್ತದೆ ಅಂತ ಹೇಳಿಕೊಂಡಿಲ್ಲ. ಬದಲಾಗಿ ಇನ್ನು ಮೂರು ದಿನ ಅಂತ ಹೇಳಿದೆ. ಇನ್ನು ಟೈಮ್ ಇದೆ ಅಲ್ಲವೇ? ಹಾಗಾಗಿಯೇ ಹೇಳಬಹುದು ಅಂತಲೂ ಗೆಸ್ ಮಾಡಬಹುದು.
ಗುರುದತ್ ಗಾಣಿಗ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಇವರೂ ಕರಾವಳಿ ಕಡೆಯವರೇ ಆಗಿದ್ದಾರೆ. ತಮ್ಮೂರಿನ ಕಡೆಯ ಕತೆ ಹೇಳುತ್ತಿದ್ದಾರೆ.
ಪ್ರಜ್ವಲ್ ದೇವರಾಜ್ ಚಿತ್ರ ಜೀವನದಲ್ಲಿ ಈ ರೀತಿಯ ಸಿನಿಮಾ ಮಾಡಿಯೇ ಇಲ್ಲ ಬಿಡಿ. ಹಾಗೆ ಇದು ಅತಿ ದೊಡ್ಡ ಚಿತ್ರವೇ ಆಗಿದೆ. ಇದಕ್ಕಾಗಿಯೇ ಪ್ರಜ್ವಲ್ ಸಾಕಷ್ಟು ಶ್ರಮಪಟ್ಟಿದ್ದಾರೆ. ಯಕ್ಷಗಾನದ ವೇಷ ತೊಟ್ಟು ಅಭಿನಯಿಸಿದ್ದಾರೆ.
ಈ ಒಂದು ಚಿತ್ರದಿಂದ ದೊಡ್ಡ ಸಕ್ಸಸ್ ಸಿಗುತ್ತದೆ ಅನ್ನುವ ನಿರೀಕ್ಷೆನೂ ಇದೆ. ಇನ್ನುಳಿದಂತೆ ಪ್ರಜ್ವಲ್ ದೇವರಾಜ್ ಎಲ್ಲೂ ಈ ಸಿನಿಮಾ ಕುರಿತು ಹೇಳಿಕೊಂಡಿಲ್ಲ. ಆದರೆ, ಈ ಸಿನಿಮಾ ಬಂದ್ಮೇಲೇನೆ ಎಲ್ಲವೂ ಹೇಳುತ್ತದೆ ಅನ್ನುವ ಅರ್ಥದಲ್ಲಿಯೇ ಸುಮ್ಮನೆ ಇದ್ದಾರೆ ಅನಿಸುತ್ತದೆ.
ಹಾಗೆ ಈ ಚಿತ್ರ ಜುಲೈ-24,07.2026 ರಂದು ತೆರೆಗೆ ಬರ್ತಿದೆ. ಆ ದಿನವೇ ನಾವು ಥಿಯೇಟರ್ ಅಲ್ಲಿ ಸಿಗೋಣ, ಬನ್ನಿ ಅಂತಲೂ ಈಗಾಗಲೇ ಹೇಳಿದ್ದಾರೆ ಅಂತಲೇ ಹೇಳಬಹುದು.
Bangalore [Bangalore],Bangalore,Karnataka
Jul 04, 2026 11:10 PM IST













