Karavali Movie: ಕರಾವಳಿ ಟ್ರೈಲರ್ ರಿಲೀಸ್! ಪ್ರಜ್ವಲ್ ಮಿಸ್ಸಿಂಗ್; ರಾಜ್ ಬಿ ಶೆಟ್ಟಿ ಹೈಲೈಟ್ | | ACTPnews

ಕರಾವಳಿ ಟ್ರೈಲರ್ ರಿಲೀಸ್; ಪ್ರಜ್ವಲ್ ಮಿಸ್ಸಿಂಗ್; ರಾಜ್ ಬಿ ಶೆಟ್ಟಿ ಹೈಲೈಟ್!


Last Updated:

ಕರಾವಳಿ ಚಿತ್ರದ ಟ್ರೈಲರ್ ಪ್ರಾಮಿಸಿಂಗ್ ಆಗಿದೆ. ಆದರೆ, ಇಲ್ಲಿ ಪ್ರಜ್ವಲ್ ಮಿಸಿಂಗ್ ಅನಿಸುತ್ತಾರೆ. ರಾಜ್ ಬಿ ಶೆಟ್ಟಿ ಹೈಲೈಟ್ ಆಗಿದ್ದಾರೆ ಅನಿಸುತ್ತದೆ. ಈ ಟ್ರೈಲರ್‌ನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕರಾವಳಿ ಟ್ರೈಲರ್ ರಿಲೀಸ್; ಪ್ರಜ್ವಲ್ ಮಿಸ್ಸಿಂಗ್; ರಾಜ್ ಬಿ ಶೆಟ್ಟಿ ಹೈಲೈಟ್!
ಕರಾವಳಿ ಟ್ರೈಲರ್ ರಿಲೀಸ್; ಪ್ರಜ್ವಲ್ ಮಿಸ್ಸಿಂಗ್; ರಾಜ್ ಬಿ ಶೆಟ್ಟಿ ಹೈಲೈಟ್!

ಕರಾವಳಿ ಚಿತ್ರದ ಟ್ರೈಲರ್ (Karavali Film Trailer) ಏನೋ ರಿಲೀಸ್ ಆಗಿದೆ. ಒಳ್ಳೆ ಕಂಟೆಂಟ್ ಕೂಡ ಇದೆ. ಆದರೆ, ಚಿತ್ರದ ನಾಯಕ ಪ್ರಜ್ವಲ್ ದೇವರಾಜ್ (Prajwal Devaraj) ಧ್ವನಿ ಮಿಸ್ ಆಗುತ್ತಿದೆ. ಈ ಚಿತ್ರದಲ್ಲಿ ಪಜ್ವಲ್ (Prajwal) ಇದ್ದಾರೋ ಇಲ್ವೋ ಅನ್ನುವ ಹಾಗೇನೆ ಟ್ರೈಲರ್ ಇದೆ. ಚಿತ್ರದ ನಾಯಕ ಪ್ರಜ್ವಲ್ಲಾ ಇಲ್ಲ ರಾಜ್ ಬಿ ಶೆಟ್ಟಿನಾ ಅನ್ನುವ ಹಾಗೇನೂ ಇದೆ. ಈ ಟ್ರೈಲರ್‌ನ (Trailer) ಇನ್ನಷ್ಟು ವಿವರ ಇಲ್ಲಿದೆ ನೋಡಿ.

ಪ್ರಜ್ವಲ್ ದೇವರಾಜ್ ಮಿಸ್ಸಿಂಗ್

ಕರಾವಳಿ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ನಾಯಕರಾಗಿದ್ದಾರೆ. ರಾಜ್ ಬಿ ಶೆಟ್ಟಿ ಈ ಚಿತ್ರದಲ್ಲಿ ಅತಿ ಪಾತ್ರ ಮಾಡಿದ್ದಾರೆ. ಆದರೆ, ಇದು ಮಹತ್ವದ ಪಾತ್ರವೇ ಆಗಿದೆ.
prajwal devaraj raj b shetty karavali movie trailer review

ಕರಾವಳಿ ಟ್ರೈಲರ್ ರಿಲೀಸ್; ಪ್ರಜ್ವಲ್ ಮಿಸ್ಸಿಂಗ್

ಈ ಸಿನಿಮಾದ ಟ್ರೈಲರ್ ಅಲ್ಲಿ ಪ್ರಜ್ವಲ್ ಮಿಸ್ ಆಗಿದ್ದಾರೆ. ಅಂದ್ರೆ ಅವರ ಧ್ವನಿ ಮಿಸ್ ಆಗಿದೆ. ಅವರ ಸೀನ್ ಬಂದ್ರೂ ಕೂಡ ಕನೆಕ್ಟ್ ಆಗೋದೇ ಇಲ್ಲ. ಕಾರಣ, ಈ ಒಂದು ಪಾತ್ರಕ್ಕೆ ಬೇರೆಯವರು ಡಬ್ಬಿಂಗ್ ಮಾಡಿದ್ದಾರೆ. ಇದರಿಂದ ಪ್ರಜ್ವಲ್ ಮಿಸ್ಸಿಂಗ್ ಆಗಿದ್ದಾರೆ.

ಕರಾವಳಿ ಚಿತ್ರದಲ್ಲಿ ಕಂಬಳದ ಕತೆ

ಕರಾವಳಿ ಚಿತ್ರದಲ್ಲಿ ಕಂಬಳ ಕತೆ ಇದೆ. ಕೋಣ ಓಡಿಸುವ ಥ್ರಿಲ್ ಇದೆ. ಆದರೆ, ಈ ಒಂದು ಚಿತ್ರದಲ್ಲಿ ಕಿಚ್ಚು ಮತ್ತು ಪ್ರತಿಷ್ಠೆಯ ವಿಚಾರವೂ ಇದೆ.

ಈ ಎಲ್ಲವೂ ಇರೋ ಚಿತ್ರದಲ್ಲಿ ನಾಯಕ ನಟ ಪ್ರಜ್ವಲ್ ಅದ್ಭುತವಾಗಿಯೇ ನಟಿಸಿದ್ದಾರೆ. ದೈವ ನರ್ತಕನ ರೀತಿನೇ ಕಾಣಿಸುತ್ತಾರೆ. ಯಕ್ಷಗಾನ ವೇಷದಲ್ಲೂ ವೈಬ್ರೇಷನ್ ಕ್ರಿಯೇಟ್ ಮಾಡಿದ್ದಾರೆ. ಆದರೆ, ಈ ಪಾತ್ರಕ್ಕೆ ಪ್ರಜ್ವಲ್ ಧ್ವನಿ ಇಲ್ವೇ ಇಲ್ಲ. ಇದರಿಂದ ಚಿತ್ರ ಟ್ರೈಲರ್ ನೋಡಿಯೇ ಫ್ಯಾನ್ಸ್ ಗರಂ ಆಗಿದ್ದಾರೆ.

ರಾಜ್ ಬಿ ಶೆಟ್ಟಿ ಪಾತ್ರವೇ ಹೈಲೈಟ್

ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಆದರೆ, ಟ್ರೈಲರ್ ಅಲ್ಲಿ ಇವರ ಪಾತ್ರವೇ ಹೈಲೈಟ್ ಅನಿಸುತ್ತದೆ.

prajwal devaraj raj b shetty karavali movie trailer review

ಈ ಒಂದು ಪಾತ್ರಕ್ಕೆ ಕನ್ನಡದ ಹೆಸರಾಂತ ನಟರನ್ನೆ ಕರೆತರುವ ಪ್ಲಾನ್ ಆಗಿತ್ತು. ಅವರು ಒಪ್ಪದೇ ಇದ್ದಾಗಲೇ ರಾಜ್ ಬಿ ಶೆಟ್ಟಿ ಅವರು ಚಿತ್ರದ ಈ ಮಹಾವೀರ ಅನ್ನುವ ರೋಲ್ ಮಾಡಿದರು. ಇದರಲ್ಲಿ ಇವರ ಪಾತ್ರ ಕೋಣಗಳ ಮೇಲಿನ ಅಪಾರ ಪ್ರೀತಿಯ ಕತೆ ಹೇಳುತ್ತದೆ. ಇದು ಅಷ್ಟೆ ಗಮನ ಸೆಳೆಯುವ ರೀತಿನೆ ಇದೆ.

ಜುಲೈ-24 ಕ್ಕೆ ಚಿತ್ರ ರಿಲೀಸ್

ಜುಲೈ-24 ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ದೊಡ್ಡಮಟ್ಟದಲ್ಲಿಯೇ ಈ ಚಿತ್ರ ತೆರೆಗೂ ಬರ್ತಿದೆ. ಅದಕ್ಕೂ ಮೊದಲೇ ಸಂಭಾವನೆ ವಿಚಾರದಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ನಿರ್ಮಾಪಕರ ನಡುವೆ ಗಲಾಟೆ ಆಗಿದೆ.

ಒಂದು ಕೋಟಿ ಸಂಭಾವನೆ ಕೊಟ್ಟ ಚಿತ್ರ ತಂಡ ಬಾಕಿ ಉಳಿದ 25 ಲಕ್ಷ ಕೊಟ್ಟಿಲ್ಲ. ಈ ಕಾರಣಕ್ಕೇನೆ ಈ ಚಿತ್ರಕ್ಕೆ ಪ್ರಜ್ವಲ್ ಡಬ್ಬಂಗ್ ಮಾಡಿಲ್ಲ. ಹಾಗಾಗಿಯೇ ಪ್ರಜ್ವಲ್ ದೇವರಾಜ್ ಪಾತ್ರಕ್ಕೆ ಬೇರೆಯವರು ಡಬ್ಬಿಂಗ್ ಮಾಡಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed