ಕಾಂತಾರ ಚಾಪ್ಟರ್ ಒನ್ ಚಿತ್ರ ಬಂದು ಒಂದು ವರ್ಷ ಆಗಿದೆ. ಕಳೆದ ವರ್ಷ 2025 ಅಕ್ಟೋಬರ್-03 ರಂದು ಈ ಚಿತ್ರ ತೆರೆ ಕಂಡಿತ್ತು. ಪ್ಯಾನ್ ಇಂಡಿಯಾ ಮಟ್ಟಕ್ಕೇನೆ ಈ ಚಿತ್ರ ರಿಲೀಸ್ ಆಗಿತ್ತು.
ಕಾಂತಾರ ಚಾಪ್ಟರ್ ಒನ್ ಚಿತ್ರಕ್ಕೆ ಒಂದು ವರ್ಷ ಪೂರ್ಣ
(ಚಿತ್ರ ಕೃಪೆ: ರಿಷಬ್ ಶೆಟ್ಟಿ ಇನ್‌ಸ್ಟಾಗ್ರಾಮ್)
The biggest challenge was to bring this prequel to an audience that had already showered Kantara with immense love. To give a prelude, go deeper into its roots, and tell a story that carries the soul of the land was both a responsibility and a privilege.
ಕಾಡಿನ ಸಂಸ್ಕೃತಿ ನಾಡಿಗೆ ಬಂದ ಕಥೆಯನ್ನು ಹೇಳುವ ಈ ಪ್ರಯತ್ನದಲ್ಲಿ, ನನ್ನ ಬೆನ್ನೆಲುಬಾಗಿ ನಿಂತ ನನ್ನ ತಂಡದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು.
The satisfaction I saw on the faces of the audience is still fresh in my mind. That moment, that silence, that applause, and the love that followed will always remain special to me.
ನಮ್ಮ ಮುಂದಿನ ಎಲ್ಲಾ ಪ್ರಯತ್ನಗಳಿಗೂ ನಿಮ್ಮ ಪ್ರೀತಿ, ಆಶೀರ್ವಾದ ಮತ್ತು ಬೆಂಬಲ ಹೀಗೆಯೇ ಇರಲಿ ಎಂದು ಆಶಿಸುತ್ತೇನೆ.
ಐದು ವರ್ಷ… ಎರಡು ಕಥೆ… ಒಂದು ಕನಸು …
(ಚಿತ್ರ ಕೃಪೆ: ರಿಷಬ್ ಶೆಟ್ಟಿ ಇನ್‌ಸ್ಟಾಗ್ರಾಮ್)
ಮರೆಯಲಾಗದ ಪಯಣ.
ಈ ಸಾಲುಗಳು ರಿಷಬ್ ಶೆಟ್ರು ಬರೆದುಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನ ತಮ್ಮ ಅಧಿಕೃತ ಪೇಜ್ ಅಲ್ಲಿಯೇ ಇದನ್ನ ಬರೆದುಕೊಂಡಿದ್ದಾರೆ.
ಈ ಚಿತ್ರದ ಮೇಕಿಂಗ್ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಚಿತ್ರ ಜೀವನದಲ್ಲಿ ಕಾಂತಾರ ವಿಶೇಷ ಚಿತ್ರವೇ ಆಗಿದೆ. ಅದಕ್ಕೇನೆ “ಐದು ವರ್ಷ…ಎರಡು ಕಥೆ…ಒಂದು ಕನಸು. ಮರೆಯಲಾಗದ ಪಯಣ” ಅಂತಲೇ ಬರೆದುಕೊಂಡಿದ್ದಾರೆ ಅಂತಲೇ ಹೇಳಬಹುದು.













