Free Bus: ಬಸ್ ಕಂಡಕ್ಟರ್ ಆದ ಸಿಎಂ ವಿಜಯ್! ತಮಿಳುನಾಡು ಮಹಿಳೆಯರಿಗೂ ಬಸ್ ಪ್ರಯಾಣ ಫ್ರೀ ಫ್ರೀ ಫ್ರೀ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮಹಿಳೆಯರಿಗೆ ಫ್ರೀ ಟಿಕೆಟ್ ಕೊಟ್ಟ ವಿಜಯ್


Last Updated:

Free Bus: ತಮಿಳುನಾಡಿನಲ್ಲೂ ಮಹಿಳೆಯರ ಓಡಾಟಕ್ಕೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಇತ್ತು. ಇದೀಗ ಇದರ ವಿಸ್ತೃತ ಯೋಜನೆಗೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಚಾಲನೆ ನೀಡಿದ್ದಾರೆ. ಚೆನ್ನೈನ ಕೊಯಂಬೇಡುವಿನಲ್ಲಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ವಿಸ್ತೃತ ವೆಟ್ರಿ ಯಾತ್ರಾ ಯೋಜನೆಯನ್ನು ಮುಖ್ಯಮಂತ್ರಿ ವಿಜಯ್ ಇಂದು ಉದ್ಘಾಟಿಸಿದರು.

ಮಹಿಳೆಯರಿಗೆ ಫ್ರೀ ಟಿಕೆಟ್ ಕೊಟ್ಟ ವಿಜಯ್
ಮಹಿಳೆಯರಿಗೆ ಫ್ರೀ ಟಿಕೆಟ್ ಕೊಟ್ಟ ವಿಜಯ್

ತಮಿಳುನಾಡು: ಕರ್ನಾಟಕದ ಸರ್ಕಾರಿ ಬಸ್ಸುಗಳಲ್ಲಿ (Free Bus) ಈಗಾಗಲೇ ಮಹಿಳೆಯರು (Women) ಉಚಿತವಾಗ ಓಡಾಡುತ್ತಾ ಇದ್ದಾರೆ. ಅತ್ತ ತಮಿಳುನಾಡಿನಲ್ಲೂ (Tamil Nadu) ಮಹಿಳೆಯರ ಓಡಾಟಕ್ಕೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಇತ್ತು. ಇದೀಗ ಇದರ ವಿಸ್ತೃತ ಯೋಜನೆಗೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ (Joseph Vijay) ಚಾಲನೆ ನೀಡಿದ್ದಾರೆ. ಚೆನ್ನೈನ (Chennai) ಕೊಯಂಬೇಡುವಿನಲ್ಲಿ (Koyambedu) ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ವಿಸ್ತೃತ ವೆಟ್ರಿ ಯಾತ್ರಾ (Vetri Yatra) ಯೋಜನೆಯನ್ನು ಮುಖ್ಯಮಂತ್ರಿ ವಿಜಯ್ ಇಂದು ಉದ್ಘಾಟಿಸಿದರು. ಸರ್ಕಾರಿ ಸಾರಿಗೆ ಇಲಾಖೆಯಿಂದ ಮುಖ್ಯಮಂತ್ರಿ ವಿಜಯ್ ಅವರಿಗೆ ಸ್ಮರಣಿಕೆಯನ್ನು ಸಹ ನೀಡಲಾಯಿತು.

ಎಕ್ಸ್‌ಪ್ರೆಸ್, ಎಲ್‌ಎಸ್‌ಎಸ್ ಮತ್ತು ಡಿಲಕ್ಸ್ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ

ಹಿಂದಿನ ಡಿಎಂಕೆ ಆಡಳಿತದ ಅವಧಿಯಲ್ಲಿ ಮಹಿಳೆಯರು ಸಾಮಾನ್ಯ ನಗರ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ‘ಮಹಿಳಾ ಉದಯ ಪ್ರಯಾಣ ಯೋಜನೆ’ಯನ್ನು ಪರಿಚಯಿಸಲಾಗಿತ್ತು. ಈ ಯೋಜನೆಯ ವಿಸ್ತರಣೆಯಾಗಿ, ಮುಖ್ಯಮಂತ್ರಿ ವಿಜಯ್ ಅವರು ಎಕ್ಸ್‌ಪ್ರೆಸ್, ಎಲ್‌ಎಸ್‌ಎಸ್ ಮತ್ತು ಡಿಲಕ್ಸ್ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಡಲು ವೆಟ್ರಿ ಯಾತ್ರಾ ಯೋಜನೆಯನ್ನು ವಿಧಾನಸಭೆಯಲ್ಲಿ ಘೋಷಿಸಿದ್ದರು.

ಇಂದು ಚಾಲನೆ ನೀಡಿದ ಸಿಎಂ ವಿಜಯ್

ಮುಖ್ಯಮಂತ್ರಿ ವಿಜಯ್ ಇಂದು ಚೆನ್ನೈನ ಕೊಯಂಬೇಡುವಿನಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಪ್ರತಿದಿನ ಸುಮಾರು 84 ಲಕ್ಷ ಮಹಿಳೆಯರು ಮತ್ತು ಟ್ರಾನ್ಸ್‌ಜೆಂಡರ್‌ಗಳು ಈ ಯೋಜನೆಯ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ಅದರಂತೆ, ಮಹಿಳೆಯರು, ಹುಡುಗಿಯರು ಮತ್ತು ಟ್ರಾನ್ಸ್‌ಜೆಂಡರ್‌ಗಳು ಮೆಟ್ರೋಪಾಲಿಟನ್, ನಗರ, ಎಕ್ಸ್‌ಪ್ರೆಸ್, ಡಿಲಕ್ಸ್, ಉಪನಗರ ಮತ್ತು ಗುಡ್ಡಗಾಡು ಸಾಮಾನ್ಯ ದರದ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಘೋಷಿಸಲಾಗಿದೆ.

ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ

ಆದಾಯ ಮಿತಿ ಅಥವಾ ಪ್ರಯಾಣದ ಸಂಖ್ಯೆಯ ಮೇಲೆ ಯಾವುದೇ ನಿರ್ಬಂಧವಿಲ್ಲದೆ ಮಹಿಳೆಯರು ಪ್ರಯೋಜನ ಪಡೆಯುವಂತೆ ಎಲ್ಲರಿಗೂ ‘ಝೀರೋ ಟಿಕೆಟ್’ ಒದಗಿಸಲಾಗುವುದು ಎಂದು ತಿಳಿಸಲಾಗಿದೆ. ಉದ್ಘಾಟನೆ ಅಂಗವಾಗಿ ಮುಖ್ಯಮಂತ್ರಿ ವಿಜಯ್ ಅವರು ಚೆನ್ನೈನ ಕೊಯಂಬೇಡುವಿನಲ್ಲಿ ಉಚಿತ ಟಿಕೆಟ್‌ಗಳನ್ನು ನೀಡುವ ಮೂಲಕ ವೆಟ್ರಿ ಯಾತ್ರಾ ಯೋಜನೆಯನ್ನು ಪ್ರಾರಂಭಿಸಿದರು. ಈ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ವಿಜಯ್ ತಮಿಳನ್ ಪಾರ್ಥಿಬನ್ ಉಪಸ್ಥಿತರಿದ್ದರು.

ವಿಜಯ್‌ಗೆ ಸಿಹಿ ಹಂಚಿ ನಾರಿಯರ ಸಂಭ್ರಮ

ಈ ವೇಳೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರು ಸಿಹಿತಿಂಡಿಗಳನ್ನು ನೀಡುವ ಮೂಲಕ ಮುಖ್ಯಮಂತ್ರಿ ವಿಜಯ್‌ಗೆ ಧನ್ಯವಾದ ಅರ್ಪಿಸಿದರು. ಇದಲ್ಲದೆ, ಮಹಿಳೆಯರು ಮತ್ತು ಟ್ರಾನ್ಸ್‌ಜೆಂಡರ್‌ಗಳಿಂದ ಶುಲ್ಕ ವಿಧಿಸದಂತೆ ಮತ್ತು ಬಸ್ ನಿಲ್ದಾಣಗಳಲ್ಲಿ ಬಸ್‌ಗಳನ್ನು ಸರಿಯಾಗಿ ನಿಲ್ಲಿಸಿ ಕಾರ್ಯಾಚರಣೆ ಮಾಡುವಂತೆ ಕಂಡಕ್ಟರ್‌ಗಳು ಮತ್ತು ಚಾಲಕರಿಗೆ ಸೂಚನೆ ನೀಡಲಾಗಿದೆ.

ತಮಿಳುನಾಡಿನೊಳಗಿನ ಪ್ರಯಾಣ ಮಾತ್ರ ಉಚಿತ!

ಡಿಜಿಟಲ್ ರೂಟ್ ಬೋರ್ಡ್‌ಗಳನ್ನು ಹೊಂದಿರುವ ಬಸ್‌ಗಳು ‘ವೆಟ್ರಿ ಪಠಾಣ್’ ಅನ್ನು ಪ್ರದರ್ಶಿಸಬೇಕು. ಡಿಜಿಟಲ್ ಬೋರ್ಡ್‌ಗಳಿಲ್ಲದ ಬಸ್‌ಗಳು ಅನುಮೋದಿತ ‘ವೆಟ್ರಿ ಪಠಾಣ್’ ಸ್ಟಿಕ್ಕರ್‌ಗಳನ್ನು ಪ್ರದರ್ಶಿಸಬೇಕು ಅಂತ ಸರ್ಕಾರ ಸೂಚನೆ ನೀಡಿದೆ. ಅಂದಹಾಗೆ ತಮಿಳುನಾಡಿನೊಳಗಿನ ಪ್ರಯಾಣಕ್ಕೆ ಮಾತ್ರ ZERO ಟಿಕೆಟ್ ಮಾನ್ಯವಾಗಿರುತ್ತದೆ ಮತ್ತು ಮಹಿಳಾ ಪ್ರಯಾಣಿಕರ ಹತ್ತುವ ಅಥವಾ ಇಳಿಯುವ ಸ್ಥಳವು ನೆರೆಯ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿದ್ದರೆ, ಅದಕ್ಕೆ ಸಂಬಂಧಿಸಿದ ನಿಯಮಿತ ದರದ ಟಿಕೆಟ್ ಪಡೆಯಬೇಕು ಎಂದು ತಿಳಿಸಲಾಗಿದೆ. ದೂರುಗಳಿಗಾಗಿ ಟೋಲ್-ಫ್ರೀ ಸಂಖ್ಯೆ 149 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ

ಇನ್ನು ಉಪಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ, ಚೆಂಗಲ್ಪಟ್ಟು ಮತ್ತು ತಿರುಪ್ಪೂರು ಜಿಲ್ಲೆಗಳಲ್ಲಿ ಚುನಾವಣಾ ಕಾರ್ಯವಿಧಾನಗಳು ಪೂರ್ಣಗೊಳ್ಳುವವರೆಗೆ ಈ ಯೋಜನೆಯನ್ನು ಜಾರಿಗೆ ತರಲಾಗುವುದಿಲ್ಲ ಎಂದು ತಮಿಳುನಾಡು ಸರ್ಕಾರ ಸ್ಪಷ್ಟಪಡಿಸಿದೆ ಅಂತ ನ್ಯೂಸ್ 18 ತಮಿಳು ವರದಿ ಮಾಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed