Bigg Boss 13: ಇಬ್ಬರು ಹುಡುಗರನ್ನು ಹೊಡೆದು ಹೋಗೋದು; ಲಿಖಿತ್-ಮಂಜುಗೆ ಆಸಿಯಾ ಖಡಕ್ ಎಚ್ಚರಿಕೆ! | | ACTPnews

News18


Last Updated:

ಬಿಗ್ ಬಾಸ್ ಕನ್ನಡ ಸೀಸನ್ 13ರ (Bigg Boss Kannada Season 13) ದೊಡ್ಮನೆಯಲ್ಲಿ ದಿನದಿಂದ ದಿನಕ್ಕೆ ಜಗಳ, ವಾಗ್ವಾದ ಮತ್ತು ಮನಸ್ತಾಪಗಳು ಹೆಚ್ಚಾಗುತ್ತಿವೆ.

News18
News18

ಬಿಗ್ ಬಾಸ್ ಕನ್ನಡ ಸೀಸನ್ 13ರ (Bigg Boss Kannada Season 13) ದೊಡ್ಮನೆಯಲ್ಲಿ ದಿನದಿಂದ ದಿನಕ್ಕೆ ಜಗಳ,  ಮನಸ್ತಾಪಗಳು ಹೆಚ್ಚಾಗುತ್ತಿವೆ. ಸ್ಪರ್ಧಿಗಳ ನಡುವಿನ ಸಣ್ಣಪುಟ್ಟ ಮಾತುಕತೆಗಳು ಕೆಲವೊಮ್ಮೆ ದೊಡ್ಡ ಮಟ್ಟದ ಗಲಾಟೆಗೆ ಕಾರಣವಾಗುತ್ತಿವೆ. ಇದೀಗ ಆಸಿಯಾ ಕೋಪ ನೆತ್ತಿಗೇರಿರುವ ಪ್ರೋಮೋವೊಂದು ಗಮನ ಸೆಳೆದಿದೆ. ಲಿಖಿತ್ ಹಾಗೂ ಮಂಜ ವರ್ತನೆಯಿಂದ ಬೇಸರಗೊಂಡ ಆಸಿಯಾ, ಇಬ್ಬರಿಗೂ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಅಕ್ಟೋಬರ್ 2ರ ಬಿಗ್ ಬಾಸ್ ಕನ್ನಡ ಸೀಸನ್ 13ರ ಸಂಚಿಕೆಗೆ ಸಂಬಂಧಿಸಿದ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಲಿಖಿತ್ , ಆಸಿಯಾನ ಪದೇಪದೆ ಅಣಕಿಸುವ ರೀತಿಯಲ್ಲಿ ವರ್ತಿಸುತ್ತಿರುವುದು ಕಂಡುಬಂದಿದೆ. ಆರಂಭದಲ್ಲಿ ಆಸಿಯಾ, ತಮ್ಮನ್ನು ರೇಗಿಸುವುದನ್ನು ನಿಲ್ಲಿಸುವಂತೆ ಹೇಳುತ್ತಾರೆ.

ಆದರೆ ಆಸಿಯಾ ಮಾತನ್ನು ಲಿಖಿತ್ ಕೇಳಿಸಿಕೊಳ್ಳದೆ ಅದೇ ರೀತಿಯ ವರ್ತಿಸುತ್ತಾರೆ. ಇದರಿಂದ ನಿಧಾನವಾಗಿ ಅಸಮಾಧಾನಗೊಂಡ ಆಸಿಯಾ ಕೋಪ ಹೆಚ್ಚಾಗುತ್ತದೆ. ಲಿಖಿತ್ ತಮ್ಮನ್ನು ಕೆಣಕುತ್ತಿರುವುದನ್ನು ಕಂಡು ನೇರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಜೊತೆಗೆ ಒಂದೇ ವಿಚಾರ ಪದೇಪದೆ ನಡೆಯುತ್ತಿರುವುದರಿಂದ ಬೇಸರಗೊಂಡ ಆಸಿಯಾ, ಕುಳಿತಿದ್ದ ಜಾಗದಿಂದ ಎದ್ದು ಲಿಖಿತ್ ಬಳಿ ಹೋಗಿ, ಮುಚ್ಕೊಂಡ್ ಇದ್ರೆ ಸರಿ ಇವಾಗ ಎಂದು ಖಡಕ್ ಆಗಿ ಎಚ್ಚರಿಕೆ ನೀಡುತ್ತಾರೆ.

ಲಿಖಿತ್ ಮಾತ್ರವಲ್ಲದೆ ಮಂಜ ಮಾತು ಮತ್ತು ವರ್ತನೆಯೂ ಆಸಿಯಾ ಕೋಪಕ್ಕೆ ಕಾರಣವಾಗುತ್ತದೆ. ಲಿಖಿತ್‌ಗೆ ಸಪೋರ್ಟ್ ಮಾಡುವ ಮಂಜ ಸೀಟಿ ಹೊಡೆಯುತ್ತಿರುವುದು ಪ್ರೋಮೋದಲ್ಲಿ ಕಾಣಿಸುತ್ತದೆ. ಇದರಿಂದ ಆಸಿಯಾ ಮತ್ತಷ್ಟು ಸಿಟ್ಟಾಗುತ್ತಾರೆ.

ಜಗಳದ ನಡುವೆ ಆಸಿಯಾ ನೀಡಿರುವ ಹೇಳಿಕೆ ಇದೀಗ ಪ್ರೋಮೋದ ಪ್ರಮುಖ ಹೈಲೈಟ್ ಆಗಿದೆ. ನಾನು ಈ ಮನೆಯಿಂದ ಹೊರಗಡೆ ಹೋದರೂ ಪರವಾಗಿಲ್ಲ. ಇಬ್ಬರು ಹುಡುಗರನ್ನು ಹೊಡೆದು ಹೋದೆ ಅಂತ ಆಗಲಿ ಎನ್ನುತ್ತಾ ಆವಾಜ್ ಹಾಕಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭವಾದ ಬಳಿಕ ಸ್ಪರ್ಧಿಗಳ ನಡುವೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ವಾದ-ವಿವಾದಗಳು ನಡೆಯುತ್ತಿವೆ. ಇದೀಗ ಆಸಿಯಾ, ಲಿಖಿತ್ ಮತ್ತು ಮಂಜ ನಡುವಿನ ಈ ಮಾತಿನ ಚಕಮಕಿ ಮತ್ತೊಂದು ಪ್ರಮುಖ ಜಗಳವಾಗಿ ಬದಲಾಗುವ ಸಾಧ್ಯತೆ ಪ್ರೋಮೋದಲ್ಲಿ ಕಾಣಿಸುತ್ತಿದೆ.

ಆಸಿಯಾ ಕೋಪಕ್ಕೆ ಲಿಖಿತ್ ಮತ್ತು ಮಂಜ ಹೇಗೆ ಪ್ರತಿಕ್ರಿಯಿಸುತ್ತಾರೆ, ಈ ಜಗಳವನ್ನು ಬಿಗ್ ಬಾಸ್ ಹೇಗೆ ನಿಭಾಯಿಸುತ್ತಾರೆ ಮತ್ತು ಉಳಿದ ಸ್ಪರ್ಧಿಗಳು ಯಾರ ಪರ ನಿಲ್ಲುತ್ತಾರೆ ಎಂಬುದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed