Kannada Movies: ಈ ವಾರ ಸಿನಿಮಾ ರಸಿಕರಿಗೆ ಭರ್ಜರಿ ಮನರಂಜನೆ! 4 ಚಿತ್ರಗಳು ಒಂದೇ ವಾರದಲ್ಲಿ ರಿಲೀಸ್ | | ACTPnews

Srimathi Sindhura Jolly Tadvirudha Sarkari Nyaya Bele Angadi Movies are Release this week


ಸರ್ಕಾರಿ ನ್ಯಾಯ ಬೆಲೆ ಅಂಗಡಿ..

ಕುಮಾರ್ ಬಂಗಾರಪ್ಪ ಅಭಿನಯದ ಚಿತ್ರ ಈ ವಾರ 31 ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಮೂಲಕ ಕುಮಾರ್ ಬಂಗಾರಪ್ಪ ನಾಯಕರಾಗಿದ್ದಾರೆ. ದರ್ಶನ್ ಅಭಿನಯದ ಚಕ್ರವರ್ತಿ ಚಿತ್ರದಲ್ಲಿ ಪ್ರಮುಖ ರೋಲ್ ಮಾಡಿದ್ದರು.
ತದ್ವಿರುದ್ಧ ಸಿನಿಮಾ

ಈ ಚಿತ್ರ ಆದ್ಮೇಲೆ ಈಗಲೇ ಕುಮಾರ್ ಬಂಗಾರಪ್ಪ ಬಣ್ಣ ಹಚ್ಚಿದ್ದಾರೆ. ಈ ಚಿತ್ರವನ್ನ ಸಾತ್ವಿಕ್ ಪವನ್ ಕುಮಾರ್ ಡೈರೆಕ್ಷನ್ ಮಾಡಿದ್ದಾರೆ. ಈ ಹಿಂದೆ ಇವರು ತಾಯವ್ವ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದರು.

ಈ ಚಿತ್ರಕ್ಕೆ ಕ್ಯಾಮರಾವರ್ಕ್ ಪ್ಲಸ್ ಡೈರೆಕ್ಷನ್ ಮಾಡಿದ್ದಾರೆ. ಬಿ.ರಾಮೂರ್ತಿ ಅವರು ಈ ಚಿತ್ರಕ್ಕೆ ಕತೆ, ಚಿತ್ರಕತೆ ಮತ್ತು ಸಂಭಾಷಣೆ ಬರೆದಿದ್ದಾರೆ.

ಶ್ರೀಮತಿ ಸಿಂಧೂರ

ವಿಜಯ್‌ ರಾಘವೇಂದ್ರ ಅಭಿನಯದ ಶ್ರೀಮತಿ ಸಿಂಧೂರ ಚಿತ್ರವೂ ಈ ವಾರ ತೆರೆ ಕಾಣುತ್ತಿದೆ. ಈ ಚಿತ್ರದಲ್ಲಿ ವಿಜಯ್‌ ರಾಘವೇಂದ್ರ ಅವರಿಗೆ ಪ್ರಿಯಾ ಹೆಗ್ಡೆ ಜೋಡಿ ಆಗಿದ್ದಾರೆ.

ಈ ಚಿತ್ರದ ಪ್ರಚಾರವು ಒಂದು ಹಂತಕ್ಕೆ ಆಗಿದೆ. ಶ್ರೀಮತಿ ಸಿಂಧೂರ ಹೆಸರಿನ ಸಿನಿಮಾ ಬರ್ತಿದೆ ಅನ್ನೋದು ಗೊತ್ತಾಗಿದೆ. ಚಾನೆಲ್‌ಗಳ ಸಂದರ್ಶನ ಮತ್ತು ಪ್ರೆಸ್‌ ಮೀಟ್‌ಗಳಲ್ಲಿ ಚಿತ್ರ ತಂಡ ತಮ್ಮ ಈ ಸಿನಿಮಾದ ಕುರಿತು ಮಾಹಿತಿ ಕೊಟ್ಟಿದೆ.

Srimathi Sindhura Jolly Tadvirudha Sarkari Nyaya Bele Angadi Movies are Release this week

ಶ್ರೀಮತಿ ಸಿಂಧೂರ
ಅನಂತ್ ರಾಜು ಡೈರೆಕ್ಟರ್

ಶ್ರೀಮತಿ ಸಿಂಧೂರ ಚಿತ್ರವನ್ನ ಅನಂತ್ ರಾಜು ಡೈರೆಕ್ಷನ್ ಮಾಡಿದ್ದಾರೆ. ರಾಜೇಶ್ ರಾಮನಾಥ್ ಸಂಗೀತದಲ್ಲಿ ಚಿತ್ರದ ಹಾಡುಗಳು ಮೂಡಿ ಬಂದಿವೆ.

ಈ ಚಿತ್ರ ಅಲ್ಲದೆ ಕನ್ನಡದಲ್ಲಿ ಈ ವಾರ ಜಾಲಿ ಅನ್ನುವ ಸಿನಿಮಾ ಕೂಡ ಬರ್ತಿದೆ. ಈ ಚಿತ್ರವನ್ನ ತಾರುಷ್ ಡೈರೆಕ್ಷನ್ ಮಾಡಿದ್ದಾರೆ. ಯೋಗೇಶ್ವರ್ ಆರ್ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ.

ನಿತಿನ್ ರಾಜ್ ಸಂಗೀತ ಮಾಡಿದ್ದಾರೆ. ಡೈರೆಕ್ಟರ್ ತಾರುಷ್ ಈ ಚಿತ್ರದ ನಾಯಕರೂ ಆಗಿದ್ದಾರೆ. ನವ ನಟಿ ಪದ್ಮಶ್ರೀ ಈ ಚಿತ್ರದ ನಾಯಕಿ ಆಗಿದ್ದಾರೆ. ಇದು ಈ ಶುಕ್ರವಾರ ರಿಲೀಸ್ ಆಗುತ್ತಿದೆ.

ತದ್ವಿರುದ್ಧ ಸಿನಿಮಾ

ಸುಮನ್ ರಂಗನಾಥ್ ಅಭಿನಯದ ತದ್ವಿರುದ್ಧ ಚಿತ್ರವೂ ಬರ್ತಿದೆ. ಸುಮನ್ ರಂಗನಾಥ್ ಅಭಿನಯದ ಚಿತ್ರಗಳೇ ಇತ್ತೀಚಿಗೆ ಬಂದಿರಲಿಲ್ಲ. ಆದರೆ, ಇದೀಗ ಈ ಚಿತ್ರ ರಿಲೀಸ್ ಆಗುತ್ತಿದೆ.

ಆದರೆ, ಈ ಚಿತ್ರದ ಪ್ರಚಾರಕ್ಕೆ ಸುಮನ್ ರಂಗನಾಥ್ ಅವರು ಬರ್ತಿಲ್ಲ. ಕೊಡವು ಸಂಭಾವನೆ ಕೊಟ್ಟಿದ್ದೇವೆ ಅಂತಲೂ ನಿರ್ಮಾಪಕರು ಫಿಲ್ಮ್‌ ಚೇಂಬರ್ ಮೆಟ್ಟಿಲೇರಿದ್ದರು.

ಇದರ ನಡುವೆ ಸುಮನ್ ರಂಗನಾಥ್ ಇಲ್ಲದೆ ಚಿತ್ರದ ಪ್ರೆಸ್ ಮೀಟ್ ಕೂಡ ನಡೆಯಿತು. ವಿನೋದ್ ಜಿ.ರಾಜ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಇವರೇ ಕ್ಯಾಮರಾಮನ್ ಆಗಿದ್ದಾರೆ. ಕತೆ ಮತ್ತು ಎಡಿಟಿಂಗ್ ಕೂಡ ಇವರೇ ಮಾಡಿದ್ದಾರೆ.

ಸುಚಂದ್ರ ಪ್ರಸಾದ್, ಸುಮನ್ ರಂಗನಾಥನ್, ವಿಕ್ರಮ್, ಐಶ್ವರ್ಯ ಬಿ ಶೆಟ್ಟಿ, ಪೂಜಾ ಗೌಡ, ಸುವಿನ ಗೌಡ, ಅಭಿಲಾಷ್ ಎನ್ ಈ ಚಿತ್ರದಲ್ಲಿ ನಟಿಸಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed