Last Updated:
ಸತೀಶ್ ನೀನಾಸಂ ಅಭಿನಯದ ಅಯೋಗ್ಯ-2 , ಪ್ರಿಯಾಂಕಾ ಉಪೇಂದ್ರ ನಟನೆಯ ಡಿಟೆಕ್ಟಿವ್ ತೀಕ್ಷ್ಣ, ಬಾಸ್ ಸೇರಿದಂತೆ ಒಟ್ಟು 6 ಚಿತ್ರಗಳು ರಿಲೀಸ್ ಆಗುತ್ತಿವೆ. ಈ ಚಿತ್ರಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕನ್ನಡದಲ್ಲಿ (Kannada Movie) 6 ಚಿತ್ರಗಳು ಬರ್ತಿವೆ. ಈ ಸಿನಿಮಾಗಳಲ್ಲಿ ಹೊಸಬರ ಚಿತ್ರಗಳೂ ಇವೆ. ಹಳಬರ ಚಿತ್ರಗಳು ಇವೆ. ಅಯೋಗ್ಯ-2 ಚಿತ್ರದ (Ayogya-2 Movie) ಪ್ರಚಾರವು ಜೋರಾಗಿದೆ. ಶಿಲ್ಪಾ ಗಣೇಶ್ (Shilpa Ganesh) ನಿರ್ಮಾಣದ ಪಿಚ್ಚರ್ ಚಿತ್ರವೂ ಬರ್ತಿದೆ. ಪ್ರಿಯಾಂಕಾ ಉಪೇಂದ್ರ (Priyanka Upendra) ನಟನೆಯ ಡಿಟೆಕ್ಟಿವ್ ತೀಕ್ಷ್ಣ ಸಹ ರಿಲೀಸ್ ಆಗುತ್ತಿದೆ. ಹಾಗೆ ತೆರೆ ಕಾಣ್ತಿರೋ ಈ ಎಲ್ಲ ಚಿತ್ರಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಅಯೋಗ್ಯ-2 ಪ್ರಚಾರ ಜೋರು
ಅಯೋಗ್ಯ ಒನ್ ಚಿತ್ರದ ಕತೆ ಇಲ್ಲಿ ಮುಂದುವರೆದಿದೆ. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಈ ಚಿತ್ರದ ಹಾಡುಗಳು ಎಲ್ಲರ ಗಮನ ಸೆಳೆದಿವೆ. ಚಿತ್ರದ ಪ್ರಚಾರ ಜೋರಾಗಿಯೇ ಆಗಿದೆ. ನಿರೀಕ್ಷೆನೂ ಜಾಸ್ತಿನೇ ಇದೆ.
ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅಭಿನಯಸಿದ್ದಾರೆ. ಈ ಚಿತ್ರದಲ್ಲಿ ಇವರು ಡಿಟೆಕ್ಟಿವ್ ತೀಕ್ಷ್ಣ ಪಾತ್ರ ಮಾಡಿದ್ದಾರೆ. ಇದು ಇವರ ಚಿತ್ರ ಜೀವನದ 50 ನೇ ಚಿತ್ರವೂ ಆಗಿದೆ.
ತ್ರಿವಿಕ್ರಮ್ ರಘು ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಕತೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಇದು ಇವರಿಗೆ ಮೊದಲ ಚಿತ್ರವೂ ಆಗಿದೆ.
ಬಾಸ್ ಸಿನಿಮಾ ಕಳೆದ ವಾರವೇ ರಿಲೀಸ್ ಆಗಬೇಕಿತ್ತು. ಆದರೆ, ಕೋರ್ಟ್ ಆರ್ಡರ್ ಬರೋದು ಲೇಟ್ ಆಯಿತು. ಆದಷ್ಟು ಬೇಗ ಈ ಚಿತ್ರ ರಿಲೀಸ್ ಮಾಡ್ತೀವಿ ಅಂತಲೇ ಚಿತ್ರ ತಂಡ ಹೇಳಿತ್ತು.
ಡಿಟೆಕ್ಟಿವ್ ತೀಕ್ಷ್ಣ ಸಿನಿಮಾ
ಆ ಪ್ರಕಾರ ಈ ವಾರವೇ ಈ ಚಿತ್ರ ತೆರೆ ಕಾಣ್ತಿದೆ ಅನ್ನುವ ಸುದ್ದಿ ಇದೆ. ತನುಷ್ ಶಿವಣ್ಣ ಈ ಚಿತ್ರದ ನಾಯಕರಾಗಿದ್ದಾರೆ. ಪಾಯಲ್ ಚಂಗಪ್ಪ ಈ ಚಿತ್ರದಲ್ಲಿ ನಾಯಕಿ ಆಗಿದ್ದಾರೆ. ಈ ಚಿತ್ರವನ್ನ ವಿ.ಲವ ಡೈರೆಕ್ಷನ್ ಮಾಡಿದ್ದಾರೆ.
ಪಿಚ್ಚರ್ ಸಿನಿಮಾ ಕನ್ನಡ ಮತ್ತು ತುಳು ಭಾಷೆಯಲ್ಲಿ ತಯಾರಾಗಿದೆ. ಈ ಎರಡೂ ಭಾಷೆಯಲ್ಲಿ ಇದು ತೆರೆ ಕಾಣುತ್ತಿದೆ. ಈ ಚಿತ್ರವನ್ನ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಅವರು ನಿರ್ಮಾಣ ಮಾಡಿದ್ದಾರೆ.
ಪಿಚ್ಚರ್ ಸಿನಿಮಾ
ಲೈಫ್ ಟುಡೇ ಚಿತ್ರವು ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಕಿರಣ್ ಆದಿತ್ಯ, ಲೇಖಾಚಂದ್ರ, ತಬಲಾ ನಾಣಿ, ಕಾಕ್ರೋಚ್ ಸುಧಿ ಅಭಿನಯಿಸಿದ್ದಾರೆ.
ಕಾಂತ ಕನ್ನಳ್ಳಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಈ ಚಿತ್ರ ನಾಲ್ಕು ವರ್ಷ ಹಿಂದೇನೆ ಶುರು ಆಗಿದೆ. ಆದರೆ, ಈಗ ಈ ಚಿತ್ರಕ್ಕೆ ಬಿಡುಗಡೆಯ ಭಾಗ್ಯ ಸಿಗುತ್ತದೆ.
ಆಗಸ್ಟ್-7 ರಂದು ಅಕ್ಷರ ಹೆಸರಿನ ಚಿತ್ರವೂ ಬರ್ತಿದೆ.ಎಸ್.ನರೇಂದ್ರ ಬಾಬು ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಭುವನ್ ಚಂದ್ರ, ಅಲ್ಮಾಸ್ ಮೋತಿವಾಲಾ ಹಾಗೂ ರಮೇಶ್ ಪಂಡಿತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka
Aug 03, 2026 10:52 PM IST














