Kannada Movie Release: ಅಣ್ಣಾವ್ರ ಮೊಮ್ಮಗನ ಗ್ರಾಮಾಯಾಣ ಜೊತೆಗೆ ಡೆಡ್ಲಿ ಕಿಲ್ಲರ್; ಈ ವಾರ ಕನ್ನಡದ ಐದು ಸಿನಿಮಾ ರಿಲೀಸ್! | vinay rajkumar megha shetty graamaayana | | ACTPnews

Kannada Movie Release: ಅಣ್ಣಾವ್ರ ಮೊಮ್ಮಗನ ಗ್ರಾಮಾಯಾಣ ಜೊತೆಗೆ ಡೆಡ್ಲಿ ಕಿಲ್ಲರ್; ಈ ವಾರ ಕನ್ನಡದ ಐದು ಸಿನಿಮಾ ರಿಲೀಸ್! | vinay rajkumar megha shetty graamaayana |


ಜುಲೈ-3 ರಂದು ಗ್ರಾಮಾಯಣ ರಿಲೀಸ್

ಗ್ರಾಮಾಯಣ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ಹಾಗೂ ಮೇಘಾ ಶೆಟ್ಟಿ ಅಭಿನಯಿಸಿದ್ದಾರೆ. ದೇವನೂರು ಚಂದ್ರು ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ.

ಈ ಚಿತ್ರಕ್ಕೆ ಎರಡು ಸಲ ಮುಹೂರ್ತ ಆಗಿದೆ. ಮೊದಲು ದೊಡ್ಡಮಟ್ಟದಲ್ಲಿಯೇ ಇದು ಶುರು ಆಯಿತು. ಆದರೆ, ಮುಂದೆ ಈ ಚಿತ್ರ ಕಾರಣಾಂತರಗಳಿಂದ ನಿಂತೇ ಹೋಯಿತು.

ಆದರೆ, ಕೆ.ಪಿ.ಶ್ರೀಕಾಂತ್ ಹಾಗೂ ಲಹರಿ ಸಂಸ್ಥೆ ಈ ಚಿತ್ರವನ್ನ ಟೇಕ್ ಓವರ್ ಮಾಡಿಕೊಳ್ತು. ಆ ಬಳಿಕ ಈ ಚಿತ್ರಕ್ಕೆ ಮತ್ತೊಮ್ಮೆ ಮುಹೂರ್ತ ಆಯಿತು. ಈ ಚಿತ್ರ ಈಗ ರಾಜ್ಯದೆಲ್ಲೆಡೆ ತೆರೆ ಕಾಣುತ್ತಿದೆ.

ಲೂಸ್ ಮಾದ ಯೋಗಿ

ಲೂಸ್ ಮಾದ ಯೋಗಿ ಈ ಚಿತ್ರದಲ್ಲಿ ವಿಲನ್ ರೋಲ್ ಮಾಡಿದ್ದಾರೆ. ವಿನಯ್ ರಾಜ್‌ಕುಮಾರ್ ಹಾಗೂ ಲೂಸ್ ಮಾದ ಯೋಗಿ ಮುಖಾಮುಖಿ ಆಗುವ ಸಾಕಷ್ಟು ಸೀನ್‌ಗಳೂ ಇವೆ. ಕರಿಬೆಕ್ಕು ಅನ್ನುವ ಪಾತ್ರದಲ್ಲಿಯೇ ಲೂಸ್ ಮಾದ ಇಲ್ಲಿ ಅಭಿನಯಿಸಿದ್ದಾರೆ.

ಬಾಲ ರಾಜವಾಡಿ ಈ ಚಿತ್ರದಲ್ಲಿ ಮೇಘಾ ಶೆಟ್ಟಿ ತಂದೆ ಪಾತ್ರ ಮಾಡಿದ್ದಾರೆ. ಅಪರ್ಣಾ ಇಲ್ಲಿ ವಿನಯ್ ರಾಜ್‌ಕುಮಾರ್ ತಾಯಿಯ ಪಾತ್ರ ಮಾಡಿದ್ದಾರೆ. ಮೇಘಾ ಶೆಟ್ಟಿ ಪಾತ್ರದ ಹೆಸರು ಕುಸುಮ ಅಂತಲೇ ಇದೆ. ವಿನಯ್ ಇಲ್ಲಿ ಸೀನ್ ಅನ್ನುವ ರೋಲ್ ಮಾಡಿದ್ದರೆ. ಪೂರ್ಣಚಂದ್ರ ತೇಜಸ್ವಿ ಈ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದಾರೆ. ಸಂತೋಷ್ ರೈ ಪಾತಾಜೆ ಕ್ಯಾಮರಾವರ್ಕ್ ಮಾಡಿದ್ದಾರೆ.

ಲವ್ ಸೀಸನ್ಸ್ ಸಿನಿಮಾ

ಲವ್ ಸೀಸನ್ಸ್ ಹೆಸರಿನ ಸಿನಿಮಾ ರಿಲೀಸ್ ಆಗುತ್ತಿದೆ. ಹೊಸಬರ ಈ ಚಿತ್ರವೂ ಜುಲೈ-3 ರಂದು ತೆರೆ ಕಾಣುತ್ತಿದೆ. ಈ ಚಿತ್ರವನ್ನ ಕೃತ್ವಿಕ್ ಡೈರೆಕ್ಷನ್ ಮಾಡಿದ್ದಾರೆ.

ಹೊಸಬರ ಮುಕುಂದ ರಾಮಸ್ವಾಮಿ ಈ ಚಿತ್ರದ ನಾಯಕರಾಗಿದ್ದಾರೆ. ಇದು ಇವರ ಮೊದಲ ಚಿತ್ರವೇ ಆಗಿದೆ. ಈ ಮೂಲಕ ನಾಯಕರಾಗಿಯೇ ಬರ್ತಿದ್ದಾರೆ.ದಿಯಾ ಕೀರ್ತಿ, ಚಂದನಾ ಗೌಡ ಈ ಸಿನಿಮಾದ ನಾಯಕಿಯರಾಗಿದ್ದಾರೆ.

ಇನ್ನಿತರ ಸಿನಿಮಾಗಳು

ಈಗಾಗಲೇ ಹೇಳಿದಂತೆ ಜುಲೈ-3 ರಂದು 5 ಚಿತ್ರಗಳ ರಿಲೀಸ್ ಆಗುತ್ತಿವೆ. ಈ ಚಿತ್ರಗಳಲ್ಲಿ ಗ್ರಾಮಾಯಣ ಚಿತ್ರವೂ ಇದೆ. ಲವ್ ಸೀಸನ್ಸ್ ಅನ್ನುವ ಸಿನಿಮಾನೂ ಇದೆ.

ಇನ್ನು ಮೂರು ಅಂತ ಬಂದರೆ, ಇದರಲ್ಲಿ ಡೆಡ್ಲಿ ಕಿಲ್ಲರ್ ಚಿತ್ರವೂ ಇದೆ. ಈ ಚಿತ್ರದ ವಿಶೇಷ ಅಂತ ಬಂದ್ರೆ, ಇದನ್ನ ಥ್ರಿಲ್ಲರ್ ಮಂಜು ಡೈರೆಕ್ಷನ್ ಮಾಡಿದ್ದಾರೆ. ಇದೊಂದು ಪಕ್ಕಾ ಆ್ಯಕ್ಷನ್ ಚಿತ್ರವೇ ಆಗಿದೆ.

ಡೆಡ್ಲಿ ಕಿಲ್ಲರ್ ಸಿನಿಮಾ

ಈ ಚಿತ್ರದಲ್ಲಿ ಅಭಯ್ ವೀರ್ ನಾಯಕರಾಗಿದ್ದಾರೆ. ನಿವಿಕ್ಷಾ , ಥ್ರಿಲ್ಲರ್ ಮಂಜು ನಟಿಸಿದ್ದಾರೆ. ವಿನು ಮನಸು ಮ್ಯೂಸಿಕ್ ಮಾಡಿದ್ದಾರೆ. ಈ ಚಿತ್ರ ಅಲ್ಲದೆ ಕನ್ನಡದ ಅಪರಾಧಿ ನಾನಲ್ಲ, ನಮ್ ಕಾಲ್ದಲ್ ಹಿಂಗಿರ್ಲಿಲ್ಲ ಬಿಡಿ ಸಿನಿಮಾ ಕೂಡ ರಿಲೀಸ್ ಆಗುತ್ತಿವೆ ಅಂತ ಹೇಳಬಹುದು.

-ರೇವನ್ ಪಿ.ಜೇವೂರ್



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports