ENG vs IND: ಮೊದಲ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾದ 5 ವಿಕ್ನೇಸ್ ರಿವೀಲ್! ಇನ್ನಾದ್ರೂ ಎಚ್ಚೆತ್ತುಕೊಳ್ಳುತ್ತಾರಾ ಕೋಚ್-ಕ್ಯಾಪ್ಟನ್? | ಕ್ರೀಡಾ ಸುದ್ದಿ | ACTPnews

ಶ್ರೇಯಸ್ ಅಯ್ಯರ್


Last Updated:

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20ಐ ಮಳೆಯಿಂದಾಗಿ ರದ್ದಾಗಿತ್ತು. ಆದರೆ, ಈ ಮೊದಲ ಟಿ20ಐ ಪಂದ್ಯದಲ್ಲಿ ಟೀಮ್ ಇಂಡಿಯಾದ 5 ವಿಕ್ನೇಸ್ ರಿವೀಲ್ ಆಯಿತು.

ಶ್ರೇಯಸ್ ಅಯ್ಯರ್
ಶ್ರೇಯಸ್ ಅಯ್ಯರ್

ಭಾರತ (India) ಮತ್ತು ಇಂಗ್ಲೆಂಡ್ (England) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಚೆಸ್ಟರ್-ಲೆ-ಸ್ಟ್ರೀಟ್‌(Chester-le-Street)ನಲ್ಲಿ ನಿರಂತರ ಮಳೆಯಿಂದಾಗಿ, ಇಂಗ್ಲೆಂಡ್ ತಮ್ಮ ಇನ್ನಿಂಗ್ಸ್‌ನ ಒಂದೇ ಒಂದು ಎಸೆತವನ್ನು ಆಡಲು ಸಾಧ್ಯವಾಗಲಿಲ್ಲ. ಪರಿಣಾಮ ಪಂದ್ಯವನ್ನು ರದ್ದುಗೊಳಿಸಲಾಯಿತು. ಆದರೆ, ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳು (Batsmen) 189/7 ಸವಾಲಿನ ಮೊತ್ತವನ್ನು ಗಳಿಸಿದ್ದರು. ಇದು ರೋಚಕ ಪಂದ್ಯಕ್ಕೆ ಕಾರಣವಾಯಿತು.

ಐರ್ಲೆಂಡ್ ವಿರುದ್ಧ 0-2 ಅಂತರದಲ್ಲಿ ಸರಣಿ ಸೋತ ನಂತರ, ಟೀಮ್ ಇಂಡಿಯಾದ ಬ್ಯಾಟಿಂಗ್ ಸುಧಾರಣೆ ಕಂಡಿತು. ನಾಯಕ ಶ್ರೇಯಸ್ ಅಯ್ಯರ್ ಮತ್ತು ಅಭಿಷೇಕ್ ಶರ್ಮಾ ಅದ್ಭುತ ಇನ್ನಿಂಗ್ಸ್‌ನೊಂದಿಗೆ ಸ್ವಲ್ಪ ಸಮಾಧಾನ ತಂದರು. ಆದರೆ ಕೆಲವು ವಿಕ್ನೇಸ್ ಮತ್ತೊಮ್ಮೆ ಸ್ಪಷ್ಟವಾಗಿ ಕಂಡುಬಂದವು.

ಟೀಮ್ ಇಂಡಿಯಾದ 5 ವಿಕ್ನೇಸ್

ಕಳಪೆ ಆರಂಭ: ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಮತ್ತೆ ಬೇಗನೆ ಔಟಾದರು. ಇದು ಅಗ್ರ ಕ್ರಮಾಂಕದಲ್ಲಿನ ಅಸ್ಥಿರತೆಯನ್ನು ಬಹಿರಂಗಪಡಿಸಿತು. ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ಭಾರತ ಉತ್ತಮ ಆರಂಭವನ್ನು ಪಡೆಯಲಿಲ್ಲ. ಟೀಮ್ ಇಂಡಿಯಾ ಹಲವು ಪಂದ್ಯಗಳಲ್ಲಿ ಉತ್ತಮ ಆರಂಭವನ್ನು ಪಡೆಯಲು ಸಾಧ್ಯವಾಗಿಲ್ಲ.

ಮಧ್ಯಮ ಓವರ್‌ಗಳಲ್ಲಿ ನಿಧಾನಗತಿಯ ಬ್ಯಾಟಿಂಗ್: ಅಭಿಷೇಕ್ ಔಟಾದ ನಂತರ, 8ನೇ ಮತ್ತು 14ನೇ ಓವರ್‌ಗಳ ನಡುವೆ ರನ್ ಗಳಿಕೆಯ ವೇಗ ಕಡಿಮೆಯಾಯಿತು. ಸತತ ವಿಕೆಟ್ ಕಳೆದುಕೊಂಡ ನಂತರ ಟೀಮ್ ಇಂಡಿಯಾ ಮಧ್ಯಮ ಓವರ್‌ಗಳಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡುತ್ತಿದೆ. ಇದು ಐರ್ಲೆಂಡ್ ವಿರುದ್ಧ ಸರಣಿಯಲ್ಲಿಯೂ ಕಾಣಿಸಿತ್ತು.

ರನೌಟ್ ಸಮಸ್ಯೆ: ತಪ್ಪು ತಿಳುವಳಿಕೆಯಿಂದಾಗಿ ಇಶಾನ್ ಕಿಶನ್ ಸತತ ಎರಡನೇ ಪಂದ್ಯದಲ್ಲೂ ರನ್ ಔಟ್ ಆಗಿದ್ದು, ಇದು ತಂಡಕ್ಕೆ ಕಳವಳಕಾರಿ ವಿಷಯವಾಗಿದೆ. ಮುಂದಿನ ಪಂದ್ಯಗಳಲ್ಲಿ ರನೌಟ್ ಆಗುವುದನ್ನು ತಪ್ಪಿಸಬೇಕಾಗಿದೆ.

ತಿಲಕ್ ವರ್ಮಾ ನಿಧಾನಗತಿಯ ಬ್ಯಾಟಿಂಗ್: ಚೆಸ್ಟರ್-ಲೆ-ಸ್ಟ್ರೀಟ್ ಟಿ20ಯಲ್ಲಿ, ಭಾರತ ತಂಡದ ತಿಲಕ್ ವರ್ಮಾ ಈ ಸ್ವರೂಪದ ಪ್ರಕಾರ ನಿಧಾನವಾಗಿ ಬ್ಯಾಟಿಂಗ್ ಮಾಡಿದರು. ಅವರು 13 ಎಸೆತಗಳಲ್ಲಿ 13 ರನ್ ಗಳಿಸಿದರು. ಹೀಗಾಗಿ ತಿಲಕ್ ವರ್ಮಾ ಅವರನ್ನು ತಂಡದಿಂದ ಕೈಬಿಡಬೇಕು ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.

ಕೆಳ ಕ್ರಮಾಂಕದ ಪ್ರಯೋಗ: ಈ ಪಂದ್ಯದಲ್ಲಿ ಅಕ್ಷರ್ ಪಟೇಲ್ ಅವರಿಗಿಂತ ಮೊದಲು ಗೌತಮ್ ಗಂಭೀರ್ ಅವರ ವಿಶೇಷ ಆಟಗಾರ ಹರ್ಷಿತ್ ರಾಣಾ ಅವರನ್ನು ಬ್ಯಾಟಿಂಗ್‌ಗೆ ಬಡ್ತಿ ನೀಡಲಾಯಿತು. ಅಕ್ಷರ್ ಅವರನ್ನು ಅವರ ಸ್ಥಾನದಲ್ಲಿ ಕಳುಹಿಸಬೇಕಾಗಿತ್ತು. ಆದರೆ ಹರ್ಷಿತ್ ಕೇವಲ ಎರಡು ಎಸೆತಗಳನ್ನು ಆಡಿ 0 ರನ್ ಗಳಿಸಿ ಔಟಾದರು. ಇದು ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗದ ಮೇಲೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಈಗ ಉಭಯ ತಂಡಗಳ ನಡುವಿನ ಎರಡನೇ ಟಿ20 ಪಂದ್ಯ ಜುಲೈ 4 ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದ್ದು, ಭಾರತ ಸರಣಿಯಲ್ಲಿ ಮುನ್ನಡೆ ಸಾಧಿಸಲು ಎದುರು ನೋಡುತ್ತಿದೆ. ಇದರ ನಡುವೆ ಟೀಮ್ ಇಂಡಿಯಾದ ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಪ್ಲೇಯಿಂಗ್-11 ಬಗ್ಗೆ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾರೆ? ಎಂಬುದನ್ನು ಕಾದು ನೋಡಬೇಕಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports