Last Updated:
ಶ್ರೀಲಂಕಾವನ್ನ ಮೊದಲ ಇನ್ನಿಂಗ್ಸ್‌ನಲ್ಲಿ 290ಕ್ಕೆ ಆಲೌಟ್ ಮಾಡಿ ಫಾಲೋ ಆನ್ ಹೇರಿರುವ ಭಾರತ ತಂಡ, ಈಗಾಗಲೇ ಅತಿಥೇಯ ಶ್ರೀಲಂಕಾ ತಂಡದ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಕಬಳಿಸಿ ಗೆಲುವಿನ ಸನಿಹಬಂದಿದೆ.
ಭಾರತ ಮತ್ತು ಶ್ರೀಲಂಕಾ (India vs Sri Lanka) ವಿರುದ್ಧ ತನ್ನ ಹಿಡಿತವನ್ನು ಬಿಗಿಗೊಳಿಸಿದೆ. ಆದರೆ ಕೆಟ್ಟ ಹವಾಮಾನ ಮತ್ತು ಭಾರೀ ಮಳೆಯಿಂದಾಗಿ ಬುಧವಾರದ ಆಟ ಅಕಾಲಿಕವಾಗಿ ಮುಕ್ತಾಯಗೊಂಡಿದೆ. ಶ್ರೀಲಂಕಾವನ್ನ ಮೊದಲ ಇನ್ನಿಂಗ್ಸ್‌ನಲ್ಲಿ 290ಕ್ಕೆ ಆಲೌಟ್ ಮಾಡಿ ಫಾಲೋ ಆನ್ ಹೇರಿರುವ ಭಾರತ ತಂಡ, ಈಗಾಗಲೇ ಅತಿಥೇಯ ಶ್ರೀಲಂಕಾ ತಂಡದ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಕಬಳಿಸಿ ಗೆಲುವಿನ ಸನಿಹಬಂದಿದೆ. ಶ್ರೀಲಂಕಾ ಪ್ರಸ್ತುತ 229 ರನ್ ಗಳಿಸಿದ್ದು, 16 ರನ್‌ಗಳ ಅಲ್ಪ ಮುನ್ನಡೆ ಪಡೆದುಕೊಂಡಿದೆ. ಕೈಯಲ್ಲಿ ಇನ್ನೂ ಕೇವಲ 4 ವಿಕೆಟ್ ಬಾಕಿ ಉಳಿದಿದೆ. ನಾಳೆ ಮಳೆ ಬಾರದಿದ್ದರೆ ಭಾರತ ಗೆಲುವು ಸಾಧಿಸಲಿದೆ. ಮಳೆ ಬಂದರೆ ಶ್ರೀಲಂಕಾ ಹೀನಾಯ ಸೋಲು ತಪ್ಪಿಸಿಕೊಂಡು ಪಂದ್ಯವನ್ನ ಡ್ರಾ ಸಾಧಿಸಲಿದೆ.














