Last Updated:
ಬಾಲಿವುಡ್ ನಟಿ ಕೃತಿ ಸನನ್ (Actress Kriti Sanon) ಅಭಿನಯಿಸಿರುವ ಆಭರಣದ ಜಾಹೀರಾತೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ರಕ್ಷಾ ಬಂಧನದ ಸಂಭ್ರಮದ ನಡುವೆ ಬಾಲಿವುಡ್ ನಟಿ ಕೃತಿ ಸನೋನ್ (Actress Kriti Sanon) ಅಭಿನಯಿಸಿರುವ ಆಭರಣದ ಜಾಹೀರಾತೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಾಂಪ್ರದಾಯಿಕ ಹಬ್ಬದ ಹಿನ್ನೆಲೆಯಲ್ಲಿದ್ದರೂ ಕೃತಿ ಧರಿಸಿದ್ದ ಇಂಡೋ-ವೆಸ್ಟರ್ನ್ ಬ್ರಾಲೆಟ್ ಶೈಲಿಯ ಉಡುಪು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ. ಜಾಹೀರಾತಿನ ಉಡುಪು ಮತ್ತು ಅದರ ಪ್ರಸ್ತುತಿಯನ್ನು ಪ್ರಶ್ನಿಸಿ ನೆಟ್ಟಿಗರು ಕಾಮೆಂಟ್ ಮಾಡುತ್ತಿರುವ ಬೆನ್ನಲ್ಲೇ, ನಟಿ ಹಾಗೂ ಸಂಸದೆ ಕಂಗನಾ ರಣಾವತ್ (Kangana Ranaut) ಕೂಡ ಈ ವಿಚಾರದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.














