Last Updated:
ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದಲ್ಲಿ 18 ಸೆಕ್ಷನ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ. LLB ಪದವೀಧರರಿಗೆ ₹69,250-1,34,200 ವೇತನ. ಅರ್ಜಿ ಸಲ್ಲಿಸಲು 19-08-2026 ಕೊನೆಯ ದಿನ.
ಬೆಂಗಳೂರು: ಕರ್ನಾಟಕ ಸರ್ಕಾರದ (Govt) ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಸುವರ್ಣ ಅವಕಾಶ. ಹೌದು, ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದಲ್ಲಿ (Karnataka State Legal Services Authority) ಖಾಲಿ ಇರುವ ವಿವಿಧ ಹುದ್ದೆಗಳನ್ನು (Jobs) ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ನೀವು ಕೂಡ ಉತ್ತಮ ಸರ್ಕಾರಿ ಅಥವಾ ಪ್ರಾಧಿಕಾರದ ಉದ್ಯೋಗವನ್ನು ಹುಡುಕುತ್ತಿದ್ದರೆ, ಈ ಕೂಡಲೇ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಮತ್ತು ಅರ್ಜಿ ಸಲ್ಲಿಸಿ.
ಹುದ್ದೆಗಳ ಸಂಖ್ಯೆ: 18
ಪ್ರಮುಖ ಹುದ್ದೆ: ಸೆಕ್ಷನ್ ಆಫೀಸರ್
ಕೊನೆಯ ದಿನಾಂಕ: 19-08-2026
ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ LLB ಪೂರ್ಣಗೊಳಿಸಿರಬೇಕು.
ಮಾಸಿಕ ವೇತನರೂ. 69,250 – 1,34,200/-ವರೆಗೆ
ಉದ್ಯೋಗ ಸ್ಥಳಬೆಂಗಳೂರು – ಕರ್ನಾಟಕ
ಅಭ್ಯರ್ಥಿಯ ಗರಿಷ್ಠ ವಯಸ್ಸು 20-07-2026 ರಂತೆ 40 ವರ್ಷ ವಯೋಮಿತಿಯನ್ನು ಹೊಂದಿರಬೇಕು.ವಯೋಮಿತಿ ಸಡಿಲಿಕೆ
ಇತರ ಹಿಂದುಳಿದ ವರ್ಗಗಳ 2(A)/ 2(B)/ 3(A)/ 3(B): 3 ವರ್ಷಗಳು
SC/ST ವರ್ಗ–I ಅಭ್ಯರ್ಥಿಗಳಿಗೆ: 5 ವರ್ಷಗಳು
ಅರ್ಜಿ ಶುಲ್ಕ
SC/ ST/ OBC/ Cat-I ಅಭ್ಯರ್ಥಿಗಳಿಗೆ: ₹500/-
ಇತರ ಎಲ್ಲಾ ಅಭ್ಯರ್ಥಿಗಳಿಗೆ: ₹1000/-
ಪಾವತಿ ವಿಧಾನ: ಆನ್ಲೈನ್
ಆಯ್ಕೆ ಪ್ರಕ್ರಿಯೆ:
ಸ್ಪರ್ಧಾತ್ಮಕ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
Bangalore [Bangalore],Bangalore,Karnataka














