ಜಪಾನ್ ಹೆಚ್ಚಾಗಿ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗದೇ ಇದ್ದರೂ, ಪ್ರವಾಸೋದ್ಯಮ ಕೂಡ ದೇಶದ ಪ್ರಮುಖ ಆದಾಯದ ಖಜಾನೆಯಾಗಿದೆ.
ಜಪಾನ್‌ನ ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರವಾಸೋದ್ಯಮವು 2025ರ ವೇಳೆಗೆ 60 ಮಿಲಿಯನ್ ಪ್ರವಾಸಿಗರನ್ನು ಸ್ವಾಗತಿಸಬಹುದು ಎಂದು ಅಂದಾಜಿಸಲಾಗಿದೆ.
2024ರಲ್ಲಿ ಆಗಮನದ ಸಂಖ್ಯೆಯು 2019ರಲ್ಲಿ ಸಾಂಕ್ರಾಮಿಕ ಪೂರ್ವದ ಉತ್ತುಂಗದಿಂದ 16% ಹೆಚ್ಚಾಗಿದೆ. ಜೊತೆಗೆ ಈ ವರ್ಷದ ಅಂತ್ಯದ ವೇಳೆಗೆ 60 ಮಿಲಿಯನ್ ಪ್ರವಾಸಿಗರು ಬರುವ ಸಾಧ್ಯತೆ ಇದ್ದು, $100 ಶತಕೋಟಿ ಆದಾಯವನ್ನು ಅಂದಾಜಿಸಲಾಗಿದೆ.
ಪ್ರವಾಸಿಗರ ಸಂಖ್ಯೆ ಹೆಚ್ಚಾದಲ್ಲಿ ಸಹಜವಾಗಿಯೇ ದೇಶವು ಅನೇಕ ಆರ್ಥಿಕ ಪ್ರಯೋಜನಗಳನ್ನು ಪಡೆದುಕೊಳ್ಳುತ್ತದೆ. ಪ್ರವಾಸಿಗರ ಸಂಖ್ಯೆ ಹೆಚ್ಚಾದರೆ ಲಾಭ ಏನೋ ಸರಿ, ಆದರೆ ಇದು ಕೆಲ ಸಾರ್ವಜನಿಕ ಅನಾನುಕೂಲತೆಯನ್ನು ಕೂಡ ಹೊಂದಿರುತ್ತದೆ.
ಜನಸಂದಣಿ, ಜನಪ್ರಿಯ ಪ್ರದೇಶಗಳಲ್ಲಿ ಯಾವಾಗಲೂ ಗಿಜಿಗಿಜಿ, ಫೋಟೋಕ್ಕಾಗಿ ಎಲ್ಲಿಬೇಕಲ್ಲಿ ನಿಲ್ಲುವ ಪ್ರವಾಸಿಗರು, ಟ್ರಾಫಿಕ್ ಇಂತಹ ಸಮಸ್ಯೆಗಳು ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆ ಹೆಚ್ಚಾಗುತ್ತದೆ.
ಜಪಾನ್ ಕೂಡ ಹೇರಳ ಪ್ರವಾಸಿಗರಿಂದ ಕೆಲ ತೊಂದರೆಗಳನ್ನು ಅನುಭವಿಸುತ್ತಿದೆ. ಜಪಾನ್ ಒಂದು ವ್ಯವಸ್ಥಿತ ದೇಶವಾಗಿದ್ದು, ಇವುಗಳು ಹೆಚ್ಚಾಗಿ ತೊಂದರೆ ಎನಿಸಲ್ಲ.
ಅದಾಗ್ಯೂ ಸಾರ್ವಜನಿಕರ ಸಲಹೆ ಮೇರೆಗೆ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಜಪಾನ್ ಪ್ರವಾಸೋದ್ಯಮ ಕಾರ್ಯತಂತ್ರವು ಕಾರ್ಯನಿರ್ವಹಿಸುತ್ತಿದೆ.
ಜಪಾನ್ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿಲ್ಲದಿದ್ದರೂ, ಕಳೆದ ವರ್ಷ ಆದಂತಹ ಆರ್ಥಿಕ ವಿದ್ಯಮಾನಗಳು ಪ್ರವಾಸೋದ್ಯಮಕ್ಕೆ ಒತ್ತು ನೀಡುವಂತೆ ಜಪಾನ್‌ನನ್ನು ಪ್ರೇರೇಪಿಸಿವೆ.
ಜಪಾನ್
ಪ್ರಸ್ತಾವಿತ ಪರಿಹಾರಗಳಲ್ಲಿ ಹೆಚ್ಚಿನ ವಸತಿ ಮತ್ತು ನಿರ್ಗಮನ ತೆರಿಗೆಗಳು ಮತ್ತು ನಾಗರಿಕರಿಗೆ ಅನುಕೂಲವಾಗುವಂತೆ ಪ್ರವಾಸೋದ್ಯಮ ವ್ಯವಸ್ಥೆಯನ್ನು ಯೋಜಿಸಲು ಜಪಾನ್ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಸಣ್ಣಪುಟ್ಟ ಅನಾನುಕೂಲತೆಗಳನ್ನು ಹೊರತುಪಡಿಸಿದರೆ, ಜಪಾನ್‌ಗೆ ಭೇಟಿ ನೀಡಲು ಬೇಕಾದಷ್ಟು ಕಾರಣಗಳಿವೆ.
ಒಂದು ದೇಶದಲ್ಲಿರುವ ಹೈಟೆಕ್ ತಂತ್ರಜ್ಞಾನ, ಹೈ-ಸ್ಪೀಡ್ ಬುಲೆಟ್ ಟ್ರೈನ್ ಇಲ್ಲಿನ ವಿಶೇಷತೆ. ಜಪಾನ್‌ನಲ್ಲಿರುವ ರೋಬೋಟ್ ರೆಸ್ಟೋರೆಂಟ್‌ಗಳು ಮತ್ತು ಕೆಫೆಗಳು ಕೂಡ ಬಹಳ ಜನಪ್ರಿಯವಾಗಿವೆ, ಇದನ್ನು ನೋಡಲು ಅಸಂಖ್ಯಾತ ಪ್ರವಾಸಿಗರು ಧಾವಿಸುತ್ತಾರೆ.
ಇಲ್ಲಿನ ಲಕ್ಸುರಿ ಹೋಟೆಲ್‌ಗಳು ಕೂಡ ಪ್ರವಾಸಿಗರ ಗಮನ ಸೆಳೆಯುವಂತಿವೆ. ಕ್ಯೋಟೋ ಹೋಟೆಲ್ ವೇದಿಕೆ ಒಂದು ರಾತ್ರಿಗೆ 10,000 ಯೆನ್ ($64) ವರೆಗೆ ಶುಲ್ಕ ವಿಧಿಸುತ್ತದೆ. ಇಂತಹ ಲಕ್ಸುರಿ ಹೋಟೆಲ್ ಜೊತೆಗೆ ನಿಮಗೆ ಬಜೆಟ್ ಸ್ನೇಹಿಯಾದ ಕ್ಯಾಪ್ಸುಲ್ ಹೋಟೆಲ್‌ಗಳು ಕೂಡ ಸಿಗುತ್ತವೆ.
ಜೊತೆಗೆ ಸಂದರ್ಶಕರಿಗೆ ಅತ್ಯಂತ ಅದ್ಭುತವಾದ ಪ್ರಯೋಜನ ನೀಡಲು ಜಪಾನ್ ಮುಂದಾಗಿದೆ. ಜಪಾನ್ ಪರಿಚಯಿಸಿರುವ ಸುಂಕ-ಮುಕ್ತ ಶಾಪಿಂಗ್ ಪ್ರವಾಸಿಗಿಗೆ ಜಪಾನ್ 10% ಬಳಕೆಯ ತೆರಿಗೆಯಿಂದ ವಿನಾಯಿತಿ ನೀಡುತ್ತದೆ. ಇದು ಪ್ರವಾಸಿಗರು ಜಪಾನ್‌ಗೆ ಬರಲು ಮತ್ತೊಂದು ಪ್ರಮುಖ ಕಾರಣವಾಗಲಿದೆ.












