Janhvi Kapoor: ಪೆದ್ದಿ ಮೇಲೆ ಮುನಿಸಿಕೊಂಡ್ರಾ ಜಾನ್ವಿ ಕಪೂರ್! ಸಕ್ಸಸ್ ಮೀಟ್‌ಗೆ ಗೈರಾದ ಬಾಲಿವುಡ್ ಬ್ಯೂಟಿ! | | ACTPnews

ಜಾನ್ವಿ ಕಪೂರ್


Last Updated:

ಪೆದ್ದಿ ಚಿತ್ರದ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ನಾಯಕಿ ಜಾನ್ವಿ ಕಪೂರ್ (Janhvi Kapoor) ಗೈರುಹಾಜರಾಗಿರುವುದು ಈಗ ಸಿನಿಮಾ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಜಾನ್ವಿ ಕಪೂರ್
ಜಾನ್ವಿ ಕಪೂರ್

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆಯೊಂದಿಗೆ ಬಿಡುಗಡೆಯಾದ ‘ಪೆದ್ದಿ’ (Peddi) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ರಾಮ್ ಚರಣ್ (Ram Charan) ಅಭಿನಯ ಮತ್ತು ಬುಚಿ ಬಾಬು ಸನಾ ನಿರ್ದೇಶನದ ಈ ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಸದ್ಯ ಚಿತ್ರತಂಡ ಸಕ್ಸಸ್ ಮೀಟ್‌ ಸಂಭ್ರಮದಲ್ಲಿ ತೊಡಗಿದೆ. ಆದರೆ ಚಿತ್ರದ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ನಾಯಕಿ ಜಾನ್ವಿ ಕಪೂರ್ (Janhvi Kapoor) ಗೈರುಹಾಜರಾಗಿರುವುದು ಈಗ ಸಿನಿಮಾ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಚಿತ್ರದ ಭರ್ಜರಿ ಪ್ರದರ್ಶನವನ್ನು ಸಂಭ್ರಮಿಸಲು ಜೂನ್ 8ರಂದು ಹೈದರಾಬಾದ್‌ನಲ್ಲಿ ವಿಶೇಷ ಸಕ್ಸಸ್ ಮೀಟ್ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಚಿತ್ರದ ನಾಯಕ ರಾಮ್ ಚರಣ್, ನಿರ್ದೇಶಕ ಬುಚಿ ಬಾಬು ಸನಾ ಸೇರಿದಂತೆ ಅನೇಕ ಕಲಾವಿದರು ಹಾಗೂ ತಾಂತ್ರಿಕ ತಂಡದ ಸದಸ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ರಾಮ್ ಚರಣ್, ಚಿತ್ರಕ್ಕೆ ದೊರೆತ ಪ್ರೀತಿ ಮತ್ತು ಬೆಂಬಲಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು. ಚಿತ್ರದ ಯಶಸ್ಸಿಗೆ ಕಾರಣವಾದ ಸಂಪೂರ್ಣ ತಂಡದ ಪರಿಶ್ರಮವನ್ನು ಶ್ಲಾಘಿಸಿದ ಅವರು, ಪ್ರೇಕ್ಷಕರ ಬೆಂಬಲವೇ ತಮ್ಮ ಶಕ್ತಿಯಾಗಿದೆ ಎಂದು ಹೇಳಿದರು.

ಇದೇ ವೇಳೆ ಚಿತ್ರದ ಇತರ ಪ್ರಮುಖ ಕಲಾವಿದರು ಹಾಗೂ ತಾಂತ್ರಿಕ ತಂಡದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ತಮ್ಮ ಅನುಭವಗಳನ್ನು ಹಂಚಿಕೊಂಡರು. ಆದರೆ ಎಲ್ಲರ ಗಮನ ಸೆಳೆದದ್ದು ನಾಯಕಿ ಜಾನ್ವಿ ಕಪೂರ್ ಅವರ ಗೈರುಹಾಜರಿಯೇ ಆಗಿತ್ತು.

ಜಾನ್ವಿ ಕಪೂರ್ ಗೈರುಹಾಜರಿಗೆ ಕಾರಣವೇನು?

ಚಿತ್ರದ ಯಶಸ್ಸಿನ ಸಂಭ್ರಮದಲ್ಲಿ ಮುಖ್ಯ ಪಾತ್ರಧಾರಿಗಳಲ್ಲಿ ಒಬ್ಬರಾಗಿರುವ ಜಾನ್ವಿ ಕಪೂರ್ ಕಾಣಿಸಿಕೊಳ್ಳದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಚಿತ್ರದ ಪ್ರಚಾರದ ಆರಂಭಿಕ ಹಂತದಲ್ಲಿಯೇ ಜಾನ್ವಿ ತಮ್ಮ ಪಾತ್ರದ ಕಾರಣದಿಂದಾಗಿ ಕೆಲವು ಪ್ರಚಾರ ಕಾರ್ಯಕ್ರಮಗಳಿಂದ ದೂರ ಉಳಿಯಬಹುದು ಎಂಬ ವರದಿಗಳು ಹರಿದಾಡಿದ್ದವು.

‘ಪೆದ್ದಿ’ ಚಿತ್ರದ ಬಿಡುಗಡೆಯ ನಂತರ ಜಾನ್ವಿ ಕಪೂರ್ ಅವರ ಪಾತ್ರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆದವು. ಕೆಲವು ವೀಕ್ಷಕರು ಮತ್ತು ನೆಟ್ಟಿಗರು ಚಿತ್ರದ ಕೆಲವು ದೃಶ್ಯಗಳಲ್ಲಿ ಪಾತ್ರಕ್ಕಿಂತಲೂ ನಟಿಯ ದೇಹದ ಮೇಲೆ ಕ್ಯಾಮೆರಾ ಹೆಚ್ಚು ಕೇಂದ್ರೀಕರಿಸಲಾಗಿದೆ ಎಂದು ಟೀಕಿಸಿದ್ದರು.

ಇನ್ನು ‘ಪೆದ್ದಿ’ ಚಿತ್ರದಲ್ಲಿ ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಜೊತೆಗೆ ಕನ್ನಡದ ಹಿರಿಯ ನಟ ಶಿವರಾಜ್‌ಕುಮಾರ್, ಜಗಪತಿ ಬಾಬು, ದಿವ್ಯೆಂದು ಮತ್ತು ಬೊಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports