Last Updated:
ಜನ ನಾಯಗನ್ ಚಿತ್ರದ ಫ್ಯಾನ್ಸ್ ಕ್ರೇಜ್ ಪೀಕ್ ಅಲ್ಲಿಯೇ ಇದೆ. ಮೊದಲ ದಿನ ಥಿಯೇಟರ್ ಅಲ್ಲಿ ಹಬ್ಬ ಮಾಡಿದ್ದಾರೆ. ಮುಂಬೈಯಲ್ಲಿರೋ ತಮಿಳು ಹುಡುಗಿ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಇವರ ಆ ಒಂದು ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಜನ ನಾಯಗನ್ ಚಿತ್ರ (Jana Nayagan Movie) ತೆರೆ ಕಂಡಿದೆ. ಮೊದಲ ದಿನ ಇದರ ಅಬ್ಬರ ಜೋರಾಗಿದೆ. ಥಿಯೇಟರ್ ಅಲ್ಲಿ ಫ್ಯಾನ್ಸ್ (Fans) ಸಂಭ್ರಮ ಜೋರಿದೆ. ಚಿತ್ರದ ದಳಪತಿ ಕಚೇರಿ (Thalapathy Kacheri) ಹಾಡಿಗೆ ಫ್ಯಾನ್ಸ್ ಸಿಕ್ಕಾಪಟ್ಟೆ ಡ್ಯಾನ್ಸ್ ಮಾಡಿದ್ದಾರೆ. ಮುಂಬೈಯಲ್ಲಿ ನೆಲೆಸಿರೋ ತಮಿಳು ಹುಡುಗಿ (Tamil Girl) ಸಖತ್ ಆಗಿಯೇ ಡ್ಯಾನ್ಸ್ ಮಾಡಿದ್ದಾರೆ. ಆ ವಿಡಿಯೋವನ್ನ ಇನ್‌ಸ್ಟಾಗ್ರಾಮ್ ಅಲ್ಲೂ ಹಂಚಿಕೊಂಡಿದ್ದಾರೆ. ಅದು ಈಗ ಎಲ್ಲರ ಗಮನ ಸೆಳೆಯುತ್ತಿದೆ. ಅದರ ವಿವರ ಮುಂದೆ ಇದೆ ಓದಿ.
ಜನ ನಾಯಗನ್ ಫ್ಯಾನ್ಸ್ ಅಬ್ಬರ
(ಚಿತ್ರ ಕೃಪೆ: ರೇವತಿ ದೇವೇಂದ್ರ ಇನ್‌ಸ್ಟಾಗ್ರಾಮ್)
ಇದರ ಹೊರತಾಗಿಯೂ ಎಲ್ಲೆಡೆ ಈ ಚಿತ್ರವನ್ನ ಜನ ಮೊದಲ ದಿನ ನೋಡಿದ್ದಾರೆ. ಸಖತ್ ಇಷ್ಟಪಟ್ಟಿದ್ದಾರೆ. ಥಿಯೇಟರ್ ಅಲ್ಲಿ ‘ದಳಪತಿ ಕಚೇರಿ’ ಸಾಂಗ್ ಬಂದ ಕೂಡಲೇ ಸ್ಕ್ರೀನ್ ಮುಂದೆ ಹೋಗಿ ಡ್ಯಾನ್ಸ್ ಮಾಡಿದ್ದಾರೆ.
ತಮಿಳು ಚಿತ್ರ ಪ್ರೇಮಿಗಳು ಎಲ್ಲೆಡೆ ಇದ್ದಾರೆ. ವಿಜಯ್ ಸಿನಿಮಾ ಇಷ್ಟಪಡೋ ಜನ ಫಸ್ಟ್ ಡೇನೇ ನೋಡ್ತಾರೆ. ಹಾಗೆ ಅಷ್ಟೆ ಎಂಜಾಯ್ ಮಾಡ್ತಾರೆ.
ಮುಂಬೈಯಲ್ಲಿ ನೆಲೆಸಿರೋ ತಮಿಳು ಹುಡುಗಿ ರೇವತಿ ದೇವೇಂದ್ರ ಮೊದಲ ದಿನವೇ ಚಿತ್ರ ನೋಡಿದ್ದಾರೆ. ‘ದಳಪತಿ ಕಚೇರಿ’ ಹಾಡು ಸ್ಕ್ರಿನ್ ಮೇಲೆ ಬಂದ ಕೂಡಲೇ ಅಲ್ಲಿಗೆ ಹೋಗಿದ್ದಾರೆ. ಮನಸಾರೆ ಕುಣಿದು ಕುಪ್ಪಳಿಸಿದ್ದಾರೆ. ಈ ಒಂದು ವಿಡಿಯೋ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ ನೋಡಿ
ಈ ಒಂದು ಡ್ಯಾನ್ಸ್ ವಿಡಿಯೋ ಹಂಚಿರೋದು ಯಾರು? ಈ ಪ್ರಶ್ನೆಗೆ ರೇವತಿ ದೇವೇಂದ್ರ ಉತ್ತರ ಕೊಡ್ತಾರೆ. ಅಂದ್ರೆ, ಸ್ವತಃ ರೇವತಿ ದೇವೇಂದ್ರ ಈ ಒಂದು ವಿಡಿಯೋ ಹಂಚಿಕೊಂಡಿದ್ದಾರೆ.
ಮಸ್ತ್ ಮಸ್ತ್ ಡ್ಯಾನ್ಸ್
(ಚಿತ್ರ ಕೃಪೆ: ರೇವತಿ ದೇವೇಂದ್ರ ಇನ್‌ಸ್ಟಾಗ್ರಾಮ್)
ಇನ್‌ಸ್ಟಾಗ್ರಾಮ್‌ನ ತಮ್ಮ ಪೇಜ್ ಅಲ್ಲಿಯೇ ಇದನ್ನ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇನ್‌ಸ್ಟಾಗ್ರಾಮ್ ಅಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
ಈ ಒಂದು ವಿಡಿಯೋದಲ್ಲಿ ಈ ಹುಡುಗಿ ಮಾತ್ರ ಡ್ಯಾನ್ಸ್ ಮಾಡ್ತಿಲ್ಲ. ವಿಜಯ್ ಇತರ ಫ್ಯಾನ್ಸ್ ಕೂಡ ಇದ್ದಾರೆ. ಇದರಲ್ಲಿ ಹುಡುಗರೂ ಇದ್ದಾರೆ. ಹುಡುಗಿಯರು ಇದ್ದಾರೆ.
ರೇವತಿ ದೇವೇಂದ್ರ ತಮ್ಮ ಇನ್‌ಸ್ಟಾಗ್ರಾಮ್ ಅಲ್ಲಿ ಒಂದಷ್ಟು ಬರೆದುಕೊಂಡಿದ್ದಾರೆ. ತಮಿಳು ಗರ್ಲ್ ಇನ್ ಮುಂಬೈ ಅಂತಲೇ ಪರಿಚಯ ಮಾಡಿಕೊಂಡಿದ್ದಾರೆ.
ಫ್ಯಾಷನ್, ಡ್ಯಾನ್ಸ್, ಮ್ಯೂಸಿಕ್, ಲೈಫ್ ಸ್ಟೈಲ್ ಹೀಗೆ ತಮ್ಮ ಆಸಕ್ತಿ ಕ್ಷೇತ್ರದ ಬಗ್ಗೆನೂ ಹೇಳಿಕೊಂಡಿದ್ದಾರೆ. ಹಾಗೆ ಇವರ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲಿ ಈ ಎಲ್ಲ ಕಂಟೆಂಟ್‌ನ ವಿಡಿಯೋಗಳೂ ಸಿಗ್ತವೆ ಅನಿಸುತ್ತವೆ.
ಇದರೊಟ್ಟಿಗೆ ರೇವತಿ ದೇವೇಂದ್ರ ಬೋಲ್ಡ್ ಕೂಡ ಅನಿಸುತ್ತಾರೆ. ಒಟ್ಟಾರೆ, ಜನ ನಾಯಗನ್ ಚಿತ್ರದ ಹಾಡಿಗೆ ಥಿಯೇಟರ್ ಅಲ್ಲಿ ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka














