Bhavya Gowda: ‘ದೇವಿ’ ಚಿತ್ರದ ಮಸ್ತ್ ಫೋಟೋ ಶೂಟ್; ನಾಯಕನ ಹೆಗಲೇರಿ ಪೋಸ್ ಕೊಟ್ಟ ಭವ್ಯಾ ಗೌಡ | | ACTPnews

Bhavya Gowda Chethan Gowda Devi Film Photo Shoot Latest Updates


ದೇವಿ ಚಿತ್ರದ ಫೋಟೋ ಶೂಟ್

ದೇವಿ ಚಿತ್ರದ ಮುಹೂರ್ತ ಇತ್ತೀಚಿಗೆ ನಡೆದಿದೆ. ಬೆಂಗಳೂರಿನ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ಈ ಚಿತ್ರಕ್ಕೆ ಮುಹೂರ್ತ ಆಗಿದೆ. ಪ್ರೆಸ್ ಮೀಟ್ ಕೂಡ ನಡೆದಿದೆ.

ನಾಯಕನ ಹೆಗಲೇರಿದ ನಾಯಕಿ
ಆದರೆ, ಈ ಚಿತ್ರದ ಮುಹೂರ್ತ ಹಾಗೂ ಪ್ರೆಸ್ ಮೀಟ್‌ಗೂ ಗೈರಾಗಿದ್ದ ನಟಿ ಭವ್ಯ ಗೌಡ, ಯಾಕೆ ಬರಲಿಲ್ಲ ಅನ್ನೋದನ್ನು ಹೇಳಿದ್ದರು. ಕರ್ಣ ಸೀರಿಯಲ್‌ನ ಶೂಟಿಂಗ್ ಬ್ಯಾಕ್ ಟು ಬ್ಯಾಕ್ ಇರುತ್ತವೆ. ಅದಕ್ಕೇನೆ ಬರಲಿಲ್ಲ ಅಂತಲೇ ಹೇಳಿದ್ದರು.
ನಾಯಕನ ಹೆಗಲೇರಿದ ನಾಯಕಿ

ದೇವಿ ಚಿತ್ರದ ಈ ಫೋಟೋ ಶೂಟ್ ವಿಶೇಷವಾಗಿದೆ. ಚಿತ್ರದ ನಾಯಕ ಯುವ ರೈತ ಚೇತನ್ ಗೌಡ ಅವರ ಜೊತೆಗೆ ವಿವಿಧ ರೀತಿ ಪೋಸ್ ಕೊಟ್ಟಿದ್ದಾರೆ.

ದೇವಿ ಚಿತ್ರದ ನಾಯಕ

ದೇವಿ ಚಿತ್ರದ ನಾಯಕ ನಟ ಚೇತನ್ ಗೌಡ ಈ ಚಿತ್ರಕ್ಕೆ ಕತೆ ಮಾಡಿದ್ದಾರೆ. ಇವರೇ ಈ ಸಿನಿಮಾದ ನಿರ್ಮಾಪಕರೂ ಆಗಿದ್ದಾರೆ. ಮಾಸ್ತಿ ಈ ಚಿತ್ರಕ್ಕೆ ಡೈಲಾಗ್ ಬರೆದಿದ್ದಾರೆ.

ಇವರ ಈ ಚಿತ್ರದಲ್ಲಿ ಅಮ್ಮ ಮತ್ತು ಮಗನ ಕತೆ ಇದೆ. ಈ ಕತೆಯನ್ನ ಕೇಳಿದ ಕನ್ನಡದ ನಾಯಕಿಯರು ತುಂಬಾನೆ ಖುಷಿಪಟ್ಟಿದ್ದಾರೆ. ಆದರೆ, ಕೊನೆಗೆ ಕೈಕೊಟ್ಟಿರೋದು ಇದೆ.

ಇದನ್ನ ಚೇತನ್ ಗೌಡ ಚಿತ್ರದ ಮೊದಲ ಪ್ರೆಸ್ ಮಿಟ್ ಅಲ್ಲಿಯೇ ಹೇಳಿಕೊಂಡಿದ್ದಾರೆ. ಒಂದೋ ಎರಡೋ ಚಿತ್ರ ಮಾಡಿದ ನಾಯಕಿಯರು ತುಂಬಾನೆ ಕಾಟಕೊಟ್ಟಿದ್ದಾರೆ ಅಂತಲೂ ದೂರಿದ್ದರು.

Bhavya Gowda Chethan Gowda Devi Film Photo Shoot Latest Updates

ದೇವಿ ಚಿತ್ರದ ನಾಯಕ
ದೇವಿ ಚಿತ್ರದ ನಾಯಕಿ

ನಾಯಕಿ ಭವ್ಯ ಗೌಡ ಅವರಿಗೆ ಇದು ಮೊದಲ ಚಿತ್ರವೇ ಆಗಿದೆ. ಮೊದಲ ಚಿತ್ರದ ಮುಹೂರ್ತಕ್ಕೆ ಹೋಗ್ಲಿಲ್ಲ ಅಂತ ಬೇಸರ ಪಟ್ಟಿರೋದು ಇದೆ.

ಹಾಗಂತ ಇವರು ಸುಮ್ನೆ ಆಗಿಲ್ಲ. ಒಂದು ವಿಡಿಯೋ ಮಾಡಿದ್ದಾರೆ. ಕ್ಷಮೆ ಕೂಡ ಕೇಳಿದ್ದಾರೆ. ಮೊದಲ ಚಿತ್ರದ ಮುಹೂರ್ತವನ್ನ ಮಿಸ್ ಮಾಡಿಕೊಂಡೆ ಅಂತಲೂ ಹೇಳಿಕೊಂಡಿದ್ದಾರೆ. ಒಟ್ಟಾರೆ, ಇದೀಗ ಈ ಚಿತ್ರದ ಫೋಟೋ ಶೂಟ್‌ಗೆ ಬಂದಿದ್ದಾರೆ. ವಿವಿಧ ರೀತಿಯಲ್ಲಿಯೇ ಪೋಸ್ ಕೊಟ್ಟಿದ್ದಾರೆ.

ವಿಡಿಯೋ ವೈರಲ್

ದೇವಿ ಚಿತ್ರದ ಭವ್ಯ ಗೌಡ ಹಾಗೂ ಚೇತನ್ ಗೌಡ ಅವರ ಫೋಟೋ ಶೂಟ್ ವಿಡಿಯೋ ಶೇರ್ ಆಗಿವೆ. ಸೋಷಿಯಲ್ ಮೀಡಿಯಾದ ಪೇಜ್‌ಗಳಲ್ಲೂ ಈ ವಿಡಿಯೋ ಶೇರ್ ಆಗಿವೆ.

ಭವ್ಯ ಗೌಡ ಹಾಗೂ ಚೇತನ್ ಗೌಡ ಯಾವ ರೀತಿ ಚಿತ್ರದ ಫೋಟೋ ಶೂಟ್ ಅಲ್ಲಿ ಭಾಗಿ ಆಗಿದ್ದರು. ಹೇಗೆಲ್ಲ ಪೋಸ್‌ಗಳನ್ನ ಕೊಟ್ಟರು ಅನ್ನೋದನ್ನ ಈ ವಿಡಿಯೋ ಹೇಳುತ್ತಿವೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports