Jailer-2 Movie: ರಜನಿಕಾಂತ್ ಜೈಲರ್-2 ಆ್ಯಕ್ಷನ್ ಹಿಂದೆ ಕನ್ನಡಿಗನ ಕಮಾಲ್! | | ACTPnews

Super Star Rajinikanth Jailer-2 Movie Action Director Chetan D Souza interesting fact


ಜೈಲರ್-2 ಸಖತ್ ಸಾಹಸ

ಜೈಲರ್ ಚಿತ್ರ ಸೂಪರ್ ಹಿಟ್ ಆಗಿದೆ. ಈ ಚಿತ್ರವನ್ನ ನೆಲ್ಸನ್ ದಿಲೀಪ್‌ಕುಮಾರ್ ಡೈರೆಕ್ಷನ್ ಮಾಡಿದ್ದರು. ಜೈಲರ್-2 ಅನ್ನು ಇವರೇ ಡೈರೆಕ್ಷನ್ ಮಾಡಿದ್ದಾರೆ.
ಜೈಲರ್-2 ಎಲ್ಲಾ ಆ್ಯಕ್ಷನ್…
(ಚಿತ್ರ ಕೃಪೆ: ಪಿ.ಆರ್.ಓ.)

ಈ ಚಿತ್ರದ ಆ್ಯಕ್ಷನ್ ಡೈರೆಕ್ಷನ್ ಅನ್ನಉಡುಪಿಯ ಚೇತನ್ ಡಿಸೋಜಾ ಮಾಡಿದ್ದಾರೆ. ಕಳೆದ ವರ್ಷ 2025 ರಲ್ಲಿ ಜೈಲರ್-2 ಚಿತ್ರದ ಮೊದಲ ಟೀಸರ್ ಬಂತು. ಇದರ ಆ್ಯಕ್ಷನ್ ಅನ್ನ ಇದೇ ಚೇತನ್ ಡಿಸೋಜಾ ಮಾಡಿದ್ದರು.

ಜೈಲರ್-2 ಎಲ್ಲಾ ಆ್ಯಕ್ಷನ್…

ಚೇತನ್ ಡಿಸೋಜಾ ಅವರು ಜೈಲರ್-2 ಚಿತ್ರದ ಅಷ್ಟು ಆ್ಯಕ್ಷನ್‌ಗಳನ್ನ ಮಾಡಿದ್ದಾರೆ. ಈ ಮೂಲಕ ಜೈಲರ್-2 ಅಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆಗೆ ಕೆಲಸ ಮಾಡಿದ್ದಾರೆ.

ಧೂಮಮ್ ಸಿನಿಮಾ

ಪವನ್ ಕುಮಾರ್ ಡೈರೆಕ್ಷನ್ ಮಾಡಿರೋ ಧೂಮಮ್ ಚಿತ್ರ ಮಾಡಿದರು. ಈ ಚಿತ್ರದಲ್ಲಿ ಫಹಾದ್ ಫಾಜಿಲ್ ಪರಿಚಯ ಆದರು. ಇದರಿಂದ ಆವೇಶಂ ಚಿತ್ರದಲ್ಲಿ ಆ್ಯಕ್ಷನ್ ಡೈರೆಕ್ಷನ್ ಮಾಡೋ ಅವಕಾಶ ಸಿಕ್ಕಿದೆ.

Super Star Rajinikanth Jailer-2 Movie Action Director Chetan D Souza interesting fact

ಜೈಲರ್-2 ಸಖತ್ ಸಾಹಸ
(ಚಿತ್ರ ಕೃಪೆ: ಜೈಲರ್-2 ಸಿನಿಮಾ ಇನ್​ಸ್ಟಾಗ್ರಾಮ್)

ಈ ಚಿತ್ರದ ಭರ್ಜರಿ ಆ್ಯಕ್ಷನ್‌ಗಳು ಜನಕ್ಕೂ ಇಷ್ಟ ಆಗಿವೆ. ತಮಿಳು ಚಿತ್ರದ ಜೈಲರ್‌ ಡೈರೆಕ್ಟರ್ ನೆಲ್ಸನ್ ದಿಲೀಪ್‌ಕುಮಾರ್ ಗಮನ ಕೂಡ ಸೆಳೆದಿದೆ. ಹಾಗಾಗಿಯೇ ಚೇತನ್ ಡಿಸೋಜಾ ಈ ಜೈಲರ್-2 ಚಿತ್ರದ ಎಲ್ಲ ಸಾಹಸಗಳನ್ನ ಡೈರೆಕ್ಷನ್ ಮಾಡೋಕೆ ಸಾಧ್ಯವಾಗಿದೆ.

ರಜನಿ ಬಗ್ಗೆ ಚೇತನ್ ಮಾತು

ರಜನಿಕಾಂತ್ ಅವರ ಬಗ್ಗೆ ಚೇತನ್ ಮಾತನಾಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆಗೆ ಕೆಲಸ ಮಾಡಿರೋ ಅನುಭವ ವಿಭಿನ್ನವಾಗಿಯೇ ಇದೆ.

ಇಂತಹ ದಿಗ್ಗಜರ ಜೊತೆಗೆ ಕೆಲಸ ಮಾಡೋದೇ ಒಂದು ಖುಷಿ ಅನ್ನುವ ಅರ್ಥದಲ್ಲಿಯೇ ಚೇತನ್ ಡಿಸೋಜಾ ಹೇಳಿಕೊಂಡಿದ್ದಾರೆ.

ಡ್ರ್ಯಾಗನ್ ಸಿನಿಮಾ

ಪ್ರಶಾಂತ್ ನೀಲ್ ಡೈರೆಕ್ಷನ್ ಮಾಡಿರೋ ಡ್ರ್ಯಾಗನ್ ಚಿತ್ರಕ್ಕೂ ಚೇತನ್ ಡಿಸೋಜಾ ಸಾಹಸ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಜೂನಿಯರ್ ಎನ್‌.ಟಿ.ಆರ್.ಜೊತೆಗೆ ಕೆಲಸ ಮಾಡಿದ್ದಾರೆ.

ಡಾರ್ಲಿಂಗ್ ಪ್ರಭಾಸ್ ಅಭಿನಯದ ಫೌಜಿ ಚಿತ್ರಕ್ಕೂ ಚೇತನ್ ಡಿಸೋಜಾ ಕೆಲಸ ಮಾಡಿದ್ದಾರೆ. ಸೂರ್ಯ ಅಭಿನಯದ ‘Scene’ ಚಿತ್ರಕ್ಕೂ ಚೇತನ್ ಡಿಸೋಜಾ ಸಾಹಸ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಎಲ್ಲ ಆ್ಯಕ್ಷನ್‌ಗಳನ್ನು ಚೇತನ್ ಡಿಸೋಜಾ ಮಾಡಿದ್ದಾರೆ.

Super Star Rajinikanth Jailer-2 Movie Action Director Chetan D Souza interesting fact

ಧೂಮಮ್ ಸಿನಿಮಾ
(ಚಿತ್ರ ಕೃಪೆ: ಪಿ.ಆರ್.ಓ.)
ಚೇತನ್ ಕನ್ನಡ ಚಿತ್ರಗಳು

ಬಘೀರ, UI, 45, ಭೈರತಿ ರಣಗಲ್,ಮ್ಯಾಕ್ಸ್, ಹೀಗೆ ಶಿವಣ್ಣ, ಶ್ರೀಮುರಳಿ, ಸುದೀಪ್, ರಾಜ್ ಬಿ ಶೆಟ್ಟಿ , ಉಪೇಂದ್ರ ಅವರ ಚಿತ್ರಗಳಿಗೂ ಚೇತನ್ ಡಿಸೋಜಾ ಆ್ಯಕ್ಷನ್ ಮಾಡಿದ್ದಾರೆ.

ಪವರ್ ಸ್ಟಾರ್ ಪುನೀತ್ ಅವರ ಚಿತ್ರಕ್ಕೂ ಆ್ಯಕ್ಷನ್ ಮಾಡಿದ್ದಾರೆ. ಪುನೀತ್ ಅವರ ಸಹಕಾರದಿಂದಲೇ ಸ್ಟಂಟ್ ಯೂನಿಯನ್ ಕಾರ್ಡ್ ಪಡೆದುಕೊಂಡಿದ್ದಾರೆ. Wrong Move ಅನ್ನುವ ಕಿರು ಚಿತ್ರವನ್ನು ಇವರು ನಿರ್ಮಿಸಿದ್ರು. ಇದು ಡೈರೆಕ್ಟರ್ ಪವನ್ ಕುಮಾರ್ ಗಮನ ಸೆಳೆಯಿತು.

ಇವರ U Turn ಚಿತ್ರದ ಮೂಲಕ ಇವರು ಸಾಹಸ ನಿರ್ದೇಶಕರೂ ಆದರು. ಇದಕ್ಕೂ ಮೊದಲು ಅಕ್ಸೆಂಚರ್‌ ಕಂಪನಿಯಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ ಆರಂಭಿಸಿದ್ದರು.

ಆದರೆ, ಇವರು ಮಾರ್ಷಲ್ ಆರ್ಟ್ಸ್ ಅಲ್ಲಿ ಹೆಚ್ಚಿನ ಆಸಕ್ತಿ ಮತ್ತು ತರಬೇತಿ ಪಡೆದಿದ್ದರು. ಹಾಗಾಗಿಯೇ ಇವರ ಸೆಳೆತ ಸಿನಿಮಾ ಕಡೆಗೆ ಇದ್ದೇ ಇತ್ತು ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports