Last Updated:
ಜಗದ್ಧಾತ್ರಿ ಸೀರಿಯಲ್ ಪ್ರೋಮೋ ನಿಜಕ್ಕೂ ಆ್ಯಕ್ಷನ್ ಸಿನಿಮಾ ರೀತಿನೇ ಇದೆ. ಮೋಕ್ಷಿತಾ ಪೈ ಇಲ್ಲಿ ಅಬ್ಬರಿಸಿದ್ದಾರೆ. ವಿಜಯ್ ಸೂರ್ಯ ಸಾಥ್ ಕೊಟ್ಟಿದ್ದಾರೆ. ಈ ಸೀರಿಯಲ್ನ ಇಂಟ್ರಸ್ಟಿಂಗ್ ಅಪ್ಡೇಟ್ ಇಲ್ಲಿದೆ ಓದಿ.
ಜಗದ್ಧಾತ್ರಿ ಸೀರಿಯಲ್ (Jagadhatri Serial) ಭರ್ಜರಿ ಆಗಿದೆ. ಈ ಸೀರಿಯಲ್ ಸಾಹಸ ಪ್ರಧಾನವಾಗಿದೆ. ವಿಜಯ್ ಸೂರ್ಯ (Vijay Surya) ಮತ್ತು ಮೋಕ್ಷಿತಾ ಪೈ (Mokshita Pai) ಈ ಸೀರಿಯಲ್ ಅಲ್ಲಿ ಸಖತ್ ಆ್ಯಕ್ಷನ್ ಮಾಡಿದ್ದಾರೆ. ಸಿನಿಮಾ ರೀತಿನೇ ಇದು ಕಾಣಿಸುತ್ತಿದೆ. ಆ್ಯಕ್ಷನ್ ಚಿತ್ರ ನೋಡಿದ ಅನುಭವ ಆಗುತ್ತದೆ. ಈ ಧಾರವಾಹಿಯಲ್ಲಿ ಕವಿತಾ ಗೌಡ (Kavita Gowda) ಸಹ ಇದ್ದಾರೆ. ಇದರ ಪ್ರಥಮ ಪ್ರೋಮೋ ಅತಿ ಹೆಚ್ಚು ಇಂಟ್ರಸ್ಟಿಂಗ್ ಆಗಿದೆ. ಅತೀ ಶೀಘ್ರದಲ್ಲಿಯೇ ಇದು ಪ್ರಸಾರ ಕೂಡ ಆಗುತ್ತಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಇದು ಪಕ್ಕಾ ಆ್ಯಕ್ಷನ್ ಸೀರಿಯಲ್
(ಚಿತ್ರ ಕೃಪೆ: ಜೀ ಕನ್ನಡ ಇನ್ಸ್ಟಾಗ್ರಾಮ್)
ಆದರೆ, ತಮ್ಮ ಗುರುತನ್ನ ಮರೆಮಾಚಿದ್ದಾರೆ. ಸಾಮಾನ್ಯ ಹೆಣ್ಣುಮಗಳ ರೀತಿನೇ ಮನೆಯಲ್ಲಿಯೇ ಇರ್ತಾಳೆ. ಕಿವಿಯಲ್ಲಿ ಹಿಯರಿಂಗ್ ಡಿವೈಸ್ನಿಂದ ಬರುವ ಸಂದೇಶದಿಂದ ಈ ಜಗದ್ಧಾತ್ರಿಯ ರೂಪವೇ ಬಲಾಗುತ್ತದೆ. ಆ ಕೂಡಲೇ ಬುಲೆಟ್ ಹತ್ತಿ ಆ ಸ್ಪಾಟ್ಗೆ ಹೋಗಿಯೇ ಬಿಡ್ತಾಳೆ.
ಜಗದ್ಧಾತ್ರಿ ಸೀರಿಯಲ್ ಅಲ್ಲಿ ವಿಜಯ್ ಸೂರ್ಯ ಕೂಡ ಇದ್ದಾರೆ. ಈಗಾಗಲೇ ಹೇಳಿದಂತೆ ಇವರೂ ಇಲ್ಲಿ ಅಂಡರ್ ಕವರ್ ಆಫೀಸರ್ ಆಗಿದ್ದಾರೆ.
ಜಗದ್ಧಾತ್ರಿ ಎಂಟ್ರಿ ಆಗೋದೇ ತಡ, ಗನ್ ಕೊಡುವ ದೃಶ್ಯ ಇಲ್ಲಿ ಅಷ್ಟೆ ವಿಶೇಷವಾಗಿದೆ. ಜಗದ್ಧಾತ್ರಿ ಮತ್ತು ವಿಜಯ್ ಸೂರ್ಯ ಜಂಟಿ ಆಗಿಯೇ ಈ ಒಂದು ಆಪರೇಷನ್ ಕಂಪ್ಲೀಟ್ ಮಾಡುತ್ತಾರೆ. ಕಿಡ್ನಾಪ್ ಆದ ಹುಡುಗಿಯನ್ನ ಕಾಪಾಡ್ತಾರೆ.
ಜಗದ್ಧಾತ್ರಿ ಮತ್ತು ಸೂರ್ಯ ಕಾಪಾಡಿರೋ ಹುಡುಗಿ ಬೇರೆ ಯಾರೋ ಅಲ್ಲ. ಅದು ಕವಿತಾ ಗೌಡ ಅವರ ಮಗಳೇ ಆಗಿದ್ದಾರೆ. ನಿನ್ನ ಯಾರು ಕಾಪಾಡಿದ್ರು ಅಂತ ಕವಿತಾ ಗೌಡ ಕೇಳ್ತಾರೆ.
ಸಾಹಸಮಯ ಸೀರಿಯಲ್
(ಚಿತ್ರ ಕೃಪೆ: ಜೀ ಕನ್ನಡ ಇನ್ಸ್ಟಾಗ್ರಾಮ್)
ಆಗ ಆ ಮಗು ಜಗದ್ಧಾತ್ರಿ ಕಡೆಗೆ ಬೆರಳು ತೋರಿಸುತ್ತದೆ. ಆದರೆ, ಜಗದ್ಧಾತ್ರಿ ಅಷ್ಟರಲ್ಲಾಗಲೇ ಅಲ್ಲಿಂದ ಹೋಗಿ ಬಿಟ್ಟಿರುತ್ತಾರೆ. ಆದರೆ, ಆಗಲೇ ಕ್ಯಾಂಟರ್ ಮೇಲೆ ಬಿಡಿಸಿರುವ ದೇವಿಯ ಚಿತ್ರ ಕಾಣಿಸುತ್ತದೆ. ಅಲ್ಲಿಗೆ ಕವಿತಾ ಗೌಡ ಆ ತಾಯಿನೇ ಮಗು ಕಾಪಾಡಿದ್ದಾಳೆ ಅಂತಲೇ ತಿಳಿದುಕೊಳ್ಳುತ್ತಾರೆ.
ಜಗದ್ಧಾತ್ರಿ ಮಗು ಕಾಪಾಡೋ ಆಪರೇಷನ್ ಮುಗಿದ್ಮೆಲೆ ಎಂದಿನಂತೆ ಸಿಂಪಲ್ ಆಗ್ತಾಳೆ. ಗೋಮೂತ್ರ ತೆಗೆದುಕೊಂಡು ಮನೆಗೆ ಹೋಗ್ತಾಳೆ. ಆದರೆ, ಎಲ್ಲೂ ಈ ಜಗದ್ಧಾತ್ರಿ ಒಂದು ಸೀಕ್ರೆಟ್ ಆಪರೇಷನ್ ಮುಗಿಸಿ ಬಂದಿದ್ದಾಳೆ ಅನ್ನೋದು ತಿಳಿಯದ ಹಾಗೆ ಮನೆಗೆ ಸೇರ್ತಾರೆ ನೋಡಿ.
ಈ ಎಲ್ಲ ವಿಷಯ ಈಗ ಬಿಟ್ಟಿರೋ ಪ್ರೋಮೋದಲ್ಲಿಯೇ ಇದೆ. ಅತೀ ಶೀಘ್ರದಲ್ಲಿಯೇ ಈ ಸೀರಿಯಲ್ ಪ್ರಸಾರ ಆಗುತ್ತಿದೆ. ಇದರ ಬಗ್ಗೆ ಜೀ ಕನ್ನಡ ಚಾನೆಲ್ ಅಧಿಕೃತವಾಗಿಯೇ ಹೇಳಿದೆ. ಆದರೆ, ಯಾವಾಗ ಅನ್ನೋದು ಮಾತ್ರ ಇನ್ನು ಗೊತ್ತಾಗಿಲ್ಲ. ಹಾಗೆ ಈ ಸೀರಿಯಲ್ ಸಾಹಸಮಯವಾಗಿಯೇ ಇದೆ.
ಜಗದ್ಧಾತ್ರಿ ಸೀರಿಯಲ್ ಸಾಹಸಮಯವಾಗಿಯೇ ಇದೆ. ಇಲ್ಲಿ ಮೋಕ್ಷಿತಾ ಪೈ ಮತ್ತು ವಿಜಯ್ ಸೂರ್ಯ ಸೂಪರ್ ಆ್ಯಕ್ಷನ್ ಮಾಡಿದ್ದಾರೆ. ನೋಡುಗರಿಗೂ ಇದು ಅಷ್ಟೆ ಖುಷಿಕೊಡುತ್ತದೆ.
ಇಲ್ಲಿವರೆಗಿನ ಸೀರಿಯಲ್ಗಳಲ್ಲಿ ಎಮೋಷನಲ್ ಕತೆಗಳೇ ಇದ್ದವು. ಆದರೆ, ಈ ಸೀರಿಯಲ್ ಅಲ್ಲಿ ಆ್ಯಕ್ಷನ್ ಇದೆ. ಎಮೋಷನಲ್ ಡ್ರಾಮಾ ಕೂಡ ಇದೆ. ಗಿರಿಜಾ ಲೋಕೇಶ್ ಸೇರಿದಂತೆ ಕನ್ನಡದ ಹಲವು ಕಲಾವಿದರು ಈ ಸೀರಿಯಲ್ ಅಲ್ಲಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka













