Last Updated:
ಡೈರೆಕ್ಟರ್ ಹೇಮಂತ್ ರಾವ್ ಅವರು ಒಂದು ಪ್ಲಾನ್ ಮಾಡಿದ್ದರು. ಸಿಐಡಿ 999 ಸಿನಿಮಾವನ್ನ ಈ ಕಾಲಘಟ್ಟಕ್ಕೆ ಕೊಡ್ಬೇಕು ಅನ್ನುವ ಪ್ಲಾನ್ ಅದಾಗಿತ್ತು. ಕತೆ ಕೂಡ ರೆಡಿ ಮಾಡಿದ್ದರು. ಇದನ್ನ ಪುನೀತ್ ಅವರಿಗೂ ಹೇಳಿದ್ದರು. ಅದು ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ.
ಡೈರೆಕ್ಟರ್ ಹೇಮಂತ್ ರಾವ್ (Hemanth Rao) ಅವರ ಚಿತ್ರಗಳ ಕತೆಗಳು ಚೆನ್ನಾಗಿ ಇರುತ್ತವೆ. ಅದನ್ನ ಹೇಳುವ ರೀತಿನೂ ವಿಭಿನ್ನವಾಗಿಯೇ ಇರುತ್ತವೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ, ಸಪ್ತಸಾಗರದಾಚೆ ಎಲ್ಲೋ ಸಿನಿಮಾಗಳು ಅದಕ್ಕೆ ಸಾಕ್ಷಿ ಆಗುತ್ತವೆ. ಇವರಿಗೆ ರಾಜಕುಮಾರ್ (Rajkumar) ಅವರ ಬಾಂಡ್ ಸರಣಿ (Bond Series) ಸಿನಿಮಾಗಳು ತುಂಬಾನೆ ಇಷ್ಟ ಆಗುತ್ತವೆ. ಅದರಲ್ಲಿ ಸಿಐಡಿ 999 ಚಿತ್ರವನ್ನ (CID 999) ಈ ಕಾಲ ಘಟಕ್ಕೆ ಹೇಳ್ಬೇಕು ಅಂತ ಆಸೆ ಇತ್ತು. ಆ ಕತೆಯನ್ನ ಪುನಿತ್ ಅವರಿಗೂ ಹೇಳಿದ್ದರು. ಮುಂದೇನಾಯಿತು ಅನ್ನೊದು ಇಲ್ಲಿದೆ ಓದಿ.
ಆಪರೇಷನ್ ಡ್ರೀಮ್ ಥಿಯೇಟರ್
(ಚಿತ್ರ ಕೃಪೆ: ವೈಶಾಕ್ ಜೆ.ಫಿಲ್ಮ್ಸ್ ಸಂದರ್ಶನದ ವಿಡಿಯೋ)
ಆಗ ಪುನೀತ್ ಅವರು ಒಂದು ಮಾತು ಹೇಳಿದ್ದರು. ಡೈರೆಕ್ಟರ್ ಭಗವಾನ್ ಸರ್ ಅವರು ನಮ್ಮ ತಂದೆಗೆ ಒಂದು ಕತೆ ಮಾಡಿದ್ದರು. ಅದನ್ನ ಒಮ್ಮೆ ನೀವು ಕೇಳಿ ನಿಮಗೆ ಇಷ್ಟ ಆಗುತ್ತದೆ.
ಹೇಮಂತ್ ರಾವ್ ಅವರು 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರದ ಬಹುತೇಕ ಕೆಲಸ ಮುಗಿದಿದೆ. ಕೊನೆಯದಾಗಿ ಜೂಲಿ ಅನ್ನುವ ಹಾಡು ಕೂಡ ಶೂಟ್ ಮಾಡಿದ್ದಾರೆ.
ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರು ಬಾಂಡ್ ಪ್ರಕಾಶ್ ರೋಲ್ ಮಾಡಿದ್ದಾರೆ. ಶಂಕರ್ ಅನ್ನುವ ರೋಲ್ ಅನ್ನ ಡಾಲಿ ಧನಂಜಯ್ ಮಾಡಿದ್ದಾರೆ. ಅದಿತಿ ಬಾಲನ್ ಇಲ್ಲಿ ಕಾವೇರಿ ಅನ್ನುವ ಏಜೆಂಟ್ ಪಾತ್ರ ಮಾಡಿದ್ದಾರೆ. ಪ್ರಿಯಾಂಕಾ ಮೋಹನ್ ಕೂಡ ಈ ಚಿತ್ರದಲ್ಲಿದ್ದಾರೆ. ಆದರೆ, ಇವರು ಇಲ್ಲಿ ನಾಯಕಿ ಆಗಿದ್ದಾರೆ.
ಸಿಐಡಿ 999 ರಿಬೂಟ್ ಸ್ಟೋರಿ
(ಚಿತ್ರ ಕೃಪೆ: ವೈಶಾಕ್ ಜೆ.ಫಿಲ್ಮ್ಸ್ ಸಂದರ್ಶನದ ವಿಡಿಯೋ)
666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದಲ್ಲಿ ಶಿವಣ್ಣ ಕ್ಯಾಮಿಯೋ ರೋಲ್ ಮಾಡಿದ್ದಾರೆ ಅನ್ನುವ ಸುದ್ದಿಗಳೂ ಇವೆ. ಆದರೆ, ಈ ಚಿತ್ರದಲ್ಲಿ ಶಿವಣ್ಣ ಪ್ರಮುಖ ರೋಲ್ ಮಾಡಿದ್ದಾರೆ.
ಪ್ರಕಾಶ್ ಅನ್ನುವ ಪ್ರಮುಖ ಪಾತ್ರ ಮಾಡಿದ್ದಾರೆ. ಜುಲೈ-3 ರಂದು ರಿಲೀಸ್ ಆಗುತ್ತಿರೋ ಫಸ್ಟ್ ಟೀಸರ್ ಅಲ್ಲಿಯೇ ಈ ವಿಚಾರ ರಿವೀಲ್ ಆಗುವ ಸಾಧ್ಯತೆನೂ ಇದೆ.
666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದಲ್ಲಿರೋ ಜೂಲಿ ಸಾಂಗ್ ಸುಮ್ನೆ ಅಲ್ಲ. ಇದು ಸೊಂಟ ಕುಣಿಸುವ ಸಾಂಗ್ ಅಲ್ಲ ಅನ್ನೋದನ್ನು ಹೇಮಂತ್ ರಾವ್ ಹೇಳಿಕೊಂಡಿದ್ದಾರೆ.
ವೈಶಾಕ್ ಜೆ.ಫಿಲ್ಮ್ಸ್ ಸಂದರ್ಶನದಲ್ಲಿಯೇ ಹೇಮಂತ್ ರಾವ್ ಮೇಲೆ ಹೇಳಿದ ವಿಷಯವನ್ನ ಹೇಳಿಕೊಂಡಿದ್ದಾರೆ. ಕೈರಾಮ್ ವಾಶಿ ಅವರು ನಡೆಸಿರೋ ಈ ಒಂದು ಸಂದರ್ಶನದಲ್ಲಿ ತಮ್ಮ ಅಷ್ಟು ಸಿನಿಮಾಗಳ ಕುರಿತು ಮಾತನಾಡಿದ್ದಾರೆ.
ಅದರಲ್ಲಿ ಈ 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದ ವಿಚಾರವನ್ನು ಹೇಳಿಕೊಂಡಿದ್ದಾರೆ. ಬಾಂಡ್ ಕತೆಯನ್ನ ಮೊದಲು ಪುನೀತ್ ಅವರಿಗೇನೆ ಹೇಳಿದ್ದೆ ಅನ್ನೋದನ್ನು ಇಲ್ಲಿ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka













