Last Updated:
ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ದುಲೀಪ್ ಟ್ರೋಫಿಯ ಫೈನಲ್ (Duleep Trophy Final) ಮಹಾಸಮರದಲ್ಲಿ ಇಶಾನ್ ತಮ್ಮ ಬ್ಯಾಟಿಂಗ್ ಮೂಲಕ ರನ್ ಮಳೆ ಹರಿಸಿದ್ದಾರೆ.
ಭಾರತೀಯ ದೇಶಿ ಕ್ರಿಕೆಟ್ ಇತಿಹಾಸದಲ್ಲಿ ದೀರ್ಘಕಾಲ ನೆನಪಿನಲ್ಲಿ ಉಳಿಯುವಂತಹ ಅದ್ಭುತ ದಾಖಲೆಯೊಂದನ್ನು ಇಶಾನ್ ಕಿಶನ್ (Ishan Kishan) ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ದುಲೀಪ್ ಟ್ರೋಫಿಯ ಫೈನಲ್ (Duleep Trophy Final) ಮಹಾಸಮರದಲ್ಲಿ ಇಶಾನ್ ತಮ್ಮ ಬ್ಯಾಟಿಂಗ್ ಮೂಲಕ ರನ್ ಮಳೆ ಹರಿಸಿದ್ದಾರೆ. ಈ ಮಹತ್ವದ ಪಂದ್ಯದಲ್ಲಿ ಪೂರ್ವ ವಲಯ (East Zone) ತಂಡದ ನಾಯಕರಾಗಿರುವ ಇಶಾನ್ ಕಿಶನ್, ದಕ್ಷಿಣ ವಲಯ (South Zone) ವಿರುದ್ಧದ ಎರಡೂ ಇನ್ನಿಂಗ್ಸ್‌ಗಳನ್ನು ಸೇರಿಸಿ ಒಟ್ಟು 350 ರನ್ ಚಚ್ಚಿದ್ದಾರೆ. ಈ ಮೂಲಕ ದುಲೀಪ್ ಟ್ರೋಫಿಯ ಒಂದೇ ಪಂದ್ಯದಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ ಎಂಬ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.














