IPL 2027: ಸಿಎಸ್​​​ಕೆ ಹೆಡ್​ ಕೋಚ್ ಸ್ಥಾನಕ್ಕೆ ವಿಶ್ವಕಪ್ ವಿಜೇತ ನಾಯಕ! ಕುತೂಹಲ ಕೆರಳಿಸಿದ ಮಾಜಿ ಚೆನ್ನೈ ಪ್ಲೇಯರ್ ಹೇಳಿಕೆ | ಕ್ರೀಡಾ ಸುದ್ದಿ | ACTPnews

ಸಿಎಸ್​ಕೆ


Last Updated:

ಇಯಾನ್ ಮಾರ್ಗನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮುಖ್ಯ ಕೋಚ್ ಆಗಿ ಇನ್ನೂ ಅಧಿಕೃತವಾಗಿ ನೇಮಿಸಲಾಗಿಲ್ಲ. ಆದರೆ ಸ್ಟೀಫನ್ ಫ್ಲೆಮಿಂಗ್ ನಿರ್ಗಮನದ ಬಳಿಕ ಇಂಗ್ಲೆಂಡ್‌ನ ಮಾಜಿ ನಾಯಕನ ಹೆಸರು ಸಿಎಸ್‌ಕೆ ಕೋಚ್ ಹುಂಡಿಗೆ ಬಲವಾಗಿ ಕೇಳಿಬರುತ್ತಿದೆ. ಭಾರತೀಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಸುಳಿವು ನೀಡಿದ್ದಾರೆ

 ಸಿಎಸ್​ಕೆ
ಸಿಎಸ್​ಕೆ

ಸ್ಟೀಫನ್ ಫ್ಲೆಮಿಂಗ್ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗಳ ಹೆಡ್ ಕೋಚ್ ಸ್ಥಾನವನ್ನ ತ್ಯಜಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಆ ಸ್ಥಾನಕ್ಕೆ ಯಾರು ಬರಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ. ಎಂಎಸ್ ಧೋನಿ ಈ ವರ್ಷ ನಿವೃತ್ತಿಯಾಗಬಹುದು, ಅವರೇ ತಂಡದ ಕೋಚ್ ಜವಾಬ್ದಾರಿ ವಹಿಸಿಕೊಳ್ಳಬಹುದು ಎನ್ನಲಾಗುತ್ತಿತ್ತು. ಆದರೆ ಸಿಎಸ್​​ಕೆ ಮಾಜಿ ಕ್ರಿಕೆಟರ್ ಅಶ್ವಿನ್ ಅಚ್ಚರಿ ಹೇಳಿಕೆ ನೀಡಿ ಕುತೂಹಲ ಕೆರಳಿಸುವಂತೆ ಮಾಡಿದ್ದಾರೆ. ಇಂಗ್ಲೆಂಡ್‌ನ ವಿಶ್ವಕಪ್ ವಿಜೇತ ನಾಯಕ ಇಯೋನ್ ಮಾರ್ಗನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ. ಮಾರ್ಗನ್ ಅವರ ನೇಮಕಾತಿ ಕುರಿತು ಮುಂದಿನ ವಾರ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ ಎಂದು ಅಶ್ವಿನ್  ಹೊಸ ಬಾಂಬ್ ಸಿಡಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed