Last Updated:
ಹೆಚ್ಚು ಪ್ರಯಾಣಿಕರ ದಟ್ಟನೆಯನ್ನು ನಿವಾರಿಸಲು ಹಾಗೂ ಪ್ರಯಾಣಿಕರ ಬೇಡಿಕೆಯ ಮೇರೆಗೆ ಐಪಿಎಲ್ ಫೈನಲ್‌ಗಾಗಿ ವಿಶೇಷ ದರದಲ್ಲಿ ಎರಡು ಸೂಪರ್ ಫಾಸ್ಟ್ ರೈಲನ್ನು ಬಿಡಲು ಪಶ್ಚಿಮ ರೈಲ್ವೆ ಗ್ರೀನ್ ಸಿಗ್ನಲ್ ನೀಡಿದೆ.
ಈ ಬಾರಿಯ ಐಪಿಎಲ್ ಫೈನಲ್ (IPL Final) ಪಂದ್ಯಾವಳಿಗಾಗಲೇ ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದೆ. ಈಗಾಗಲೇ ಫೈನಲ್ ಪ್ರವೇಶಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಮತ್ತು ಗುಜರಾತ್ ಟೈಟನ್ಸ್ (GT) ಪ್ರಶಸ್ತಿ ಸುತ್ತಿನ ಕಾದಾಟ ನಡೆಸಲಿವೆ. ಆದರೆ ಇದೀಗ ಐಪಿಎಲ್‌ನಲ್ಲಿ ಎರಡನೇ ಬಾರಿ ಚಾಂಪಿಯನ್ ಪಟ್ಟವನ್ನು ಯಾರು ಅಲಂಕರಿಸುತ್ತಾರೆ ಎಂಬುದರ ಬಗ್ಗೆ ಚರ್ಚೆ ಜೋರಾಗಿರುವ ನಡುವೆ ಇದೀಗ ಪಶ್ಚಿಮ ರೈಲ್ವೆ (Western Railways) ಯು ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ.
ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆದ ಅಹಮದಾಬಾದ್‌ನ ನರೇಂದ್ರ ಮೋದಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಸಂಜೆ 7:30 ಕ್ಕೆ ಆರಂಭವಾಗಲಿರುವ ಗುಜರಾತ್ ಮತ್ತು ಬೆಂಗಳೂರು ನಡುವಿನ ಐತಿಹಾಸಿಕ ಫೈನಲ್ ಪಂದ್ಯಕ್ಕೆ ಮುಂಬೈನಿಂದ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಪಂದ್ಯಕ್ಕಾಗಿ ಟಿಕೆಟ್ ಹೊಂದಿದ್ದಾರೆಂದು ಅರಿತುಕೊಂಡ ಮೇಲೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹೋಗಲು ಕಡಿಮೆ ಅನುಕೂಲಕರ ಮಾರ್ಗಗಳಿರುವುದರಿಂದ ರೈಲಿನ ಬೇಡಿಕೆ ಹೆಚ್ಚುತ್ತಿದೆ. ಅದರಿಂದಾಗಿ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು ಪಶ್ಚಿಮ ರೈಲ್ವೆ ಅಧಿಕಾರಿಗಳು ಮುಂಬೈ ಮತ್ತು ಅಹಮದಾಬಾದ್ ನಡುವಿನ ಪ್ರಯಾಣ ಅವಧಿ ಕಡಿಮೆ ಮಾಡಲು ವಿಶೇಷ ದರದ ಎರಡು ವಿಶೇಷ ಸೂಪರ್‌ಫಾಸ್ಟ್ ರೈಲುಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ.
ಈ ಘೋಷಣೆಯನ್ನು ಮಾಡಿದ ನಂತರ ಇಂದು ಬೆಳಿಗ್ಗೆ ಆನ್‌ಲೈನ್ ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿತ್ತು. ಆನ್‌ಲೈನ್ ಬುಕ್ಕಿಂಗ್ ಆರಂಭವಾದ ಕೆಲವೇ ನಿಮಿಷಗಳಲ್ಲಿ ಡಿಜಿಟಲ್ ವೇದಿಕೆಗಳೆಲ್ಲಾ ತುಂಬಿ ತುಳುಕಿ ಎಲ್ಲಾ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿದೆ.
ಐಪಿಎಲ್ ಫೈನಲ್‌ಗಾಗಿ ಬೇಡಿಕೆಯು ಹೆಚ್ಚುತ್ತಿರುವುದನ್ನು ಕಂಡು ಎರಡು ವಿಶೇಷ ಸೂಪರ್ ಫಾಸ್ಟ್ ರೈಲನ್ನು ಬಿಡಲು ನಿರ್ಧರಿಸಿ ಇಂದು ಬೆಳಗ್ಗೆಯಷ್ಟೇ ಬುಕ್ಕಿಂಗ್ ಆರಂಭಿಸಿದೆವು. ಬುಕ್ಕಿಂಗ್ ಆರಂಭವಾದ ಕೆಲವೇ ನಿಮಿಷಗಳಲ್ಲಿ 100% ಟಿಕೆಟ್‌ಗಳು ಸೋಲ್ಡ್ ಔಟ್ ಆದವು. ಜನರ ಬೇಡಿಕೆಯನ್ನು ಮನಗಂಡು ರಜಾದಿನಗಳು ಮತ್ತು ಹಬ್ಬಗಳಿಗೆ ಬಿಡುವಂತೆ ಐಪಿಎಲ್ ಫೈನಲ್‌ಗೆ ವಿಶೇಷ ರೈಲಿನ ಅವಕಾಶ ಕಲ್ಪಿಸಿದ್ದೇವೆ ಎಂದು ಪಶ್ಚಿಮ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿನೀತ್ ಅಭಿಷೇಕ್ ಮಾಹಿತಿ ನೀಡಿದ್ದಾರೆ.
ಪಂದ್ಯಕ್ಕೂ ಆರಂಭಕ್ಕೂ ಪ್ರೀ ಮ್ಯಾಚ್ ಎಲೆಕ್ಟ್ರಿಕ್ ವಾತಾವರಣವನ್ನು(Pre match electric atmosphere) ಸವಿಯಲು ಬಯಸುವ ಅಭಿಮಾನಿಗಳಿಗೆ ಮುಂಬೈ ಸೆಂಟ್ರಲ್ ಅಹಮದಾಬಾದ್ ಎಸಿ ಸೂಪರ್‌ಫಾಸ್ಟ್ ಸ್ಪೆಷಲ್ ಅತ್ಯುತ್ತಮ ಬೆಳಗಿನ ವಾಹನವಾಗಿದೆ. ಇದು ಭಾನುವಾರ ಬೆಳಿಗ್ಗೆ 6:20 ಕ್ಕೆ ಮುಂಬೈ ಸೆಂಟ್ರಲ್‌ನಿಂದ ಹೊರಟು ಮಧ್ಯಾಹ್ನ 12:40 ಕ್ಕೆ ಅಹಮದಾಬಾದ್ ತಲುಪುತ್ತದೆ. ಇದು ಟಾಸ್ಗೂ ಮೊದಲು ಸಾಕಷ್ಟು ಬಫರ್ ಸಮಯವನ್ನು ಒದಗಿಸಿದೆ.
ಐಪಿಎಲ್ ಫೈನಲ್‌ನ ರಾತ್ರಿ ಹೋಟೆಲ್ ವಾಸ್ತವ್ಯವನ್ನು ಬಿಟ್ಟು ಟ್ರೋಫಿ ಆಚರಣೆಯ (Trophy Ceremony) ನಂತರ ಹಿಂತಿರುಗುವವರಿಗೆ ಅಹಮದಾಬಾದ್‌ನಿಂದ ಬಾಂದ್ರಾ ಟರ್ಮಿನಸ್ ವಿಶೇಷ ರೈಲು ಜೂನ್ 1 ರಂದು ಭಾರತೀಯ ಬೆಳಿಗ್ಗೆ 3:50ಕ್ಕೆ ಅಹಮದಾಬಾದ್‌ನಿಂದ ಹೊರಟು, ಸೋಮವಾರ ಮಧ್ಯಾಹ್ನ 12:15 ಕ್ಕೆ ಪ್ರಯಾಣಿಕರನ್ನು ಬಾಂದ್ರಾಕ್ಕೆ ಕರೆತರಲಿದೆ.
May 30, 2026 10:17 PM IST
IPL 2026: ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ರೈಲ್ವೇ! ಫೈನಲ್ ನೋಡಲು ಹೋಗುವ ಫ್ಯಾನ್ಸ್ಗಾಗಿ 2 ಸೂಪರ್ ಫಾಸ್ಟ್ ರೈಲುಗಳಿಗೆ ಗ್ರೀನ್ ಸಿಗ್ನಲ್













