IPL 2026: ಐಪಿಎಲ್​ ಅಂತ್ಯ, ಟೀಮ್ ಇಂಡಿಯಾ ಮೈದಾನಕ್ಕೆ ಇಳಿಯೋದು ಯಾವಾಗ? ಇಲ್ಲಿದೆ ಮುಂದಿನ 2 ತಿಂಗಳ ವೇಳಾಪಟ್ಟಿ | ಕ್ರೀಡಾ ಸುದ್ದಿ | ACTPnews

IPL 2026: ಐಪಿಎಲ್​ ಅಂತ್ಯ, ಟೀಮ್ ಇಂಡಿಯಾ ಮೈದಾನಕ್ಕೆ ಇಳಿಯೋದು ಯಾವಾಗ? ಇಲ್ಲಿದೆ ಮುಂದಿನ 2 ತಿಂಗಳ ವೇಳಾಪಟ್ಟಿ | ಕ್ರೀಡಾ ಸುದ್ದಿ


ಕೊಹ್ಲಿ-ರೋಹಿತ್ ಕಮ್​ಬ್ಯಾಕ್

ಈ ಏಕೈಕ ಟೆಸ್ಟ್ ಪಂದ್ಯದ ನಂತರ, ಭಾರತ ತಂಡವು ಮುಂದಿನ ವರ್ಷದ ವಿಶ್ವಕಪ್‌ಗೆ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಸಿದ್ಧತೆಗಳನ್ನು ಪ್ರಾರಂಭಿಸಲಿದೆ. ಈ ಸರಣಿಯು ಟೆಸ್ಟ್ ಮತ್ತು ಟಿ20ಐ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಕಮ್​ಬ್ಯಾಕ್​​ಗೆ ಸಾಕ್ಷಿಯಾಗಲಿದೆ.

ಯುವ ಆಟಗಾರರೂ ಕಣಕ್ಕೆ

ನಂತರ ತಿಲಕ್ ವರ್ಮಾ ನಾಯಕತ್ವದ ಭಾರತ ಎ ತಂಡವು ಜೂನ್ 9-21 ರಿಂದ ಶ್ರೀಲಂಕಾ ಎ ಮತ್ತು ಅಫ್ಘಾನಿಸ್ತಾನ ಎ ವಿರುದ್ಧ ತ್ರಿಕೋನ ಸರಣಿಯನ್ನು ಆಡಲಿದೆ. ಭಾರತ ಎ ತಂಡದಲ್ಲಿ ಐಪಿಎಲ್ 2026ರ ಆರೆಂಜ್ ಕ್ಯಾಪ್ ವಿಜೇತ ವೈಭವ್ ಸೂರ್ಯವಂಶಿ, ಉಪನಾಯಕ ರುತುರಾಜ್ ಗಾಯಕ್ವಾಡ್ ಮತ್ತು ಆರಂಭಿಕ ಆಟಗಾರರಾದ ಪ್ರಭಸಿಮ್ರನ್ ಸಿಂಗ್ ಮತ್ತು ಪ್ರಿಯಾಂಶ್ ಆರ್ಯ ಇದ್ದಾರೆ.

ಜೂನ್​​ನಲ್ಲಿ ಐರ್ಲೆಂಡ್-ಇಂಗ್ಲೆಂಡ್ ವಿರುದ್ಧ ಸರಣಿ

ಜೂನ್‌ನಲ್ಲಿ ಭಾರತ ಎರಡು ಟಿ20 ಪಂದ್ಯಗಳಿಗಾಗಿ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಇದರ ನಂತರ, ಜುಲೈ 1 ರಿಂದ 19 ರವರೆಗೆ ಭಾರತ ಇಂಗ್ಲೆಂಡ್ ವಿರುದ್ಧ ಐದು ಟಿ20 ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಜುಲೈನಲ್ಲಿ ಭಾರತ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದ್ದು, ಮೂರು ಟಿ20 ಪಂದ್ಯಗಳನ್ನು ಆಡಲಿದೆ. ಇದರ ನಂತರ, ಸೆಪ್ಟೆಂಬರ್​​ನಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ. ವರ್ಷದ ಕೊನೆಯಲ್ಲಿ, ಶ್ರೀಲಂಕಾ ವಿರುದ್ಧ ತವರಿನಲ್ಲಿ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಲಿದೆ.

ಅಫ್ಘಾನಿಸ್ತಾನದ ಭಾರತ ಪ್ರವಾಸ 2026

ಏಕೈಕ ಟೆಸ್ಟ್: ಜೂನ್ 6 ರಿಂದ 10 – ಹೊಸ ಚಂಡೀಗಢ

1 ನೇ ಏಕದಿನ ಪಂದ್ಯ: ಜೂನ್ 13 – ಧರ್ಮಶಾಲಾ

2 ನೇ ಏಕದಿನ ಪಂದ್ಯ: ಜೂನ್ 17 – ಲಕ್ನೋ

3 ನೇ ಏಕದಿನ ಪಂದ್ಯ: ಜೂನ್ 20 – ಚೆನ್ನೈ

ಶ್ರೀಲಂಕಾ ಎ-ತಂಡದ ತ್ರಿಕೋನ ಸರಣಿ

ಮೊದಲ ಪಂದ್ಯ: ಜೂನ್ 9 – ಶ್ರೀಲಂಕಾ ಎ vs ಭಾರತ ಎ – ಡಂಬುಲ್ಲಾ

ಎರಡನೇ ಪಂದ್ಯ: ಜೂನ್ 11 – ಅಫ್ಘಾನಿಸ್ತಾನ ಎ vs ಭಾರತ ಎ – ಡಂಬುಲ್ಲಾ

ನಾಲ್ಕನೇ ಪಂದ್ಯ: ಜೂನ್ 15 – ಶ್ರೀಲಂಕಾ ಎ vs ಭಾರತ ಎ – ಡಂಬುಲ್ಲಾ

ಐದನೇ ಪಂದ್ಯ: ಜೂನ್ 17 – ಅಫ್ಘಾನಿಸ್ತಾನ ಎ vs ಭಾರತ ಎ – ಡಂಬುಲ್ಲಾ

ಫೈನಲ್: ಜೂನ್ 21 – ಡಂಬುಲ್ಲಾ

2026 ರ ಭಾರತದ ಐರ್ಲೆಂಡ್ ಪ್ರವಾಸ

1ನೇ ಟಿ20: ಜೂನ್ 26 – ಬೆಲ್‌ಫಾಸ್ಟ್

2ನೇ ಟಿ20: ಜೂನ್ 28 – ಬೆಲ್‌ಫಾಸ್ಟ್

ಭಾರತ ತಂಡದ ಇಂಗ್ಲೆಂಡ್ ಪ್ರವಾಸ 2026

1ನೇ ಟಿ20: ಜುಲೈ 1 – ಚೆಸ್ಟರ್-ಲೆ-ಸ್ಟ್ರೀಟ್

2ನೇ ಟಿ20: ಜುಲೈ 4 – ಮ್ಯಾಂಚೆಸ್ಟರ್

3ನೇ ಟಿ20: ಜುಲೈ 7 – ನಾಟಿಂಗ್ಹ್ಯಾಮ್

4ನೇ ಟಿ20: ಜುಲೈ 9 – ಬ್ರಿಸ್ಟಲ್

5ನೇ ಟಿ20: ಜುಲೈ 11 – ಸೌತಾಂಪ್ಟನ್

1ನೇ ODI: ಜುಲೈ 14 – ಬರ್ಮಿಂಗ್ಹ್ಯಾಮ್

2ನೇ ODI: ಜುಲೈ 16 – ಕಾರ್ಡಿಫ್

3ನೇ ODI: ಜುಲೈ 19 – ಲಾರ್ಡ್ಸ್



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed