Last Updated:
ವೈರಲ್ ವಿಡಿಯೋದಲ್ಲಿ ಅಪೂರ್ವ ಮುಖಿಜಾ ಚಿತ್ರರಂಗದಲ್ಲಿ ಅವಕಾಶಗಳ ಬಗ್ಗೆ ಮಾತನಾಡುತ್ತಾ, ಸಣ್ಣ ಪಾತ್ರಗಳಿಗಾಗಿ ಅಥವಾ ಸಾಮಾನ್ಯ ಅವಕಾಶಗಳಿಗಾಗಿ ಯಾವುದೇ ರೀತಿಯ ರಾಜಿಗೆ ಸಿದ್ಧರಿಲ್ಲ ಎಂದು ಹೇಳುತ್ತಾರೆ. ಆದರೆ ಇದೇ ವೇಳೆ ಅವರು ಹಣಕ್ಕೆ ಸಂಬಂಧಿಸಿದಂತೆ ನೀಡಿರುವ ಒಂದು ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ಡಿಜಿಟಲ್ ಯುಗದಲ್ಲಿ, ಇನ್ಫ್ಲುಯೆನ್ಸರ್ಗಳು (Influencers) ಮತ್ತು ಕಂಟೆಂಟ್ ಕ್ರಿಯೇಟರ್ಗಳು ಲಕ್ಷಾಂತರ ಜನರ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಆದರೆ ಇದೇ ಜನಪ್ರಿಯತೆ ಕೆಲವೊಮ್ಮೆ ವಿವಾದಗಳಿಗೆ ಕಾರಣವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಸಾಮಾಜಿಕ ಮಾಧ್ಯಮ ಪ್ರಭಾವಿಗಳು ತಮ್ಮ ಹೇಳಿಕೆಗಳು, ವಿಡಿಯೋಗಳು ಅಥವಾ ಹಾಸ್ಯ ವಿಷಯಗಳ ಕಾರಣದಿಂದ ಟೀಕೆಗೆ ಗುರಿಯಾಗುತ್ತಿರುವುದು ಸಾಮಾನ್ಯವಾಗಿದೆ. ಇದೀಗ ‘ದಿ ರೆಬೆಲ್ ಕಿಡ್’ (The Rebel Kid) ಎಂಬ ಹೆಸರಿನಿಂದ ಖ್ಯಾತಿ ಪಡೆದಿರುವ ಅಪೂರ್ವ ಮುಖಿಜಾ (Apoorva Mukhija) ಹೇಳಿರುವ ಒಂದು ಮಾತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಗ್ರಾಸವಾಗಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ಹಳೆಯ ವಿಡಿಯೋದಲ್ಲಿ ಅಪೂರ್ವ ಮುಖಿಜಾ ಅವರು ಕಾಸ್ಟಿಂಗ್ ನಿರ್ದೇಶಕರೊಂದಿಗೆ ನಡೆದ ಸಂಭಾಷಣೆಯ ಅನುಭವವನ್ನು ಹಂಚಿಕೊಳ್ಳುತ್ತಿರುವುದು ಕಾಣಿಸುತ್ತದೆ. ಈ ವಿಡಿಯೋ ಹಲವು ವರ್ಷಗಳ ಹಿಂದಿನದಾಗಿದ್ದರೂ, ಈಗ ಮತ್ತೆ ವೈರಲ್ ಆಗಿದೆ.
”The Rebel Kid’ Apoorva Mukhija once remarked:
“I am not sleeping with anyone for a two-rupee role, sir. If some Dubai Sheikh throws ₹10-15 crore at my face, then maybe I can consider it. But for a role? Uh-uh.”Since then, she has landed brand endorsements, appeared in OTT… pic.twitter.com/CUIxd5YW0P
— Brutal Truth (@sarkarstix) June 10, 2026
ವಿಡಿಯೋದಲ್ಲಿ ಅವರು ಚಿತ್ರರಂಗದಲ್ಲಿ ಅವಕಾಶಗಳ ಬಗ್ಗೆ ಮಾತನಾಡುತ್ತಾ, ಸಣ್ಣ ಪಾತ್ರಗಳಿಗಾಗಿ ಅಥವಾ ಸಾಮಾನ್ಯ ಅವಕಾಶಗಳಿಗಾಗಿ ಯಾವುದೇ ರೀತಿಯ ರಾಜಿಗೆ ಸಿದ್ಧರಿಲ್ಲ ಎಂದು ಹೇಳುತ್ತಾರೆ. ಆದರೆ ಇದೇ ವೇಳೆ ಅವರು ಹಣಕ್ಕೆ ಸಂಬಂಧಿಸಿದಂತೆ ನೀಡಿರುವ ಒಂದು ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ವಿಡಿಯೋದಲ್ಲಿ ಅಪೂರ್ವ ಮುಖಿಜಾ, ಎರಡು ರೂಪಾಯಿ ಪಾತ್ರಕ್ಕಾಗಿ ಯಾರೊಂದಿಗೂ ಮಲಗಲ್ಲ ಸರ್. ದುಬೈ ಶೇಖ್ ಅಂತಹವರು ನನ್ನ ಮುಖಕ್ಕೆ 10-15 ಕೋಟಿ ರೂ. ಕೊಟ್ರೆ , ನಾನು ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಬಹುದು ಆದರೆ ಒಂದು ಪಾತ್ರಕ್ಕಾಗಿ ಎಂದು ಹೇಳಿಕೆ ನೀಡಿದ್ದಾರೆ.
ಅದೇ ವಿಡಿಯೋದಲ್ಲಿ ಅಪೂರ್ವ ಅವರು ಕಾಸ್ಟಿಂಗ್ ನಿರ್ದೇಶಕರೊಂದಿಗೆ ಮಾತನಾಡುವಾಗ ಮೊದಲಿಗೆ ಭಯವಾಗುತ್ತಿತ್ತು ಎಂದು ಹೇಳುತ್ತಾರೆ. ನಂತರ ದೊಡ್ಡ ಆಫರ್ಗಳು ಬಂದರೆ ತಮ್ಮ ಮ್ಯಾನೇಜರ್ ಮೂಲಕ ಸಂಪರ್ಕಿಸಬಹುದು ಎಂದು ಹೇಳಿರುವುದೂ ಚರ್ಚೆಗೆ ಕಾರಣವಾಗಿದೆ.
ಅಪೂರ್ವ ಮುಖಿಜಾ ವಿವಾದಗಳಲ್ಲಿ ಸಿಲುಕಿರುವುದು ಇದೇ ಮೊದಲ ಬಾರಿ ಅಲ್ಲ. ಕೆಲವು ತಿಂಗಳ ಹಿಂದೆ ಅವರು ಕೋಚೆಲ್ಲಾ ಸಂಗೀತ ಉತ್ಸವಕ್ಕೆ ತೆರಳುವ ಮುನ್ನ ಹಂಚಿಕೊಂಡಿದ್ದ ವಿಡಿಯೋ ಕೂಡ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು.
ಆ ವಿಡಿಯೋ ಹೊರಬಂದ ಬಳಿಕ ಹಲವರು ಅದನ್ನು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೃತ್ಯ ಎಂದು ಆರೋಪಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಕೆಲವರು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.
ಆ ವಿವಾದ ಇನ್ನೂ ಜನರ ನೆನಪಿನಿಂದ ಮಾಸುವ ಮುನ್ನವೇ ಇದೀಗ ‘ದುಬೈ ಶೇಖ್’ ಹೇಳಿಕೆ ಮತ್ತೆ ಹೊಸ ಚರ್ಚೆಗೆ ಕಾರಣವಾಗಿದೆ. ಹೀಗಾಗಿ ಅಪೂರ್ವ ಮುಖಿಜಾ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ವಿಷಯವಾಗಿದ್ದಾರೆ.
Bangalore [Bangalore],Bangalore,Karnataka
Jun 18, 2026 10:26 PM IST













