Last Updated:
ಅನಿಲ್ ಕಪೂರ್ ಅವರಿಗೆ ಪಲ್ಲವಿ ಅನು ಪಲ್ಲವಿ ಕನ್ನಡದ ಮೊದಲ ಚಿತ್ರವೇ ಆಗಿತ್ತು. ಮಣಿರತ್ನಂ ಅವರಿಗೂ ಇದು ಫಸ್ಟ್ ಸಿನಿಮಾ ಆಗಿತ್ತು. ಆದರೆ, ಅನಿಲ್ಗೆ ಕನ್ನಡ ಕಲಿಯುವ ಸವಾಲಿತ್ತು. ಆಗ ಕನ್ನಡದ ನಾಯಕ ನಟ ಇವರಿಗೆ ಹೆಲ್ಪ್ ಮಾಡಿದರು. ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ.
ಅನಿಲ್ ಕಪೂರ್ (Anil Kapoor) ಆಗತಾನೇ ಕನ್ನಡಕ್ಕೆ ಬಂದಿದ್ದರು. ಡೈರೆಕ್ಟರ್ ಮಣಿರತ್ನಂ (Mani Ratnam) ಅವರಿಗೂ ಪಲ್ಲವಿ ಅನು ಪಲ್ಲವಿ ಮೊದಲ ಚಿತ್ರವೇ ಆಗಿತ್ತು. ಬಾಲು ಮಹೇಂದ್ರ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡ್ತಾ ಇದ್ದರು. ಆದರೆ, ಅನಿಲ್ ಕಪೂರ್ ಬಾಲಿವುಡ್ ಅಲ್ಲಿ ಒಂದೇನೋ ಚಿತ್ರ ಮಾಡಿದ್ದರು. ದೊಡ್ಡ ಚಿತ್ರ ಅಂತ ಬಂದ್ರೆ ಅದು ಈ ಪಲ್ಲವಿ ಅನು ಪಲ್ಲವಿ ಸಿನಿಮಾನೇ ಆಗಿತ್ತು. ಈ ಚಿತ್ರದಲ್ಲಿ ಕನ್ನಡ ಮಾತನಾಡ್ಬೇಕು, ಅದನ್ನ ಕಲಿಯಲೇಬೇಕಿತ್ತು. ಆಗ ಈ ಕಲಾವಿದನಿಗೆ ಕನ್ನಡದ ಒಬ್ಬ ನಾಯಕ ನಟ (Hero) ಹೆಲ್ಪ್ ಮಾಡಿದರು. ಒಂದೇ ರೂಮ್ ಅಲ್ಲಿಯೇ ಇದ್ದ ಇವರು ಸಂಜೆ ವೇಳೆಗೆ ಗುಂಡು ಹಾಕೋಕು ಹೋಗ್ತಾರೆ. ಈ ಎಲ್ಲ ಜಾಲಿ ಟೈಮ್ ಜೊತೆಗೆ ಅನಿಲ್ ಕಪೂರ್ (Anil Kapoor) ಅವರಿಗೆ ಕನ್ನಡ ಕಲಿಸಿದ ಆ ನಾಯಕ ತಮ್ಮ ಆ ದಿನಗಳನ್ನ ಈಗ ನೆನಪಿಸಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.
ಪಲ್ಲವಿ ಅನು ಪಲ್ಲವಿ ಚಿತ್ರ ಜನವರಿ-7,1983 ರಂದು ರಿಲೀಸ್ ಆಗಿತ್ತು. ಹಾಗೆ ಈ ಚಿತ್ರ ಬಂದು 43 ವರ್ಷ ಆಗಿದೆ. ಈ ಚಿತ್ರದ ಮೇಕಿಂಗ್ ವಿಚಾರಕ್ಕೆ ಬಂದ್ರೆ ಅನಿಲ್ ಕಪೂರ್ ಈ ಚಿತ್ರಕ್ಕಾಗಿ ಕನ್ನಡ ಕಲಿತುಕೊಂಡಿದ್ದಾರೆ.
ಅನಿಲ್ಗೆ ಕನ್ನಡ ಕಲಿಯೋ ಸಾವಲು
(ಚಿತ್ರ ಕೃಪೆ: ಅನಿಲ್ ಕಪೂರ್ ಇನ್ಸ್ಟಾಗ್ರಾಮ್)
ಅನಿಲ್ ಕಪೂರ್ ಅವರು ಈ ಚಿತ್ರ ಮಾಡೋ ಮೊದಲು ಬಾಲಿವುಡ್ ಅಲ್ಲಿ ಒಂದು ಚಿತ್ರ ಮಾಡಿದ್ದರು ಅನಿಸುತ್ತದೆ. ಪಲ್ಲವಿ ಅನು ಪಲ್ಲವಿ ಚಿತ್ರ ಇವರಿಗೆ ದೊಡ್ಡ ಚಿತ್ರವೇ ಆಗಿತ್ತು. ಕನ್ನಡದ ಮೊದಲ ಚಿತ್ರವೂ ಆಗಿತ್ತು.
ಅನಿಲ್ ಕಪೂರ್ ಅವರು ಈ ಚಿತ್ರಕ್ಕಾಗಿಯೇ ಕನ್ನಡ ಕಲಿತರು. ಇದನ್ನ ಇವರ ರೂಮ್ ಮೇಟ್ ಕಲಿಸಿದ್ದರು. ಈ ರೂಮ್ ಮೇಟ್ ಕೂಡ ಒಬ್ಬ ನಟರೇ ಆಗಿದ್ದರು.
ಅನಿಲ್ ಕಪೂರ್ ಅವರು ನನ್ನಗೂ ಕನ್ನಡ ಕಲಿಸು ಅಂತ ಕೇಳುತ್ತಿದ್ದರು. ಆಗಲೇ ಸುರೇಶ್ ಹೆಬ್ಳೀಕರ್ ಕನ್ನಡ ಕಲಿಸೋಕೆ ಮುಂದಾದರು. ಕನ್ನಡ ಕೂಡ ಕಲಿಸಿದರು.
ಇವರ ನಡುವೆ ಅತ್ಮೀಯತೆನೂ ಬೆಳೆಯಿತು. ಸಂಜೆ ವೇಳೆಗೆ ಇಬ್ಬರು ಗುಂಡು ಹಾಕೋಕು ಹೋಗ್ತಾ ಇದ್ದರು. ಅಷ್ಟೊಂದು ಸಲುಗೆ ಇಬ್ಬರಲ್ಲೂ ಇತ್ತು.
ನನಗೂ ಕನ್ನಡ ಕಲಿಸು…
(ಚಿತ್ರ ಕೃಪೆ: ಅನಿಲ್ ಕಪೂರ್ ಇನ್ಸ್ಟಾಗ್ರಾಮ್)
ಅನಿಲ್ ಕಪೂರ್ ಮತ್ತು ಸುರೇಶ್ ಹೆಬ್ಳೀಕರ್ ಒಳ್ಳೆ ಸ್ನೇಹಿತರೇ ಆಗಿದ್ದರು. ಅನಿಲ್ ಸದಾ ಹೇಳ್ತಾನೇ ಇದ್ದರು. ನಾನು ಚೆಂಬೂರಿನಲ್ಲಿಯೇ ಇರೋದು. ನೀನು ಅಲ್ಲಿಗೇನೆ ಬಂದು ಬಿಡು ಅಂತಲೇ ಹೇಳೋರು. ಆದರೆ, ಸುರೇಶ್ ಹೆಬ್ಳೀಕರ್ ಆ ರೀತಿ ಏನು ನಿರ್ಧಾರ ತೆಗೆದುಕೊಳ್ಳಲಿಲ್ಲ. ಬದಲಾಗಿ ಕನ್ನಡದಲ್ಲಿಯೇ ಉಳಿದರು. ಇಲ್ಲಿಯೇ ಒಳ್ಳೆ ಸಿನಿಮಾಗಳನ್ನ ಮಾಡಿದರು. ಆಲೆಮನೆ, ಅಪರಿಚಿತದಂತಹ ಚಿತ್ರ ಮಾಡಿದರು.
ಅಪರಿಚಿತ ಚಿತ್ರದ ಕತೆಯನ್ನ ಓದಿ ಇವರಿಗೆ ತುಂಬಾನೆ ಖುಷಿ ಆಯಿತು. ಅಷ್ಟೆ ಶಾಕ್ ಕೂಡ ಆಯಿತು. ಡೈರೆಕ್ಟರ್ ಕಾಶಿನಾಥ್ ಅವರು ಈ ಕತೆ ಮಾಡಿದ್ದರು.
ಈ ಒಂದು ಸ್ಕ್ರಿಪ್ಟ್ ಓದುವ ಮೊದಲು ಸುರೇಶ್ ಹೆಬ್ಳೀಕರ್ ಅವರಿಗೆ ಡೌಟ್ ಇತ್ತು. ಕಾಶಿನಾಥ್ ಅವರಿಗೆ ಸಿನಿಮಾ ಮಾಡೋಕೆ ಬರ್ತದೋ ಇಲ್ವೋ ಅನ್ನುವ ಅನುಮಾನ ಇತ್ತು.
ಆದರೆ, ಸ್ಕ್ರಿಪ್ಟ್ ಓದಿದ ಮೇಲೆ ವಿಶ್ವಾಸ ಬಂತು. ಕಾರಣ, ಇವರಿಗೆ ಸ್ಕ್ರಿಪ್ಟ್ ಓದಿದಾಗಲೇ ಒಂದು ಸಿನಿಮಾ ನೋಡಿದ ಅನುಭವ ಆಗಿತ್ತು. ಈ ಎಲ್ಲವನ್ನು ಸುರೇಶ್ ಹೆಬ್ಳೀಕರ್ ಅವರು ಗ್ಲೋಬಲ್ ಕನ್ನಡ ಮೀಡಿಯಾದ ಸಂದರ್ಶನದಲ್ಲಿಯೇ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.
Bangalore,Karnataka













