INDW vs PAKW, WT20I WC: ಅಬ್ಬರಿಸಿದ ಮಂಧಾನ, ರಿಚಾ ಘೋಷ್​! ಪಾಕಿಸ್ತಾನಕ್ಕೆ 171 ರನ್​​ಗಳ ಸವಾಲಿನ ಗುರಿ ನೀಡಿದ ಭಾರತ | ಕ್ರೀಡಾ ಸುದ್ದಿ | ACTPnews

ಭಾರತ vs ಪಾಕಿಸ್ತಾನ


Last Updated:

ಸ್ಮೃತಿ ಮಂಧಾನ 68 ರನ್​​ಗಳಿಸಿದರೆ, ನಾಯಕಿ ಹರ್ಮನ್​ಪ್ರೀತ್ ಕೌರ್ 36 ಹಾಗೂ ರಿಚಾ ಘೋಷ್ 34 ರನ್​ಗಳ ನೆರವಿನಿಂದ ಭಾರತ ಮಹಿಳಾ ತಂಡ ಪಾಕಿಸ್ತಾನ ವಿರುದ್ಧ 171 ರನ್​ಗಳ ಸವಾಲಿನ ಗುರಿ ನೀಡಿದೆ.

ಭಾರತ vs ಪಾಕಿಸ್ತಾನ
ಭಾರತ vs ಪಾಕಿಸ್ತಾನ

ಮಹಿಳಾ ಟಿ20 ವಿಶ್ವಕಪ್ 2026ರ 6ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಇಂದು ಎಡ್ಜ್ ಬಾಸ್ಟನ್​​ನಲ್ಲಿ ಮುಖಾಮುಖಿಯಾಗಿವೆ. ಭಾರತ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ 170 ರನ್​ಗಳ ಸವಾಲಿನ ಮೊತ್ತ ಕಲೆ ಹಾಕಿದೆ. ಉಪನಾಯಕಿ ಸ್ಮೃತಿ ಮಂಧಾನ 68 ರನ್​​ಗಳಿಸಿದರೆ, ನಾಯಕಿ ಹರ್ಮನ್​ಪ್ರೀತ್ ಕೌರ್ 36 ಹಾಗೂ ರಿಚಾ ಘೋಷ್ 34 ರನ್​​ಗಳಿಸಿ ಸವಾಲಿನ ಮೊತ್ತಕ್ಕೆ ಕಾರಣರಾದರು.

ಟಾಸ್​ ಗೆದ್ದ ಭಾರತ ಮಹಿಳಾ ತಂಡ ನಿರೀಕ್ಷಿಸಿದ ಆರಂಭ ಪಡೆಯಲಿಲ್ಲ. ಆರಂಭಿಕರಾದ ಶಫಾಲಿ ವರ್ಮಾ ಸಾದಿಯಾ ಇಕ್ಬಾಲ್​ ಎಸೆದ ಇನ್ನಿಂಗ್ಸ್​ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದರೂ, ಅದೇ ಓವರ್​​ನ 5ನೇ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಜೇಮೀಮಾ ರೋಡ್ರಿಗಸ್ 6 ಎಸೆತಗಳಲ್ಲಿ ಕೇವಲ 1 ರನ್​ಗಳಿಸಿ ತಸ್ಮಿಯಾ ರುಬಾಬ್​​​ ಬೌಲಿಂಗ್​​​ನಲ್ಲಿ ಪರ್ವೇಜ್​ಗೆ ಕ್ಯಾಚ್ ನೀಡಿ ಔಟ್ ಆದರು.

ಈ ಹಂತದಲ್ಲಿ ಒಂದಾದ ಉಪನಾಯಕಿ ಸ್ಮೃತಿ ಮಂಧಾನ ಹಾಗೂ ನಾಯಕಿ ಹರ್ಮನ್​ಪ್ರೀತ್ ಕೌರ್ 3ನೇ ವಿಕೆಟ್ ಜೊತೆಯಾಟದಲ್ಲಿ 91 ರನ್​ಗಳ ಜೊತೆಯಾಟ ನೀಡಿದರು. ಸ್ಮೃತಿ ಮಂಧಾನ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದರು. 44 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್​ಗಳ​ ಸಹಿತ 68 ರನ್​ಗಳಿಸಿದರು.

ಮಂಧಾನ ಬೆನ್ನಲ್ಲೆ ಭಾರತ ಸತತ ಎರಡು ವಿಕೆಟ್ ಕಳೆದುಕೊಂಡಿತು. ಭಾರತಿ ಫುಲ್ಮಾಲಿ 3 ಎಸೆತಗಳಲ್ಲಿ 1 ರನ್​ಗಳಿಸಿದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports