Indra Nooyi-Mohan Das Pai: ‘ಭಾರತದಲ್ಲಿ ಇದ್ದಿದ್ರೆ ನಾನು ಸಿಇಒ ಆಗ್ತಿರಲಿಲ್ಲ’ ಎಂದ ಇಂದ್ರಾ ನೂಯಿ; Just Ignore ಅಂತ ಮೋಹನ್ ದಾಸ್ ಪೈ ತಿರುಗೇಟು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮೋಹನ್ ದಾಸ್ ಪೈ-ಇಂದ್ರಾ ನೂಯಿ


Last Updated:

Indra Nooyi-Mohan Das Pai: ಭಾರತದಲ್ಲಿ ನಾನು ಇದ್ದಿದ್ದರೆ ಅಲ್ಲಿನ ಕೊಳಕು ವ್ಯವಸ್ಥೆಯಲ್ಲಿ ನಾನು ಸಿಇಒ ಆಗುತ್ತಿರಲಿಲ್ಲ! ಹೀಗಂತ ಹೇಳಿದ್ದು ಪೆಪ್ಸಿಕೋ ಮಾಜಿ ಸಿಇಒ, ಭಾರತದ ಮೂಲದ ಪ್ರಭಾವಿ ಮಹಿಳೆ ಇಂದ್ರಾ ನೂಯಿ! ಇಂದ್ರಾ ನೂಯಿ ‘ಕೊಳಕು’ ಮಾತಿಗೆ ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ ಸೇರಿದಂತೆ ಪ್ರಮುಖರು ತಿರುಗೇಟು ನೀಡಿದ್ದಾರೆ.

ಮೋಹನ್ ದಾಸ್ ಪೈ-ಇಂದ್ರಾ ನೂಯಿ
ಮೋಹನ್ ದಾಸ್ ಪೈ-ಇಂದ್ರಾ ನೂಯಿ

ಬೆಂಗಳೂರು: ಭಾರತದಲ್ಲಿ (India) ನಾನು ಇದ್ದಿದ್ದರೆ ಅಲ್ಲಿನ ಕೊಳಕು ವ್ಯವಸ್ಥೆಯಲ್ಲಿ ನಾನು ಸಿಇಒ (CEO) ಆಗುತ್ತಿರಲಿಲ್ಲ! ಹೀಗಂತ ಹೇಳಿದ್ದು ಪೆಪ್ಸಿಕೋ (PepsiCo) ಮಾಜಿ ಸಿಇಒ, ಭಾರತದ ಮೂಲದ ಪ್ರಭಾವಿ ಮಹಿಳೆ ಇಂದ್ರಾ ನೂಯಿ! ಇಂದ್ರಾ ನೂಯಿ (Indra Nooyi) ಮೂಲತಃ ತಮಿಳುನಾಡಿನವರು. ಉನ್ನತ ವ್ಯಾಸಾಂಗ ಭಾರತದಲ್ಲೇ ಪಡೆದು, ಪೆಪ್ಸಿಕೋದಂತಹ ಕಂಪನಿಯಲ್ಲಿ ಉನ್ನತ ಸ್ಥಾನಕ್ಕೇರಿ, ಇದೀಗ ಅಮೆರಿಕದಲ್ಲಿ (America) ಕುಳಿತು ಭಾರತದ ಘನತೆಗೆ ಮಸಿ ಬಳಿಯುತ್ತಿದ್ದಾರೆ ಅಂತ ಆಕ್ರೋಶ ವ್ಯಕ್ತವಾಗಿದೆ. ಇಂದ್ರಾ ನೂಯಿ ‘ಕೊಳಕು’ ಮಾತಿಗೆ ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ (Mohan Das Pai) ಸೇರಿದಂತೆ ಪ್ರಮುಖರು ತಿರುಗೇಟು ನೀಡಿದ್ದಾರೆ.

ಇಂದ್ರಾ ನೂಯಿ ಹೇಳಿದ್ದೇನು?

ಇಂದ್ರಾ ನೂಯಿ ಅವರು ಅಮೆರಿಕದ ಮಾಜಿ ಸಚಿವೆ ಕಾಂಡೋಲೀಜ್ಜಾ ರೈಸ್ ಅವರೊಂದಿಗೆ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಹೂವರ್ ಇನ್‌ಸ್ಟಿಟ್ಯೂಷನ್‌ನಲ್ಲಿ ನಡೆದ ಚರ್ಚೆಯಲ್ಲಿ ಭಾರತದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಂದ್ರಾ ನೂಯಿ ಅವರು ಭಾರತ ಸೇರಿದಂತೆ ಬೇರೆ ಯಾವುದೇ ದೇಶದಲ್ಲಿ ಜಾಗತಿಕ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಲು ಎಂದಿಗೂ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ, ಅಮೆರಿಕದ “ಮೆರಿಟೋಕ್ರಟಿಕ್” ವ್ಯವಸ್ಥೆಯು ಅವರ ಏರಿಕೆಯನ್ನು ಸಾಧ್ಯವಾಗಿಸಿದೆ ಎಂದಿದ್ದಾರೆ.

ಜಗತ್ತಿನ ಶ್ರೇಷ್ಠ ದೇಶದಲ್ಲಿ ಜನಿಸಿರುವುದು ಅದೃಷ್ಟ

“ನಾನು ನನ್ನ ಹೆಣ್ಣುಮಕ್ಕಳಿಗೆ ಯಾವಾಗಲೂ ಇದನ್ನೇ ಹೇಳುತ್ತೇನೆ. ಜಗತ್ತಿನ ಶ್ರೇಷ್ಠ ದೇಶದಲ್ಲಿ ಜನಿಸಿರುವುದು ಎಷ್ಟು ಅದೃಷ್ಟಶಾಲಿ ಎಂದು ನಿಮಗೆ ತಿಳಿದಿಲ್ಲ. ನನ್ನನ್ನು ನೋಡಿ, ‘ಅದು ಹೇಗೆ ಶ್ರೇಷ್ಠ ಎಂದು ನಮಗೆ ಹೇಳಿ’ ಎಂದು ಹೇಳುತ್ತಾರೆ. ನಾನು ತಂತ್ರಜ್ಞಾನದಿಂದ ಪ್ರಾರಂಭಿಸುತ್ತೇನೆ. ಎಲ್ಲಾ ದೊಡ್ಡ ತಾಂತ್ರಿಕ ಆವಿಷ್ಕಾರಗಳು ಪ್ರಪಂಚದ ಇತರ ಭಾಗಗಳಲ್ಲಿ ನಡೆದಿರಬಹುದು, ಆದರೆ ಅವುಗಳನ್ನು ಇಲ್ಲಿ ವಾಣಿಜ್ಯೀಕರಣಗೊಳಿಸಲಾಗಿದೆ. ಅಭಿವೃದ್ಧಿಪಡಿಸಿದ ತಂತ್ರಜ್ಞಾನವು ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ನೀವು ಅದನ್ನು ವಾಣಿಜ್ಯೀಕರಣಗೊಳಿಸಿ ಜಗತ್ತಿನಲ್ಲಿ ಬದಲಾವಣೆಯನ್ನು ತಂದಾಗ ರಬ್ಬರ್ ರಸ್ತೆಗೆ ಇಳಿಯುತ್ತದೆ ಎಂದು ಇಂದ್ರಾ ಉದಾಹರಿಸಿದ್ದಾರೆ.

ಅಮೆರಿಕಕ್ಕೆ ಹೊಗಳಿಕೆ, ಭಾರತಕ್ಕೆ ಟೀಕೆ!

“ಒಬ್ಬ ವಲಸಿಗ ತನ್ನ ಜೇಬಿನಲ್ಲಿ ಏನೂ ಇಲ್ಲದೆ ಬಂದು ಅಮೆರಿಕದ ಕೆಂಪು, ಬಿಳಿ ಮತ್ತು ನೀಲಿ ಬಣ್ಣದ ಪ್ರತಿಷ್ಠಿತ ಕಂಪನಿಯ ಸಿಇಒ ಆಗಲು ಸಾಧ್ಯವಾದದ್ದು ಇಲ್ಲಿಯೇ ಅಂತ ಇಂದ್ರಾ ಹೇಳಿದ್ದಾರೆ. ಜಗತ್ತಿನ ಬೇರೆ ಯಾವುದೇ ದೇಶದಲ್ಲಿ ಇದು ಸಂಭವಿಸಲು ಸಾಧ್ಯವಿಲ್ಲ. ಭಾರತ ಸೇರಿದಂತೆ ಜಗತ್ತಿನ ಯಾವುದೇ ದೇಶದಲ್ಲಿ ನಾನು ಎಂದಿಗೂ ಸಿಇಒ ಆಗುತ್ತಿರಲಿಲ್ಲ. ಹಾಗಾಗಿ, ನಾನು ಅವರನ್ನು ನೋಡಿ, ‘ನಾನು ಇಲ್ಲಿ ಏನನ್ನು ಸಾಧಿಸಬಹುದು ಎಂದು ನೋಡಿ – ಏಕೆಂದರೆ ವ್ಯವಸ್ಥೆಯು ಅರ್ಹತೆಯಿಂದ ಕೂಡಿದೆ. ಮಾರ್ಗದರ್ಶಕರು ನೀವು ಪುರುಷ, ಮಹಿಳೆ, ಜನಾಂಗ, ಲಿಂಗ ಯಾವುದೂ ಲೆಕ್ಕಿಸುವುದಿಲ್ಲ, ಅವರು ಕಾಳಜಿ ವಹಿಸುವುದಿಲ್ಲ, ಅವರು ಅತ್ಯುತ್ತಮ ಮಿದುಳುಗಳು ಮೇಲಕ್ಕೆ ಏರಬೇಕೆಂದು ಬಯಸುತ್ತಾರೆ ಎಂದು ಅಮೆರಿಕವನ್ನು ಹೊಗಳುತ್ತಲೇ, ಭಾರತವನ್ನು ಟೀಕಿಸಿದ್ದಾರೆ.

ಇಂದ್ರಾ ನೂಯಿ ಹೇಳಿಕೆಗೆ ತಿರುಗೇಟು

ಇನ್ನು ಇಂದ್ರಾ ನೂಯಿ ಹೇಳಿಕೆಗೆ ಖ್ಯಾತ ಉದ್ಯಮಿ ಹಾಗೂ ಮಾಜಿ ಇನ್ಫೋಸಿಸ್ ಸಿಎಫ್‌ಓ ಟಿ.ವಿ. ಮೋಹನದಾಸ್ ಪೈ ತಿರುಗೇಟು ನೀಡಿದ್ದಾರೆ. ನ್ಯೂಸ್ ಎಕ್ಸ್ ಜೊತೆ ಮಾತನಾಡಿದ ಅವರು, ಇಂದ್ರಾ ನೂಯಿ ಹೇಳಿಕೆ ಸಂದರ್ಭಕ್ಕೆ ಸೀಮಿತ. ಅವರು 25-30 ವರ್ಷಗಳ ಹಿಂದಿನ ಅನುಭವದ ಬಗ್ಗೆ ಮಾತನಾಡಿದ್ದಾರೆ. ಆ ಸಮಯದಲ್ಲಿ ಭಾರತದಲ್ಲಿ ಮಹಿಳಾ ಸಿಇಒಗಳು ಕಡಿಮೆ ಇದ್ದರು. ಈಗ ಸ್ಥಿತಿ ಬದಲಾಗಿದೆ ಎಂದಿದ್ದಾರೆ.

ತಮ್ಮನ್ನು ದೊಡ್ಡವರನ್ನಾಗಿ ತೋರಿಸಿಕೊಳ್ಳೋ ಯತ್ನ

ಈಗ ಭಾರತದಲ್ಲಿ ಹೆಚ್ಚು ಮಹಿಳಾ ಸಿಇಒಗಳು, ಮೀಡಿಯಾದಲ್ಲಿ ಮಹಿಳೆಯರು ಪ್ರಧಾನ, ಐಟಿ ಕ್ಷೇತ್ರದಲ್ಲಿ 40% ಮಹಿಳಾ ಉದ್ಯೋಗಿಗಳು. ಇನ್ನೂ ಹೆಚ್ಚಾಗುತ್ತಿದೆ. ಆರ್ಥಿಕ ಬೆಳವಣಿಗೆಯಿಂದ ಸಿ-ಸ್ಯೂಟ್ ಹುದ್ದೆಗಳಲ್ಲಿ ಕೊರತೆ ಇದೆ, ಅವಕಾಶಗಳು ಹೆಚ್ಚುತ್ತಿವೆ ಎಂದ್ದಾರೆ. ನೂಯಿ ಹೇಳಿಕೆಯನ್ನು ನಿರ್ಲಕ್ಷಿಸಿ ಎಂದಿರುವ ಅವರು, ಎನ್‌ಆರ್‌ಐಗಳು ಭಾರತವನ್ನು ನೆಗೆಟಿವ್‌ ಆಗಿ ಚಿತ್ರಿಸಿ ತಮ್ಮನ್ನು ದೊಡ್ಡವರನ್ನಾಗಿ ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಎಂದ್ದಿದ್ದಾರೆ.

ಇಂದ್ರಾ ನೂಯಿ ಹೇಳಿಕೆ ನಿರ್ಲಕ್ಷಿಸಿ

ಭಾರತ 2 ಟ್ರಿಲಿಯನ್‌ನಿಂದ 4 ಟ್ರಿಲಿಯನ್ ಡಾಲರ್‌ಗೆ ಬೆಳೆದಿದೆ. ಲಿಂಗ ತಾರತಮ್ಯ ಕಡಿಮೆಯಾಗುತ್ತಿದೆ. ಅಮೆರಿಕಕ್ಕಿಂತ ಭಾರತದಲ್ಲಿ ಮಹಿಳಾ ನಾಯಕತ್ವ ಹೆಚ್ಚಾಗಿದೆ. ಭಾರತದಲ್ಲಿ ಮಹಿಳಾ ರಾಷ್ಟ್ರಪತಿಗಳಿದ್ದಾರೆ, ಅಮೆರಿಕಾದಲ್ಲಿ ಇಲ್ಲ ಎಂದಿದ್ದಾರೆ. ಇಂದ್ರಾ ನೂಯಿ ಹೇಳಿಕೆಯನ್ನು ನಿರ್ಲಕ್ಷಿಸಬೇಕು ಅಂತ ಮೋಹನ್ ದಾಸ್ ಪೈ ತಿರುಗೇಟು ನೀಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed