Last Updated:
ಬೆಂಗಳೂರು ವಿದ್ಯಾರ್ಥಿಗಳಿಗೆ ಕಡಿಮೆ ದರದ ಪೌಷ್ಟಿಕ ಆಹಾರಕ್ಕಾಗಿ ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್ ಯೋಜನೆ, ಮೊದಲ ಹಂತದಲ್ಲಿ ಎರಡು ಕಾಲೇಜುಗಳಲ್ಲಿ ಆರಂಭ, ನಂತರ ರಾಜ್ಯದ ಇತರ ಕಾಲೇಜುಗಳಿಗೆ ವಿಸ್ತರಣೆ.
ಬೆಂಗಳೂರು: ದೈನಂದಿನ ವಿದ್ಯಾಭ್ಯಾಸದ ಒತ್ತಡದ ನಡುವೆ ಗುಣಮಟ್ಟದ ಮತ್ತು ಕೈಗೆಟುಕುವ ದರದ ಆಹಾರಕ್ಕಾಗಿ ಪರದಾಡುವ ಬೆಂಗಳೂರಿನ (Bengaluru) ವಿದ್ಯಾರ್ಥಿಗಳಿಗೆ (Students) ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಮುಖ್ಯಮಂತ್ರಿ (CM) ಸಿದ್ದರಾಮಯ್ಯನವರ ಬಜೆಟ್ ಭರವಸೆಯಂತೆ, ಇದೀಗ ವಿದ್ಯಾರ್ಥಿಗಳಿಗಾಗಿಯೇ ಪ್ರತ್ಯೇಕ ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್ಗಳನ್ನು (Indira Canteen) ತೆರೆಯಲು ವೇದಿಕೆ ಸಿದ್ಧವಾಗಿದೆ.
ನಗರದ ದುಬಾರಿ ಹೋಟೆಲ್ ಊಟಗಳಿಗೆ ಹೋಲಿಸಿದರೆ, ಇಂದಿರಾ ಕ್ಯಾಂಟೀನ್ನಲ್ಲಿ ಅತ್ಯಂತ ಕಡಿಮೆ ದರದಲ್ಲಿ ಶುಚಿರುಚಿಯಾದ ಭೋಜನ ಲಭ್ಯವಿರುತ್ತದೆ. ಇದು ವಿದ್ಯಾರ್ಥಿಗಳ ದೈನಂದಿನ ವೆಚ್ಚವನ್ನು ತಗ್ಗಿಸುವುದರ ಜೊತೆಗೆ, ಸಮಯವನ್ನೂ ಉಳಿಸುತ್ತದೆ. ಕಾಲೇಜು ಆವರಣದಲ್ಲೇ ಅಥವಾ ಹತ್ತಿರದಲ್ಲೇ ಊಟದ ವ್ಯವಸ್ಥೆ ಸಿಗುತ್ತಿರುವುದು ವಿದ್ಯಾರ್ಥಿಗಳಿಗೆ ದೊಡ್ಡ ಸಮಾಧಾನದ ವಿಷಯವಾಗಿದೆ.
ಬೆಂಗಳೂರಿನ ವಿದ್ಯಾರ್ಥಿಗಳು ಗುಣಮಟ್ಟದ ಆಹಾರದಿಂದ ವಂಚಿತರಾಗಬಾರದು ಎಂಬುದು ನಮ್ಮ ಆಶಯ, ಎಂದು ತಿಳಿಸಿರುವ ಅಧಿಕಾರಿಗಳು, ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಂಡ ಕೂಡಲೇ ಕ್ಯಾಂಟೀನ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಸದ್ಯ ಜಾಗ ಗುರುತಿಸುವ ಕಾರ್ಯ ಭರದಿಂದ ಸಾಗುತ್ತಿದ್ದು, ಶೀಘ್ರವೇ ವಿದ್ಯಾರ್ಥಿಗಳಿಗೆ ಈ ಸೇವೆ ಲಭ್ಯವಾಗಲಿದೆ.
Bangalore [Bangalore],Bangalore,Karnataka













