Last Updated:
ಸಚಿವ ಕೆ. ರಾಮಮೋಹನ್ ನಾಯ್ಡು ಅವರು ನಿರ್ದಿಷ್ಟ ವಿವರಗಳನ್ನು ಬಹಿರಂಗಪಡಿಸಲಿಲ್ಲ. ‘ನಾವು ಅತ್ಯುತ್ತಮ ನೀತಿಯನ್ನು ರಚಿಸಬಹುದು, ವಿಮಾನಯಾನ ಕ್ಷೇತ್ರದಲ್ಲಿ ಉನ್ನತ ಮಟ್ಟದ ಉತ್ಪಾದನಾ ಚಟುವಟಿಕೆಗಳಿಗೆ ವಸ್ತುಗಳ ಗುಣಮಟ್ಟ ಮತ್ತು ಜನರ ಕೌಶಲ್ಯದ ಮೇಲೆ ಕೇಂದ್ರೀಕರಿಸುವ ಅಗತ್ಯತೆಯ ಬಗ್ಗೆ ಅವರು ಪ್ರಸ್ತಾಪಿಸಿದರು.
ನವದೆಹಲಿ: ಜಂಟಿ ಉದ್ಯಮದ ಮೂಲಕ ಎರಡು ವರ್ಷಗಳಲ್ಲಿ ಭಾರತವು ಮೊದಲ ಸ್ಥಳೀಯ ನಾಗರಿಕ ವಿಮಾನವನ್ನು (Civilian Aircraft) ಹೊಂದಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು (K Rammohan Naidu) ಮಂಗಳವಾರ ಭರವಸೆ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ನಡೆದ ಇಂಡಿಯನ್ ಫೌಂಡೇಶನ್ ಫಾರ್ ಕ್ವಾಲಿಟಿ ಮ್ಯಾನೇಜ್ಮೆಂಟ್ (ಐಕ್ಯೂಎಫ್ಎಂ) ನ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ದೇಶದ ನಾಗರಿಕ ವಿಮಾನಯಾನ ಕ್ಷೇತ್ರದ ಬೆಳವಣಿಗೆಯ ಸಾಮರ್ಥ್ಯವನ್ನು ಎತ್ತಿ ತೋರಿಸಿದರು. ವಿಮಾನಯಾನ ಸಂಸ್ಥೆಗಳು ಸುಮಾರು 100 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ 1,600 ಕ್ಕೂ ಹೆಚ್ಚು ವಿಮಾನಗಳ ಆರ್ಡರ್ ಅನ್ನು ಹೊಂದಿವೆ ಮತ್ತು ಮುಂದಿನ 10 ವರ್ಷಗಳಲ್ಲಿ 100 ಕ್ಕೂ ಹೆಚ್ಚು ಹೊಸ ವಿಮಾನ ನಿಲ್ದಾಣಗಳನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ಸಚಿವ ಕೆ. ರಾಮಮೋಹನ್ ನಾಯ್ಡು ಅವರು ನಿರ್ದಿಷ್ಟ ವಿವರಗಳನ್ನು ಬಹಿರಂಗಪಡಿಸಲಿಲ್ಲ. ‘ನಾವು ಅತ್ಯುತ್ತಮ ನೀತಿಯನ್ನು ರಚಿಸಬಹುದು, ವಿಮಾನಯಾನ ಕ್ಷೇತ್ರದಲ್ಲಿ ಉನ್ನತ ಮಟ್ಟದ ಉತ್ಪಾದನಾ ಚಟುವಟಿಕೆಗಳಿಗೆ ವಸ್ತುಗಳ ಗುಣಮಟ್ಟ ಮತ್ತು ಜನರ ಕೌಶಲ್ಯದ ಮೇಲೆ ಕೇಂದ್ರೀಕರಿಸುವ ಅಗತ್ಯತೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು.
ಪ್ರಸ್ತುತ, ವಿಮಾನ ತಯಾರಕರಾದ ಬೋಯಿಂಗ್ ಮತ್ತು ಏರ್ಬಸ್ ಭಾರತದಿಂದ ಸುಮಾರು 4 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಘಟಕಗಳು ಮತ್ತು ಸೇವೆಗಳನ್ನು ಪಡೆಯುತ್ತಿದ್ದು, ದಶಕದ ಅಂತ್ಯದ ವೇಳೆಗೆ ಈ ಮೊತ್ತವು 10 ಬಿಲಿಯನ್ ಯುಎಸ್ ಡಾಲರ್ಗಳನ್ನು ತಲುಪುವ ನಿರೀಕ್ಷೆಯಿದೆ, ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶೀಯ ನಾಗರಿಕ ವಿಮಾನಯಾನ ಮಾರುಕಟ್ಟೆಗಳಲ್ಲಿ ಒಂದಾಗಿದೆ ಎಂದು ಸಚಿವರು ಹೇಳಿದರು.
ಸುಸ್ಥಿರತೆಯ ಪ್ರಯತ್ನಗಳ ಕುರಿತು ಮಾತನಾಡಿದ ಸಚಿವರು, ಭಾರತವು ಸುಸ್ಥಿರ ವಿಮಾನ ಇಂಧನ (SAF) ರಫ್ತುದಾರನಾಗುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಕೈಗಾರಿಕೆಗಳಿಗೆ ಸಹಾಯ ಮಾಡುವ ಇಂಗಾಲದ ಕ್ರೆಡಿಟ್ ಕಾರ್ಯವಿಧಾನವನ್ನು ಹೊಂದಲು ಸರ್ಕಾರ ಕೆಲಸ ಮಾಡುತ್ತದೆ ಎಂದು ಹೇಳಿದರು.














