Last Updated:
ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಇಂಗ್ಲೇಡ್ನ ಬರ್ಮಿಂಗ್ಹ್ಯಾಮ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಭಾರತಕ್ಕೆ ಆರಂಭದಲ್ಲೇ ಹಿನ್ನಡೆ ಉಂಟಾಗಿದೆ.
ಹರ್ಮನ್ಪ್ರೀತ್ ಕೌರ್ (Harmanpreet Kaur) ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ (India Women’s Cricket) ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (Pakistan) ವಿರುದ್ಧ ಕಣಕ್ಕಿಳಿದಿದೆ. ಐಸಿಸಿ ಮಹಿಳಾ ಟಿ20 ವಿಶ್ವಕಪ್ನಲ್ಲಿ (ICC Women’s T20 World Cup) ಭಾರತ ತಂಡ ಪಾಕಿಸ್ತಾನವನ್ನು ಎದುರಿಸುತ್ತಿದ್ದು. ಟಾಸ್ ಗೆದ್ದ ಟೀಂ ಇಂಡಿಯಾ ಪಾಕಿಸ್ತಾನದ ವಿರುದ್ಧ ಮೊದಲು ಬ್ಯಾಟಿಂಗ್ (Batting) ಆಯ್ಕೆ ಮಾಡಿಕೊಂಡಿದೆ. ಆದ್ರೆ, ಪಂದ್ಯದ ಆರಂಭದಲ್ಲೇ ಭಾರತಕ್ಕೆ ಆಘಾತ ಉಂಟಾಗಿದೆ.
ಅಲ್ಲದೇ ಬರ್ಮಿಂಗ್ಹ್ಯಾಮ್ ಬ್ಯಾಟಿಂಗ್ ಫ್ರೆಂಡ್ಲಿ ಪಿಚ್ ಆಗಿದ್ದು, ಬ್ಯಾಟರ್ಸ್ಗಳಿಗೆ ಉತ್ತಮವಾಗಿ ಆಡಲು ಅನುವು ಮಾಡಿಕೊಡುತ್ತದೆ. ಆದ್ರೆ, ಈ ಪಂದ್ಯದಲ್ಲಿ ಭಾರತಕ್ಕೆ ಆರಂಭಿಕ ಆಘಾತ ಉಂಟಾಗಿದೆ. ಟಿ20 ಪಂದ್ಯಗಳಲ್ಲಿ ಎರಡನೇ ಬ್ಯಾಟಿಂಗ್ ಮಾಡುವ ತಂಡಗಳು ಸಾಮಾನ್ಯವಾಗಿ ಹೆಚ್ಚು ಯಶಸ್ಸನ್ನು ಕಂಡಿವೆ.
ಭಾರತದ ಪ್ಲೇಯಿಂಗ್ XI: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್ಪ್ರೀತ್ ಕೌರ್ (ನಾಯಕಿ), ಭಾರತಿ ಫುಲ್ಮಾಲಿ, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ್, ಶ್ರೀ ಚರಣಿ, ಶ್ರೇಯಾಂಕಾ ಪಾಟೀಲ್
ಪಾಕಿಸ್ತಾನದ ಆಡುವ XI: ಮುನೀಬಾ ಅಲಿ (ವಿಕೆಟ್ಕೀಪರ್), ಗುಲ್ ಫಿರೋಜಾ, ಆಯೇಶಾ ಜಾಫರ್, ಸಾಯಿರಾ ಜಬೀನ್, ನತಾಲಿಯಾ ಪರ್ವೇಜ್, ಅಲಿಯಾ ರಿಯಾಜ್, ಫಾತಿಮಾ ಸನಾ (ನಾಯಕಿ), ರಮೀಮ್ ಶಮಿಮ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್, ತಸ್ಮಿಯಾ ರುಬಾಬ್













