Last Updated:
ರಿಪಬ್ಲಿಕ್ ವರ್ಲ್ಡ ವರದಿಯ ಪ್ರಕಾರ ಪಿಸಿಯೋ ಚಿಕಿತ್ಸೆ ನೀಡಿದ ಬಳಿಕ ವೈಭವ್ ಮತ್ತೆ ಅಭ್ಯಾಸವನ್ನ ಸಂಪೂರ್ಣ ಪೂರ್ಣಗೊಳಿಸಿದ್ದಾರೆ. ಹಾಗಾಗಿ ಅವರ ಸ್ಥಿತಿ ಗಂಭೀರವಾಗಿಲ್ಲ ಎನ್ನಲಾಗುತ್ತಿದೆ.
ಭಾರತದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ (Vaibhav Sooryavanshi) ನೆಟ್ಸ್‌ನಲ್ಲಿ ಅಭ್ಯಾಸ ಮಾಡುವಾಗ ಗಾಯಗೊಂಡಿದ್ದಾರೆ. ಐದು ಪಂದ್ಯಗಳ ಸರಣಿಯ ಭಾಗವಾಗಿರುವ ಇಂಗ್ಲೆಂಡ್ (India vs England) ವಿರುದ್ಧದ ಮೂರನೇ ಟಿ20 ಪಂದ್ಯಕ್ಕೂ ಮುನ್ನ ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಅವರಿಗೆ ಚೆಂಡು ಬಲವಾಗಿ ಬಡಿದಿದೆ. ಟೀಮ್ ಇಂಡಿಯಾದ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ದ್ವಿವೇದಿ (ರಘು) ಅವರ ಎಸೆತ 15 ವರ್ಷದ ವೈಭವ್ ಅವರ ಕಿಬ್ಬೊಟ್ಟೆಗೆ ಬಲವಾಗಿ ಬಡಿದಿದೆ. ಪರಿಣಾಮ ಅವರು ನೆಟ್ಸ್‌ನಲ್ಲಿ ಕುಸಿದು ಬಿದ್ದು ತೀವ್ರ ನೋವಿನಿಂದ ನರಳುತ್ತಿದ್ದರು. ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.
ಗಂಟೆಗೆ ಸುಮಾರು 150 ಕಿ.ಮೀ ವೇಗದಲ್ಲಿ ಸಾಗಿದ ಥ್ರೋಡೌನ್ ಎಸೆತವನ್ನು ನಿರ್ಣಯಿಸಲು ವೈಭವ್ ಸೂರ್ಯವಂಶಿ ವಿಫಲರಾದರು. ಇದರಿಂದಾಗಿ ಚೆಂಡು ನೇರವಾಗಿ ಕಿಬ್ಬೊಟ್ಟೆಗೆ ಬಲವಾಗಿ ತಗುಲಿತು. ಟೀಮ್ ಇಂಡಿಯಾದ ಫಿಸಿಸೀಯನ್ ಪ್ರಥಮ ಚಿಕಿತ್ಸೆ ನೀಡಿದ್ದು, ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಗಾಯದ ಪ್ರಮಾಣ ಎಷ್ಟರ ಮಟ್ಟಿಗೆ ಇದೆ ಎಂಬುದರ ಕುರಿತು ಬಿಸಿಸಿಐ ಇನ್ನೂ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ. ಗಾಯವು ಸಣ್ಣದಾಗಿ ಕಂಡುಬಂದರೆ, ವೈಭವ್ ಮೂರನೇ ಟಿ20ಯಲ್ಲಿ ಆಡುತ್ತಾರೆ, ಒಂದು ವೇಳೆ ಗಂಭೀರ ಎನಿಸಿದರೆ ಅವರನ್ನು ಹೊರಗಿಡಬಹುದು.
ರಿಪಬ್ಲಿಕ್ ವರ್ಲ್ಡ್ ವರದಿಯ ಪ್ರಕಾರ ಪಿಸಿಯೋ ಚಿಕಿತ್ಸೆ ನೀಡಿದ ಬಳಿಕ ವೈಭವ್ ಮತ್ತೆ ಅಭ್ಯಾಸವನ್ನ ಸಂಪೂರ್ಣ ಪೂರ್ಣಗೊಳಿಸಿದ್ದಾರೆ. ಹಾಗಾಗಿ ಅವರ ಸ್ಥಿತಿ ಗಂಭೀರವಾಗಿಲ್ಲ ಎನ್ನಲಾಗುತ್ತಿದೆ. ಆದರೂ ಟಾಸ್ ಆಗುವವರೆಗೆ ಅವರು ಆಯ್ಕೆಗೆ ಲಭ್ಯವಿರಲಿದ್ದಾರೆಯೇ ಎಂಬುದರ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ಕಳೆದ ಶನಿವಾರ ಮ್ಯಾಂಚೆಸ್ಟರ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದ ವೇಳೆ ವೈಭವ್ ಸೂರ್ಯವಂಶಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. 15 ವರ್ಷ ಮತ್ತು 91 ದಿನಗಳಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ವೈಭವ್ ಸೂರ್ಯವಂಶಿ, ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಬ್ರೇಕ್ ಮಾಡಿದರು. ಭಾರತ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡರು. ಆದರೆ ಅವರು ತಮ್ಮ ಚೊಚ್ಚಲ ಪಂದ್ಯದಲ್ಲಿ ದೊಡ್ಡ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ. ಕೇವಲ 10 ಎಸೆತಗಳನ್ನಾಡಿ 14 ರನ್ ಗಳಿಸಿದ ನಂತರ ಅವರನ್ನು ಸ್ಟಂಪ್ಡ್ ಔಟಾದರು. ಆದರೆ ಅವರು ಕ್ರೀಸ್‌ನಲ್ಲಿದ್ದಾಗ ತಮ್ಮ ನಿರ್ಭೀತ ಬ್ಯಾಟಿಂಗ್‌ನಿಂದ ಎಲ್ಲರನ್ನೂ ಮೆಚ್ಚಿಸಿದ್ದರು.
ಈ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದರೂ, ಇಂಗ್ಲೆಂಡ್ ಎರಡನೇ ಪಂದ್ಯವನ್ನು ನಾಲ್ಕು ವಿಕೆಟ್‌ಗಳಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಮೂರನೇ ಟಿ20 ಪಂದ್ಯ ನಾಟಿಂಗ್‌ಹ್ಯಾಮ್‌ನಲ್ಲಿ ಮಂಗಳವಾರ ರಾತ್ರಿ 10 ಗಂಟೆಗೆ ಆರಂಭವಾಗಲಿದ್ದು, ನಾಯಕನಾಗಿ ಶ್ರೇಯಸ್ ಅಯ್ಯರ್ ಇನ್ನೂ ಒಂದೂ ಗೆಲುವು ಸಾಧಿಸದ ಕಾರಣ ಈ ಪಂದ್ಯ ಅವರ ಪಾಲಿಗೆ ನಿರ್ಣಾಯಕವಾಗಲಿದೆ.
ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶನ್ ಕಿಶನ್ (WK), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹರ್ಷಿತ್ ರಾಣಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್/ಪ್ರಿನ್ಸ್ ಯಾದವ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ













