Last Updated:
ಶ್ರೇಯಸ್ ಅಯ್ಯರ್ ನೇತೃತ್ವದ ಟೀಮ್ ಇಂಡಿಯಾ ಗುರುವಾರ ಹರಾರೆಯಲ್ಲಿ ನಡೆಯಲಿರುವ ಪಂದ್ಯವನ್ನ ಗೆಲ್ಲುವ ಮೂಲಕ ಸತತ ಸೋಲಿನ ಸರಪಳಿಯನ್ನ ಮುರಿಯಲು ಸಜ್ಜಾಗಿದೆ.
ಭಾರತ ಟಿ20 ತಂಡ ಮತ್ತೊಮ್ಮೆ ಮೈದಾನಕ್ಕೇರಲು ಸಜ್ಜಾಗಿದೆ. ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಗುರುವಾರ ಜಿಂಬಾಬ್ವೆ ವಿರುದ್ಧದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಶ್ರೇಯಸ್ ಅಯ್ಯರ್ ನೇತೃತ್ವದ ಟೀಮ್ ಇಂಡಿಯಾ ಗುರುವಾರ ಹರಾರೆಯಲ್ಲಿ ನಡೆಯಲಿರುವ ಪಂದ್ಯವನ್ನ ಗೆಲ್ಲುವ ಮೂಲಕ ಸತತ ಸೋಲಿನ ಸರಪಳಿಯನ್ನ ಮುರಿಯಲು ಸಜ್ಜಾಗಿದೆ. ಶ್ರೇಯಸ್ ನಾಯಕನಾದ ನಂತರ ಭಾರತ ತಂಡ ಇದುವರೆಗೂ 6 ಪಂದ್ಯಗಳಲ್ಲಿ ಸೋತಿದೆ. ತಂಡವು ಐರ್ಲೆಂಡ್ ಮತ್ತು ನಂತರ ಇಂಗ್ಲೆಂಡ್ ವಿರುದ್ಧ ಸರಣಿ ಸೋಲನ್ನು ಅನುಭವಿಸಿದೆ, ಆದ್ದರಿಂದ ಅಯ್ಯರ್ ಅವರ ತಂಡವು ಇಂದು ಪಂದ್ಯವನ್ನು ಗೆಲ್ಲುವ ಮೂಲಕ ಕಳೆದುಹೋದ ಆತ್ಮವಿಶ್ವಾಸವನ್ನು ಮರಳಿ ಪಡೆಯಲು ಬಯಸುತ್ತಿದೆ.
ಹರಾರೆಯಲ್ಲಿ ನಡೆಯುತ್ತಿರುವ ಜಿಂಬಾಬ್ವೆ ವಿರುದ್ಧದ ಮೊದಲ ಪಂದ್ಯಕ್ಕೆ ವೈಭವ್ ಸೂರ್ಯವಂಶಿ ಮತ್ತು ರಿಂಕು ಸಿಂಗ್ ಮರಳಿದ್ದಾರೆ. ಯುವ ವೇಗಿ ಮಯಾಂಕ್ ಯಾದವ್ 2 ವರ್ಷದ ಬಳಿಕ ಟೀಮ್ ಇಂಡಿಯಾಗೆ ಮರಳಿದ್ದಾರೆ. 150 ಕಿಮಿ ವೇಗದಲ್ಲಿ ಬೌಲಿಂಗ್ ಮಾಡಬಲ್ಲ ಗುಜರಾತ್ ಟೈಟನ್ಸ್ ವೇಗಿ ಅಶೋಕ್ ಶರ್ಮಾ ಭಾರತದ ಪರ ಪದಾರ್ಪಣೆ ಮಾಡುತ್ತಿದ್ದಾರೆ.
ಉಭಯ ತಂಡಗಳ ನಡುವಿನ ಟಿ20 ಅಂತರರಾಷ್ಟ್ರೀಯ ಪಂದ್ಯಗಳ ಇತಿಹಾಸದಲ್ಲಿ ಭಾರತವೇ ಮೇಲುಗೈ ಸಾಧಿಸಿದೆ. ಎರಡೂ ತಂಡಗಳ ನಡುವೆ ಒಟ್ಟು 14 ಟಿ20ಐ ಪಂದ್ಯಗಳು ನಡೆದಿದ್ದು, ಭಾರತ 11 ಪಂದ್ಯಗಳಲ್ಲಿ ಗೆದ್ದರೆ, ಜಿಂಬಾಬ್ವೆ 3 ಪಂದ್ಯಗಳಲ್ಲಿ ಗೆದ್ದಿದೆ. ಅಂಕಿಅಂಶಗಳು ಭಾರತಕ್ಕೆ ಅನುಕೂಲಕರವಾಗಿದ್ದರೂ, ಜಿಂಬಾಬ್ವೆಯ ಪ್ರಸ್ತುತ ಫಾರ್ಮ್ ಮತ್ತು ಭಾರತದ ಇತ್ತೀಚಿನ ಪ್ರದರ್ಶನವನ್ನು ಗಮನಿಸಿದರೆ ಈ ಪಂದ್ಯವು ಅತ್ಯಂತ ರೋಮಾಂಚಕಾರಿ ಪಂದ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಭಾರತ: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಅಶೋಕ್ ಶರ್ಮಾ, ಮಯಾಂಕ್ ಯಾದವ್.
ಜಿಂಬಾಬ್ವೆ ಕ್ರಿಕೆಟ್ ತಂಡ: ಬ್ರಿಯಾನ್ ಬೆನೆಟ್, ತದಿವಾನಶೆ ಮರುಮಣಿ (ವಿಕೆಟ್ ಕೀಪರ್), ಬೆನ್ ಕರನ್, ಡಿಯೋನ್ ಮೇಯರ್ಸ್, ಸಿಕಂದರ್ ರಾಜಾ (ನಾಯಕ), ರಯಾನ್ ಬರ್ಲ್, ವೆಸ್ಲಿ ಮಾಧೆವೆರೆ, ಬ್ರಾಡ್ ಎವಾನ್ಸ್, ನ್ಯೂಮನ್ ನ್ಯಾಮ್ಹುರಿ, ರಿಚರ್ಡ್ ಎನ್ಗರವಾ ಮತ್ತು ಬ್ಲೆಸ್ಸಿಂಗ್ ಮುಜರಬಾನಿ














