Last Updated:
ಗಾಯಕ ಬಾದ್‌ಶಾ (Singer Badshah) ಮತ್ತು ಪಂಜಾಬಿ ನಟಿ ಇಶಾ ರಿಖಿ (Punjabi Actress Isha Rikhi) ದಾಂಪತ್ಯ ಜೀವನದಲ್ಲೂ ಬಿರುಕು ಮೂಡಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನಲ್ಲಿ ಸೆಲೆಬ್ರಿಟಿಗಳ ವಿಚ್ಛೇದನ ಸುದ್ದಿಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿವೆ. ಈ ನಡುವೆ ಜನಪ್ರಿಯ ರ‍್ಯಾಪರ್ , ಗಾಯಕ ಬಾದ್‌ಶಾ (Singer Badshah) ಮತ್ತು ಪಂಜಾಬಿ ನಟಿ ಇಶಾ ರಿಖಿ (Punjabi Actress Isha Rikhi) ದಾಂಪತ್ಯ ಜೀವನದಲ್ಲೂ ಬಿರುಕು ಮೂಡಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಇದಕ್ಕೆ ಕಾರಣವಾಗಿರುವುದು ಇಶಾ ರಿಖಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಒಂದು ಭಾವನಾತ್ಮಕ ಪೋಸ್ಟ್.
ಇತ್ತೀಚೆಗೆ ಇಶಾ ರಿಖಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಯ ಅಪರೂಪದ ಫೋಟೋಗಳು ಮತ್ತು ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊದಲ್ಲಿ ಬಾದ್‌ಶಾ ಮತ್ತು ಇಶಾ ಸಿಖ್ ಸಂಪ್ರದಾಯದಂತೆ ಮದುವೆಯ ವಿಧಿವಿಧಾನಗಳನ್ನು ನೆರವೇರಿಸುತ್ತಿರುವ ದೃಶ್ಯಗಳು ಕಾಣಿಸುತ್ತವೆ.
ವಿಡಿಯೊದಲ್ಲಿ ಇಬ್ಬರೂ ಸಂತೋಷದಿಂದ ನಗುತ್ತಿರುವ ಕ್ಷಣಗಳು, ಪರಸ್ಪರ ಹಾರ ವಿನಿಮಯ ಮಾಡಿಕೊಂಡಿರುವ ದೃಶ್ಯಗಳು ಹಾಗೂ ಬಾದ್‌ಶಾ ಇಶಾ ಕೆನ್ನೆಗೆ ಮುತ್ತಿಡುತ್ತಿರುವ ಕ್ಷಣಗಳೂ ಸೇರಿವೆ. ಕೊನೆಯಲ್ಲಿ ಇಶಾ ಭಾವುಕರಾಗಿ ಕಣ್ಣೀರಿಡುತ್ತಿರುವಾಗ ಬಾದ್‌ಶಾ ಅವರನ್ನು ಅಪ್ಪಿಕೊಳ್ಳುತ್ತಿರುವ ದೃಶ್ಯವೂ ಇದೆ.
ಆದರೆ ಇಲ್ಲಿ ಅನುಮಾನಕ್ಕೆ ಕಾರಣವಾಗಿರುವ ವಿಷ್ಯ ಏನೆಂದರೆ ಈ ವಿಡಿಯೊ ಜೊತೆಗೆ ಇಶಾ ರಿಖಿ ಕೆಲವೊಂದು ಸಾಲುಗಳನ್ನು ಬರೆದುಕೊಂಡಿದ್ದಾರೆ. ‘ಪ್ರತಿಯೊಂದು ಬಿರುಗಾಳಿಯೂ ಒಂದು ಪಾಠ. ಪ್ರತಿಯೊಂದು ಪ್ರಾರ್ಥನೆಯೂ ಒಂದು ಭರವಸೆ ಎಂದು ಬರೆಯುತ್ತಾ ಜೊತೆಗೆ ಹಾರ್ಟ್ ಬ್ರೇಕ್ ಇಮೋಜಿಯನ್ನು ಬಳಸಿಕೊಂಡಿದ್ದಾರೆ. ಹೀಗಾಗಿ ಈ ಸಾಲುಗಳು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದು, ಅಭಿಮಾನಿಗಳು ದಂಪತಿಯ ಸಂಬಂಧದಲ್ಲಿ ಏನಾದರೂ ಸಮಸ್ಯೆ ಉಂಟಾಗಿದೆಯೇ ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಇಶಾ ಪೋಸ್ಟ್ ವೈರಲ್ ಆದ ಬಳಿಕ ಕಾಮೆಂಟ್ ವಿಭಾಗದಲ್ಲಿ ಅಭಿಮಾನಿಗಳು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಕೆಲವರು ಇಬ್ಬರೂ ಬೇರ್ಪಟ್ಟಿರಬಹುದು ಎಂದು ಊಹಿಸಿದ್ದರೆ, ಇನ್ನೂ ಕೆಲವರು ಇದು ಕೇವಲ ಹಳೆಯ ನೆನಪುಗಳನ್ನು ಹಂಚಿಕೊಳ್ಳುವ ಪೋಸ್ಟ್ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೆಲವು ಬಳಕೆದಾರರು ಈ ಫೋಟೋಗಳು ಹಲವು ವರ್ಷಗಳ ಹಿಂದಿನವುಗಳಾಗಿರಬಹುದು ಎಂದು ಹೇಳಿದ್ದು, ವೈಯಕ್ತಿಕ ಭಾವನೆಗಳನ್ನು ವ್ಯಕ್ತಪಡಿಸಲು ಇಶಾ ಈ ಪೋಸ್ಟ್ ಮಾಡಿರಬಹುದು ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ ಈ ಎಲ್ಲವೂ ಸಾಮಾಜಿಕ ಜಾಲತಾಣದ ಊಹಾಪೋಹಗಳಾಗಿದ್ದು, ಇದುವರೆಗೆ ಬಾದ್‌ಶಾ ಅಥವಾ ಇಶಾ ರಿಖಿ ಇಬ್ಬರೂ ಈ ವಿಚಾರದ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.
ಕೆಲವು ವರ್ಷಗಳ ದಾಂಪತ್ಯ ಜೀವನದ ಬಳಿಕ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದಿದ್ದರು. ಅದರ ನಂತರ ಬಾದ್‌ಶಾ ತಮ್ಮ ವೈಯಕ್ತಿಕ ಜೀವನವನ್ನು ಸಾರ್ವಜನಿಕ ಚರ್ಚೆಯಿಂದ ದೂರವಿಟ್ಟಿದ್ದರು.
ಒಟ್ಟಾರೆಯಾಗಿ ಇಶಾ ರಿಖಿ ಇತ್ತೀಚಿನ ಪೋಸ್ಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದರೂ, ದಂಪತಿ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬುದಕ್ಕೆ ಯಾವುದೇ ಅಧಿಕೃತ ದೃಢೀಕರಣ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿಗಳು ಮತ್ತು ಅಭಿಮಾನಿಗಳ ಊಹಾಪೋಹಗಳ ಆಧಾರದ ಮೇಲೆ ಈ ಚರ್ಚೆಗಳು ನಡೆಯುತ್ತಿದೆ.
Bangalore [Bangalore],Bangalore,Karnataka














