Last Updated:
ಭಾರತಕ್ಕೆ ಮಾನ್ಸೂನ್ ಮಳೆಯ ಗುಡ್ ನ್ಯೂಸ್: INSAT-3DS ಉಪಗ್ರಹ ಚಿತ್ರಗಳಲ್ಲಿ ಶೇಕಡಾ 95ರಷ್ಟು ಭೂ ಪ್ರದೇಶವನ್ನು ಮಾರುತಗಳು ಗೋಚರವಾಗುತ್ತದೆ. ಮುಂದಿನ 3-4 ದಿನಗಳಲ್ಲಿ ಭಾರೀ ಮಳೆ ಮುನ್ಸೂಚನೆಯನ್ನು ಐಎಂಡಿ ನೀಡಿದೆ.
ಬೇಸಿಗೆ ಮುಗಿದು ಮಳೆಗಾಲ (India Monsoon Rains) ಆರಂಭವಾಗಿ ತಿಂಗಳುಗಳೇ ಕಳೆದರೂ ಮಳೆ ಮಾತ್ರ ಬಂದಿಲ್ಲ. ತೀವ್ರ ಬರದ ಛಾಯೆ ಆವರಿಸುವ (Drought Situation) ಸಂದರ್ಭದಲ್ಲಿಯೇ ಭಾರತಕ್ಕೆ ಗುಡ್ ನ್ಯೂಸ್ ಸಿಕ್ಕಿದೆ. ಭಾರತಕ್ಕೆ ಆಗಮಿಸಬೇಕಿದ್ದ ಮಾನ್ಸೂನ್ ಮಳೆಯ ಮಾರುತಗಳು ಎಲ್ ನಿನೋ ಪ್ರಭಾವದಿಂದ (El Niño) ಕಡಿಮೆ ಮಳೆಯನ್ನು ಸುರಿಸಿದ್ದವು. ಆದರೆ ಈಗ ನಿಜವಾದ ಮಾನ್ಸೂನ್ ಮಳೆಯ ಆರಂಭ ಲಕ್ಷಣಗಳು ಕಾಣಿಸುತ್ತಿದ್ದು, ಬರೋಬ್ಬರಿ 10 ಸಾವಿರ ಕಿಲೋ ಮೀಟರ್ ಉದ್ದದ ಮಾರುತಗಳು ನಿರ್ಮಾಣ (Satellite Imagery) ಆಗಿರುವುದು ಉಪಗ್ರಹ ಚಿತ್ರಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಇದರ ನಡುವೆಯೇ ಭಾರತ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ವರದಿಯ ಅನ್ವಯ, ಇಸ್ರೋದ ಸುಧಾರಿತ INSAT-3DS ಹವಾಮಾನ ಉಪಗ್ರಹ ಸೆರೆಹಿಡಿದಿರುವ ಫೋಟೋ ಭಾರತಕ್ಕೆ ಬಿಗ್ ರಿಲೀಫ್ ನೀಡಿದ್ದು, ಭಾರತದ ಶೇಕಡಾ 95ರಷ್ಟು ಭೂಭಾಗವನ್ನು ಮಾನ್ಸೂನ್ ಮಾರುತಗಳು ಆವರಿಸಿರೋದು ಕಾಣಬಹುದಾಗಿದೆ. ಜುಲೈ 22, 2026 ರಂದು ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಯಿಂದ 3:27ರ ನಡುವೆ ಈ ಫೋಟೋವನ್ನು ಉಪಗ್ರಹ ಸೆರೆ ಹಿಡಿದಿದೆ.
ಇದರೊಂದಿಗೆ ಭಾರತೀಯ ಹವಾಮಾನ ಇಲಾಖೆ ಮಳೆಯ ಮುನ್ಸೂಚನೆಯನ್ನು ನೀಡಿದ್ದು, ಮುಂದಿನ 3-4 ದಿನಕಾಲ ಭಾರತದ ವಾಯುವ್ಯ, ಮಧ್ಯ ಪೂರ್ವ, ಈಶಾನ್ಯ ಹಾಗೂ ಪರ್ಯಾಯ ದ್ವೀಪ ಭಾಗದಲ್ಲಿ ಮಾನ್ಸೂನ್ ಮಳೆಯು ಹೆಚ್ಚಾಗಲಿದೆ ಎಂದು ತಿಳಿಸಿದೆ. ಈ ಮಾರುತಗಳು ಒಡಿಶಾ, ಛತ್ತೀಸ್‌ಗಢ ಹಾಗೂ ಮಧ್ಯ ಪ್ರದೇಶದಾದ್ಯಂತ ಭಾರೀ ಮಳೆಯನ್ನು ಸುರಿಸಲಿದ್ದು, ಆ ಬಳಿಕ ಗುಜರಾತ್ ಮತ್ತು ಅರಬ್ಬೀ ಸಮುದ್ರದ ಕಡೆಗೆ ಮಳೆ ವಿಸ್ತರಣೆಯಾಗಲಿದೆ ಎಂದು ಹೇಳಿದೆ.
ಈ ಹಿಂದೆ ಹವಾಮಾನ ವರದಿಗಳಲ್ಲಿ ನೈರುತ್ಯ ಮಾನ್ಸೂನ್ ಮಾರುತಗಳು ಕಡಿಮೆ ಮಳೆ ಸುರಿಲಿದೆ ಎಂದು ಅಂದಾಜು ಮಾಡಲಾಗಿತ್ತು. ಇದರ ನಡುವೆಯೂ ಭಾರತದ ವಿಶಾಲ ಭೂ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ. ಅದರಲ್ಲೂ ಜುಲೈ 24ರ ವರೆಗೂ ತೀವ್ರ ಮಳೆ ಎಚ್ಚರಿಕೆ ನೀಡಲಾಗಿದ್ದು, ಗೋವಾ, ಕೊಂಕಣ ಪ್ರದೇಶ, ಆಗ್ನೇಯ ಏಷ್ಯಾ, ನೈರುತ್ಯ ಮಧ್ಯಪ್ರದೇಶ ಹಾಗೂ ಜಮ್ಮು ಕಾಶ್ಮೀರ, ಲಡಾಖ್ ಗಳಲ್ಲಿ ಭಾರೀ ಮಳೆಯಾಗಲಿದೆ. ಉಳಿದಂತೆ ಮುಂದಿನ ವಾರದಲ್ಲಿ ದಕ್ಷಿಣ ಪರ್ಯಾಯ ದ್ವೀಪ ಭಾರತದಲ್ಲಿ ಮಳೆಯ ಚಟುವಟಿಕೆಗಳು ಕಡಿಮೆಯಾಗುವ ನಿರೀಕ್ಷೆ ಎಂದು ಐಎಂಡಿ ತಿಳಿಸಿದೆ.
ಉಪಗ್ರಹ ಚಿತ್ರ
ಇನ್ನು, ಇದೇ ಸಮಯದಲ್ಲಿ ಉತ್ತರ ಭಾರತದ ಹಿಮಾಲಯದಿಂದ ಹಿಡಿದು, ಚೀನಾ ಮೂಲಕ ದಕ್ಷಿಣ ಕೊರಿಯಾ ವರೆಗೂ ಸುಮಾರು 7 ರಿಂದ 10 ಸಾವಿರ ಕಿಲೋ ಮೀಟರ್ ದೂರದ ವರೆಗೂ ಅತೀ ಉದ್ದದ ಮೋಡಗಳ ಸಾಲು ನಿರ್ಮಾಣವಾಗಿದೆ. ಇದು ಉಪಗ್ರಹದ ಫೋಟೋಗಳಲ್ಲಿ ಸೆರೆಯಾಗಿದ್ದು, ಮಾನ್ಸೂನ್ ಮಾರುತಗಳ ಬೃಹತ್ ಮೋಡಗಳ ಸಾಲು ಭಾರತದಲ್ಲಿ ಭಾರೀ ಮಳೆಯನ್ನು ಸುರಿಸುವ ನಿರೀಕ್ಷೆ ಇದೆ. ಇದಲ್ಲದೆ, ಸುಮಾರು 10 ಸಾವಿರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿರುವ ಈ ಬೃಹತ್ ಮೋಡಗಳು ಅಷ್ಟೇ ದೊಡ್ಡ ಪ್ರಮಾಣದಲ್ಲಿ ಮಳೆಯನ್ನು ತರುತ್ತವೆ ಎಂದು ಅಂದಾಜಿಸಲಾಗಿದೆ.
ಮಳೆಯ ಅಂಕಿ-ಅಂಶಗಳ ಅನ್ವಯ, ಕಳೆದ ಎರಡು ದಿನಗಳಲ್ಲಿ ಭಾರತದಲ್ಲಿ ಸರಾಸರಿ ಮಳೆಯ ಪ್ರಮಾಣ ಸುಮಾರು ಶೇಕಡಾ 170-180ರಷ್ಟು ದಾಖಲಾಗಿದ್ದು, ಇದು ಈ ಮಾನ್ಸೂನ್ ಅವಧಿಯಲ್ಲಿಯಾದ ಅತ್ಯಧಿಕ ಮಳೆಯ ಪ್ರಮಾಣವಾಗಿದೆ. ಹವಾಮಾನ ತಜ್ಞರ ಅನ್ವಯ, ಈ ಎರಡು ದಿನಗಳನ್ನು ಮಾನ್ಸೂನ್ ಮಾರುತಗಳ ದಿನ ಅಂತಲೇ ದಾಖಲು ಮಾಡುತ್ತಿದ್ದು, ದೇಶದ ಹಲವು ಪ್ರದೇಶಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಭಾರೀ ಮಳೆಯಾಗಿದೆ.
ಮಾನ್ಸೂನ್ ಮಳೆ ಸಂದರ್ಭದಲ್ಲಿ ಬೆಚ್ಚಗಿನ, ತೇವಾಂಶವುಳ್ಳ ಗಾಳಿಯು ಎದ್ದು ವಿಶಾಲ ಪ್ರದೇಶದಲ್ಲಿ ಹರಡಿದಾಗ ಈ ರೀತಿ ಉದ್ದನೆಯ ಮೋಡಗಳ ಸಾಲುಗಳು ರೂಪುಗೊಳ್ಳುತ್ತವೆ. ತೇವಾಂಶವುಳ್ಳ ಗಾಳಿಯು ಏರುತ್ತಿದ್ದಂತೆ, ಅದು ತಣ್ಣಗಾಗುತ್ತದೆ ಮತ್ತು ಭಾರೀ ಮಳೆಯನ್ನು ಉಂಟುಮಾಡುವ ಮೋಡಗಳಾಗಿ ಪರಿವರ್ತನೆಯಾಗುತ್ತವೆ ಎಂದು ಹವಾಮಾನ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.














