IND vs ZIM: ಹಲವು ಬದಲಾವಣೆಯೊಂದಿಗೆ ಭಾರತದ ವಿರುದ್ಧದ ಟಿ20 ಸರಣಿಗೆ ತಂಡ ಘೋಷಣೆ ಮಾಡಿದ ಜಿಂಬಾಬ್ವೆ | ಕ್ರೀಡಾ ಸುದ್ದಿ | ACTPnews

ಭಾರತ-ಜಿಂಬಾಬ್ವೆ


Last Updated:

ಬಾಂಗ್ಲಾದೇಶ ವಿರುದ್ಧದ ಹಿಂದಿನ ಸರಣಿಗೆ ಹೋಲಿಸಿದರೆ ಜಿಂಬಾಬ್ವೆ ತಂಡದಲ್ಲಿ ಕೆಲವು ಗಮನಾರ್ಹ ಬದಲಾವಣೆಗಳಾಗಿವೆ. ಸಿಕಂದರ್ ರಾಜಾ (Sikandar Raza) ನಾಯಕತ್ವದಲ್ಲಿ ಮೂರು ಬದಲಾವಣೆಗಳೊಂದಿಗೆ ಭಾರತದ ವಿರುದ್ಧ ಆಡಲಿದೆ.

ಭಾರತ-ಜಿಂಬಾಬ್ವೆ
ಭಾರತ-ಜಿಂಬಾಬ್ವೆ

ಹರಾರೆ: ಜುಲೈ 23 ರಿಂದ ಆರಂಭವಾಗಲಿರುವ ಭಾರತ (India vs Zimbabwe) ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಗೆ (T20 Series) ಜಿಂಬಾಬ್ವೆ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಬಾಂಗ್ಲಾದೇಶ ವಿರುದ್ಧದ ಹಿಂದಿನ ಸರಣಿಗೆ ಹೋಲಿಸಿದರೆ ತಂಡದಲ್ಲಿ ಕೆಲವು ಗಮನಾರ್ಹ ಬದಲಾವಣೆಗಳಾಗಿವೆ. ಸಿಕಂದರ್ ರಾಜಾ (Sikandar Raza) ನಾಯಕತ್ವದಲ್ಲಿ ಮೂರು ಬದಲಾವಣೆಗಳೊಂದಿಗೆ ಭಾರತದ ವಿರುದ್ಧ ಆಡಲಿದೆ. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ತಫದ್ಜಾವ ತ್ಸಿಗಾ ಅವರನ್ನು ಮೊದಲ ಬಾರಿಗೆ ಟಿ20ಐ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆಲ್‌ರೌಂಡರ್ ವೆಸ್ಲಿ ಮಾಧೆವೆರೆ ಕೂಡ ತಂಡಕ್ಕೆ ಮರಳಿದ್ದಾರೆ.

ತಂಡದಲ್ಲಿ ಮೂರು ಬದಲಾವಣೆ

ಜಿಂಬಾಬ್ವೆ ಪರ ಇನ್ನೂ ಟಿ20ಐಗೆ ಪಾದಾರ್ಪಣೆ ಮಾಡದ ವೇಗಿ ನ್ಯೂಮನ್ ನ್ಯಾಮ್ಹುರಿ, ಗಾಯದಿಂದಾಗಿ ಬಾಂಗ್ಲಾದೇಶ ಸರಣಿಯಿಂದ ಹೊರಗುಳಿದಿದ್ದರು. ಇದೀಗ ಈ ಸರಣಿಗೆ ಮರಳಿದ್ದಾರೆ. ತನಕಾ ಚಿವಂಗಾ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಈ ಮೂವರು ಆಟಗಾರರು ಕ್ಲೈವ್ ಮಡಾಂಡೆ, ಟಿನೊಟೆಂಡಾ ಮಾಫೋಸಾ ಮತ್ತು ತಶಿಂಗಾ ಮುಸೆಕಿವಾ ಅವರ ಜಾಗಕ್ಕೆ ಮರಳಿದ್ದಾರೆ.

ಎರಡೂ ತಂಡಗಳೂ ಸರಣಿ ಸೋಲುಗಳೊಂದಿಗೆ ಕಣಕ್ಕೆ

ಈ ವರ್ಷದ ಆರಂಭದಲ್ಲಿ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಜಿಂಬಾಬ್ವೆ ಕೊನೆಯ ಬಾರಿಗೆ ಪರಸ್ಪರ ಮುಖಾಮುಖಿಯಾಗಿದ್ದವು, ಅಲ್ಲಿ ಭಾರತ 72 ರನ್‌ಗಳಿಂದ ಜಯಗಳಿಸಿತ್ತು. ಬಾಂಗ್ಲಾದೇಶ ವಿರುದ್ಧದ ಸರಣಿಯನ್ನು 1-2ರ ಅಂತರದಿಂದ ಸೋತ ನಂತರ ಜಿಂಬಾಬ್ವೆ ಈ ಸರಣಿಯನ್ನು ಪ್ರವೇಶಿಸಿತು. ಮತ್ತೊಂದೆಡೆ, ಭಾರತವು ತನ್ನ ಕೊನೆಯ ಎರಡು ಟಿ20ಐ ಸರಣಿಗಳನ್ನು ಕಳೆದುಕೊಂಡಿದೆ. ಐಸಿಸಿ ಪುರುಷರ ಟಿ20 ವಿಶ್ವಕಪ್ ಚಾಂಪಿಯನ್‌ ಆಗಿರುವ ಭಾರತ ಐರ್ಲೆಂಡ್ ವಿರುದ್ಧ 0-2 ಅಂತರದಿಂದ ಸೋತರೆ, ನಂತರ ಇಂಗ್ಲೆಂಡ್ ವಿರುದ್ಧ 0-4ರ ಅಂತರದಿಂದ ಹೀನಾಯವಾಗಿ ಸೋತರು.

ಸರಣಿ ವೇಳಾಪಟ್ಟಿ

ಮೊದಲ ಟಿ20ಐ: ಜುಲೈ 23, ಹರಾರೆ ಸ್ಪೋರ್ಟ್ಸ್ ಕ್ಲಬ್

2ನೇ ಟಿ20ಐ: ಜುಲೈ 25, ಹರಾರೆ ಸ್ಪೋರ್ಟ್ಸ್ ಕ್ಲಬ್

3ನೇ ಟಿ20ಐ:  ಜುಲೈ 26, ಹರಾರೆ ಸ್ಪೋರ್ಟ್ಸ್ ಕ್ಲಬ್

ಜಿಂಬಾಬ್ವೆ ಟಿ20 ತಂಡ

ಸಿಕಂದರ್ ರಾಜಾ (ನಾಯಕ), ಬ್ರಿಯಾನ್ ಬೆನೆಟ್, ರಯಾನ್ ಬರ್ಲ್, ಟನಕಾ ಚಿವಂಗಾ, ಬೆನ್ ಕರನ್, ಬ್ರಾಡ್ ಇವಾನ್ಸ್, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಾನಿ (ವಿಕೆಟ್ ಕೀಪರ್), ವೆಲ್ಲಿಂಗ್ಟನ್ ಮಸಕಡ್ಜಾ, ಬ್ಲೆಸ್ಸಿಂಗ್ ಮುಜರಬಾನಿ, ಡಿಯೋನ್ ಮೈಯರ್ಸ್, ರಿಚರ್ಡ್ ನ್ಗರಾವಾ, ನ್ಯೂಮನ್ ನ್ಯಾಮ್ಹುರಿ, ಮಿಲ್ಟನ್ ಶುಂಬಾ, ಮತ್ತು ತಫಾಡ್ಜ್ವಾ ತ್ಸಿಗಾ (ವಿಕೆಟ್ ಕೀಪರ್).



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed