IND vs ZIM: ಮಯಾಂಕ್, ಪ್ರಿನ್ಸ್ ಯಾದವ್ ದಾಳಿಗೆ ಜಿಂಬಾಬ್ವೆ ತತ್ತರ! ಮೊದಲ ಟಿ20 ಗೆಲ್ಲಲು ಟೀಮ್ ಇಂಡಿಯಾಗೆ ಸಾಧಾರಣ ಗುರಿ | ಕ್ರೀಡಾ ಸುದ್ದಿ | ACTPnews

ಭಾರತ ತಂಡ


Last Updated:

ಜಿಂಬಾಬ್ವೆ 20 ಓವರ್​​​ಗಳಲ್ಲಿ 7 ವಿಕೆಟ್ ಕಳೆದುಕೊಂಡು 125 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದೆ. ವೆಸ್ಲಿ ಮಧವೆರೆ 39, ಮರುಮಣಿ ಅಜೇಯ 27 ರನ್​ಗಳಿಸಿ ತಂಡದ ಟಾಪ್ ಸ್ಕೋರರ್ ಎನಿಸಿಕೊಂಡರು.

ಭಾರತ ತಂಡ
ಭಾರತ ತಂಡ

ಭಾರತ ಮತ್ತು ಜಿಂಬಾಬ್ವೆ (India vs Zimbabwe) ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಯಂಗ್​ಸ್ಟರ್ಸ್​​ ಅದ್ಭುತ ಬೌಲಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಹರಾರೆ ಸ್ಪೋರ್ಟ್ಸ್​ ಕ್ಲಬ್​​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ ಭಾರತೀಯ ಯುವ ವೇಗಿಗಳ ದಾಳಿಗೆ ತತ್ತರಿಸಿತು. 20 ಓವರ್​​​ಗಳಲ್ಲಿ 7 ವಿಕೆಟ್ ಕಳೆದುಕೊಂಡು 125 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದೆ. ವೆಸ್ಲಿ ಮಧೆವೆರೆ 39, ಮರುಮಣಿ ಅಜೇಯ 27 ರನ್​ಗಳಿಸಿ ತಂಡದ ಟಾಪ್ ಸ್ಕೋರರ್ ಎನಿಸಿಕೊಂಡರು.

32ಕ್ಕೆ 4 ವಿಕೆಟ್ ಪಡೆದ ಯಂಗ್ ಬೌಲರ್ಸ್

ತವರಿನ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಜಿಂಬಾಬ್ವೆ ತಂಡ ಮೊದಲ ಎಸೆತದಲ್ಲಿಯೇ ವಿಕೆಟ್ ಕಳೆದುಕೊಂಡಿತು. 2 ವರ್ಷಗಳ ನಂತರ ರಾಷ್ಟ್ರೀಯ ತಂಡಕ್ಕೆ ಮರಳಿದ್ದ ಮಯಾಂಕ್ ಯಾದವ್ ಬ್ರಿಯಾನ್ ಬೆನೆಟ್ ಅವರನ್ನು ಪೆವಿಲಿಯನ್​​ಗೆ ಗೋಲ್ಡನ್ ಡಕ್ ಮಾಡಿದರು. ನಂತರ ನಾಲ್ಕನೇ ಓವರ್‌ನಲ್ಲಿ ಬೆನ್ ಕರ್ರನ್ (10) ಪ್ರಿನ್ಸ್ ಯಾದವ್​ಗೆ ಬಲಿಯಾದರು. ಅವರು 8 ಎಸೆತಗಳಲ್ಲಿ 10 ರನ್ ಗಳಿಸಿದರು. ನಂತರ 5ನೇ ಓವರ್​​ನಲ್ಲಿ ಮಯಾಂಕ್ ಯಾದವ್ 14 ಎಸೆತಗಳಲ್ಲಿ 6 ರನ್ ಗಳಿಸಿದ್ದ ಡಿಯಾನ್ ಮೈಯರ್ಸ್​​ಗೆ ಪೆವಿಲಿಯನ್​ಗೆ ದಾರಿ ತೋರಿಸಿದರು. ಶಿವಂ ದುಬೆ ನಾಯಕ ಸಿಕಂದರ್ ರಾಜಾ(4) ಅವರನ್ನು ಔಟ್ ಮಾಡಿದರು, ರಾಜಾ 7 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿ ಔಟ್ ಆದರು.

100ರ ಗಡಿ ದಾಟಿಸಿದ ಮಧೆವೆರೆ-ಮರುಮಣಿ

ನಂತರ ಒಂದಾದ ಮಧೆವೆರೆ ಹಾಗೂ ಮರುಮಣಿ 6ನೇ ವಿಕೆಟ್ ಜೊತೆಯಾಟದಲ್ಲಿ 58 ರನ್​ಗಳಿಸಿ ತಂಡದ ಮೊತ್ತವನ್ನ 100ರ ಗಡಿ ದಾಟಿಸಿದರು.  ಮಧೆವೆರೆ 34 ಎಸೆತಗಳಲ್ಲಿ  3 ಬೌಂಡರಿ, 1 ಸಿಕ್ಸರ್ ಸಹಿತ 39 ರನ್​ಗಳಿಸಿ 20ನೇ ಓವರರ್​​ನಲ್ಲಿ ಔಟ್ ಆದರು.  ಮರುಮಣಿ 20 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್​ ಸಹಿತ ಅಜೆಯ 27 ರನ್​ಗಳಿಸಿದರು. ಒಟ್ಟಾರೆ ಜಿಂಬಾಬ್ವೆ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 125 ರನ್​ಗಳನ್ನಷ್ಟೇ ಗಳಿಸಲು ಶಕ್ತವಾಯಿತು.

ಭಾರತದ ಪರ ಮಯಾಂಕ್ ಯಾದವ್ 18ಕ್ಕೆ2, ಪ್ರಿನ್ಸ್ ಯಾದವ್​ 19ಕ್ಕೆ2 ವಿಕೆಟ್ ಪಡೆದರೆ, ಶಿವಂ ದುಬೆ 32ಕ್ಕೆ1 ಹಾಗೂ ರವಿ ಬಿಷ್ಣೋಯ್ 24ಕ್ಕೆ1 ವಿಕೆಟ್ ಪಡೆದರು.

ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್

ಭಾರತ: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಅಶೋಕ್ ಶರ್ಮಾ, ಮಯಾಂಕ್ ಯಾದವ್.

ಜಿಂಬಾಬ್ವೆ : ಬ್ರಿಯಾನ್ ಬೆನೆಟ್, ತದಿವಾನಶೆ ಮರುಮಣಿ (ವಿಕೆಟ್ ಕೀಪರ್), ಬೆನ್ ಕರನ್, ಡಿಯೋನ್ ಮೇಯರ್ಸ್, ಸಿಕಂದರ್ ರಾಜಾ (ನಾಯಕ), ರಯಾನ್ ಬರ್ಲ್, ವೆಸ್ಲಿ ಮಾಧೆವೆರೆ, ಬ್ರಾಡ್ ಇವಾನ್ಸ್, ನ್ಯೂಮನ್ ನ್ಯಾಮ್ಹುರಿ, ರಿಚರ್ಡ್ ಎನ್​ಗರವಾ ಮತ್ತು ಬ್ಲೆಸ್ಸಿಂಗ್ ಮುಜರಬಾನಿ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed