IND vs WI: ಸ್ಫೋಟಕ ಬ್ಯಾಟರ್​ನಿಂದ ಅಪಾಯದಲ್ಲಿದೆ ಕೊಹ್ಲಿ ದಾಖಲೆ! ಭಾರತ-ವಿಂಡೀಸ್​ ಟಿ20 ಸರಣಿಯಲ್ಲಿ ಟಾಪ್ 5 ಗರಿಷ್ಠ ಸ್ಕೋರರ್ ಯಾರು? | ಕ್ರೀಡಾ ಸುದ್ದಿ | ACTPnews

ಕೊಹ್ಲಿ ದಾಖಲೆ ಮುರಿಯುವ ಸನಿಹದಲ್ಲಿ ಹೆಟ್ಮೆಯರ್


Last Updated:

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20ಐ ಭಾರತೀಯ ಕಾಲಮಾನ ಸಂಜೆ 7:00 ಗಂಟೆಗೆ ಆರಂಭವಾಗಲಿದ್ದು, ಇಬ್ಬರು ನಾಯಕರಾದ ಶ್ರೇಯಸ್ ಅಯ್ಯರ್ (Shreyas Iyer) ಮತ್ತು ಶಾಯ್ ಹೋಪ್ ಅರ್ಧ ಗಂಟೆ ಮುಂಚಿತವಾಗಿ, ಸಂಜೆ 6:30 ಕ್ಕೆ ಟಾಸ್‌ಗೆ ಮೈದಾನಕ್ಕಿಳಿಯಲಿದ್ದಾರೆ.

ಕೊಹ್ಲಿ ದಾಖಲೆ ಮುರಿಯುವ ಸನಿಹದಲ್ಲಿ ಹೆಟ್ಮೆಯರ್
ಕೊಹ್ಲಿ ದಾಖಲೆ ಮುರಿಯುವ ಸನಿಹದಲ್ಲಿ ಹೆಟ್ಮೆಯರ್

ಭಾರತ ಮತ್ತು ವೆಸ್ಟ್ ಇಂಡೀಸ್ (India vs West Indies) ನಡುವಿನ ಐದು ಪಂದ್ಯಗಳ ಟಿ20ಐ ಸರಣಿ (T20 Series) ಇಂದಿನಿಂದ (ಮಂಗಳವಾರ), ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ಲಖನೌನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20ಐ ಭಾರತೀಯ ಕಾಲಮಾನ ಸಂಜೆ 7:00 ಗಂಟೆಗೆ ಆರಂಭವಾಗಲಿದ್ದು, ಇಬ್ಬರು ನಾಯಕರಾದ ಶ್ರೇಯಸ್ ಅಯ್ಯರ್ (Shreyas Iyer) ಮತ್ತು ಶಾಯ್ ಹೋಪ್ ಅರ್ಧ ಗಂಟೆ ಮುಂಚಿತವಾಗಿ, ಸಂಜೆ 6:30 ಕ್ಕೆ ಟಾಸ್‌ಗೆ ಮೈದಾನಕ್ಕಿಳಿಯಲಿದ್ದಾರೆ. ಈ ಸರಣಿ ಪ್ರಾರಂಭವಾಗುವ ಮೊದಲು, ಇಲ್ಲಿಯವರೆಗೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20ಐ ಸರಣಿಯಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರರ ಬಗ್ಗೆ ತಿಳಿಯೋಣ.

ರೋಹಿತ್ ಶರ್ಮಾ ಹೆಸರಲ್ಲಿ ಗರಿಷ್ಠ ಸ್ಕೋರ್

ಹಿಟ್‌ಮ್ಯಾನ್ ರೋಹಿತ್ ಶರ್ಮಾ ಭಾರತ vs ವಿಂಡೀಸ್ ಟಿ20 ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ಬೌಲರ್‌ಗಳ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದರು. ಈ ತಂಡದ ವಿರುದ್ಧ 22 ಪಂದ್ಯಗಳನ್ನಾಡಿದ್ದು, ರೋಹಿತ್ 38.50 ಸರಾಸರಿ ಮತ್ತು 142.88 ಸ್ಟ್ರೈಕ್ ರೇಟ್‌ನೊಂದಿಗೆ ಅತ್ಯಧಿಕ 693 ರನ್ ಗಳಿಸಿದ್ದಾರೆ. ಈ ಎರಡೂ ತಂಡಗಳ ನಡುವೆ ನಡೆದ ಟಿ20 ಸರಣಿಯಲ್ಲಿ 600 ರನ್‌ಗಳ ಗಡಿ ದಾಟಿದ ಏಕೈಕ ಬ್ಯಾಟ್ಸ್‌ಮನ್ ಆಗಿದ್ದಾರೆ. 2024 ರ ಟಿ20 ವಿಶ್ವಕಪ್ ಗೆದ್ದ ನಂತರ ಹಿಟ್‌ಮ್ಯಾನ್ ಈ ಸ್ವರೂಪದಿಂದ ನಿವೃತ್ತರಾಗಿದ್ದಾರೆ. ಆದರೂ ಈ ದಾಖಲೆ ಅವರ ಹೆಸರಿನಲ್ಲಿಯೇ ಮುಂದುವರಿದಿದೆ.

ಟಾಪ್ 5ರಲ್ಲಿ ಕೊಹ್ಲಿ, ಸೂರ್ಯಕುಮಾರ್

ಟಾಪ್ ಐವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಸ್ಥಾನ ಪಡೆದಿದ್ದಾರೆ . ರೋಹಿತ್ ಅವರಂತೆಯೇ ಕೊಹ್ಲಿ ಕೂಡ 2024 ರ ಟಿ20 ವಿಶ್ವಕಪ್ ಗೆದ್ದ ನಂತರ ಕ್ರಿಕೆಟ್ ನಿಂದ ನಿವೃತ್ತರಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ 14 ಪಂದ್ಯಗಳಲ್ಲಿ 13 ಇನ್ನಿಂಗ್ಸ್‌ಗಳಲ್ಲಿ 57 ಸರಾಸರಿ ಮತ್ತು 142.88 ಸ್ಟ್ರೈಕ್ ರೇಟ್‌ನೊಂದಿಗೆ 570 ರನ್ ಗಳಿಸಿ, ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಸೂರ್ಯಕುಮಾರ್ ಯಾದವ್ 426 ರನ್‌ಗಳೊಂದಿಗೆ ವಿರಾಟ್ ಕೊಹ್ಲಿ ಬಂತರ ಅಂದರೆ, ನಾಲ್ಕನೇ ಸ್ಥಾನದಲ್ಲಿದ್ದಾರೆ. ಸೂರ್ಯಕುಮಾರ್ ಯಾದವ್ ಇನ್ನೂ ನಿವೃತ್ತಿ ಹೊಂದಿಲ್ಲ. ಕಳಪೆ ಫಾರ್ಮ್‌ನಿಂದಾಗಿ 2026 ರ ಟಿ20 ವಿಶ್ವಕಪ್ ಗೆದ್ದಾಗಿನಿಂದ ಅವರು ತಂಡದಿಂದ ಹೊರಗಿದ್ದಾರೆ.

ಪಟ್ಟಿಯಲ್ಲಿ ಇಬ್ಬರು ವೆಸ್ಟ್ ಇಂಡೀಸ್ ಆಟಗಾರರು

ಭಾರತ vs ವೆಸ್ಟ್ ಇಂಡೀಸ್ ಟಿ20ಐ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ ಐದು ಆಟಗಾರರಲ್ಲಿ ಇಬ್ಬರು ವೆಸ್ಟ್ ಇಂಡೀಸ್ ಆಟಗಾರರು ಸೇರಿದ್ದಾರೆ. ನಿಕೋಲಸ್ ಪೂರನ್ 20 ಪಂದ್ಯಗಳಲ್ಲಿ 592 ರನ್ ಗಳಿಸುವ ಮೂಲಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಶಿಮ್ರಾನ್ ಹೆಟ್ಮೈಯರ್ 422 ರನ್ ಗಳಿಸಿ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ. ಹೆಟ್ಮೈಯರ್ ಪ್ರಸ್ತುತ ಸರಣಿಯ ಭಾಗವಾಗಿದ್ದಾರೆ ಮತ್ತು ಸಿಪಿಎಲ್‌ನಿಂದ ತಮ್ಮ ಫಾರ್ಮ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಈ ಸರಣಿಗೆ ಬರುತ್ತಿದ್ದಾರೆ . ಇವರಿಂದ ಪೂರನ್, ಕೊಹ್ಲಿ ಮತ್ತು ಸೂರ್ಯಕುಮಾರ್ ದಾಖಲೆಗಳು ಪತನವಾಗಲಿವೆ.

ಪ್ರಸ್ತುತ ಭಾರತ ತಂಡದ ಆಟಗಾರರ ಅಂಕಿ ಅಂಶ

ಪ್ರಸ್ತುತ ಭಾರತೀಯ ತಂಡದ ಆಟಗಾರರಲ್ಲಿ, ಉಪನಾಯಕ ತಿಲಕ್ ವರ್ಮಾ 6 ಪಂದ್ಯಗಳಲ್ಲಿ 200 ರನ್ ಗಳಿಸುವ ಮೂಲಕ ಪಟ್ಟಿಯಲ್ಲಿ 14 ನೇ ಸ್ಥಾನದಲ್ಲಿದ್ದಾರೆ. ಸಂಜು ಸ್ಯಾಮ್ಸನ್ 8 ಪಂದ್ಯಗಳಲ್ಲಿ 6 ಇನ್ನಿಂಗ್ಸ್‌ಗಳಲ್ಲಿ 174 ರನ್ ಗಳಿಸುವ ಮೂಲಕ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದ್ದಾರೆ. 2026 ರ ಟಿ20 ವಿಶ್ವಕಪ್‌ನ ವರ್ಚುವಲ್ ಕ್ವಾರ್ಟರ್-ಫೈನಲ್‌ನಲ್ಲಿ ಸ್ಯಾಮ್ಸನ್ ವೆಸ್ಟ್ ಇಂಡೀಸ್ ವಿರುದ್ಧ 97 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಇಶಾನ್ ಕಿಶನ್ 7 ಪಂದ್ಯಗಳಲ್ಲಿ 125 ರನ್ ಗಳಿಸಿ ಪಟ್ಟಿಯಲ್ಲಿ 23ನೇ ಸ್ಥಾನದಲ್ಲಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed