IND vs WI: ಅವರಿಂದ ನಮ್ಮ ಬೌಲರ್​ಗಳ ಭವಿಷ್ಯ ನಾಶವಾಗುತ್ತಿದೆ! ವೆಸ್ಟ್ ಇಂಡೀಸ್ ವಿರುದ್ಧ ಹೀನಾಯ ಸೋಲಿನ ಬೆನ್ನಲ್ಲೇ ಗಂಭೀರ್ ಆಕ್ರೋಶ | ಕ್ರೀಡಾ ಸುದ್ದಿ | ACTPnews

ಗೌತಮ್ ಗಂಭೀರ್ (ANI)


Last Updated:


ಗೌತಮ್ ಗಂಭೀರ್ ಅವರ ಕೋಪಕ್ಕೆ ಮುಖ್ಯ ಕಾರಣ ರಾಂಚಿಯ ಜೆಎಸ್‌ಸಿಎ (JSCA) ಕ್ರೀಡಾಂಗಣದ ಸಂಪೂರ್ಣ ಫ್ಲಾಟ್ ಪಿಚ್. ಇಂತಹ ಪಿಚ್‌ಗಳು ಕೇವಲ ರನ್‌ಗಳ ಮಳೆ ಸುರಿಸಲು ಮಾತ್ರ ಯೋಗ್ಯವಾಗಿದ್ದು, ಕ್ರಿಕೆಟ್‌ನ ಅಸಲಿ ರೋಮಾಂಚನವನ್ನು ಕಸಿದುಕೊಳ್ಳುತ್ತವೆ ಎಂದು ಅವರು ಕಿಡಿಕಾರಿದ್ದಾರೆ.

ಗೌತಮ್ ಗಂಭೀರ್ (ANI)
ಗೌತಮ್ ಗಂಭೀರ್ (ANI)

ಭಾರತ ಮತ್ತು ವೆಸ್ಟ್ ಇಂಡೀಸ್ (Indies vs West Indies) ನಡುವೆ ರಾಂಚಿಯಲ್ಲಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ (T20I Series) ಭಾರತ ತಂಡ 249 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದರೂ ಸೋಲು ಅನುಭವಿಸಿತು. ಈ ಐತಿಹಾಸಿಕ ಪಂದ್ಯದ ನಂತರ ಭಾರತ ತಂಡದ (Team India) ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಅವರು ಪಿಚ್ ಸಿದ್ಧಪಡಿಸಿದ ಕ್ಯುರೇಟರ್‌ಗಳು ಹಾಗೂ ಬ್ಯಾಟರ್‌ಗಳಿಗೆ ಅತಿಯಾದ ಬೆಂಬಲ ನೀಡುವ ಕ್ರಿಕೆಟ್ ನಿಯಮಗಳ ವಿರುದ್ಧ ತಮ್ಮ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕೇವಲ 10 ದಿನಗಳ ಅವಧಿಯಲ್ಲಿ ಗಂಭೀರ್ ಪಿಚ್ ವಿಚಾರವಾಗಿ ಹೀಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ.

ಫ್ಲಾಟ್ ಪಿಚ್ ವಿರುದ್ಧ ಗಂಭೀರ್ ಆಕ್ರೋಶ

ಗೌತಮ್ ಗಂಭೀರ್ ಅವರ ಕೋಪಕ್ಕೆ ಮುಖ್ಯ ಕಾರಣ ರಾಂಚಿಯ ಜೆಎಸ್‌ಸಿಎ (JSCA) ಕ್ರೀಡಾಂಗಣದ ಸಂಪೂರ್ಣ ಫ್ಲಾಟ್ ಪಿಚ್. ಇಂತಹ ಪಿಚ್‌ಗಳು ಕೇವಲ ರನ್‌ಗಳ ಮಳೆ ಸುರಿಸಲು ಮಾತ್ರ ಯೋಗ್ಯವಾಗಿದ್ದು, ಕ್ರಿಕೆಟ್‌ನ ಅಸಲಿ ರೋಮಾಂಚನವನ್ನು ಕಸಿದುಕೊಳ್ಳುತ್ತವೆ ಎಂದು ಅವರು ಕಿಡಿಕಾರಿದ್ದಾರೆ. ಬ್ಯಾಟ್ ಮತ್ತು ಬಾಲ್ ನಡುವೆ ಯಾವುದೇ ಸಮಾನ ಪೈಪೋಟಿ ಇಲ್ಲದಿದ್ದರೆ ಪಂದ್ಯಗಳು ಏಕಪಕ್ಷೀಯವಾಗುತ್ತವೆ ಮತ್ತು ಇದರಿಂದ ಪಂದ್ಯದ ರಂಜನೆ ಕಡಿಮೆಯಾಗುತ್ತದೆ ಎಂಬುದು ಅವರ ಸ್ಪಷ್ಟ ವಾದವಾಗಿದೆ.

ಬೌಲರ್​ಗಳ ವೃತ್ತಿ ಜೀವನ ನಾಶ

ವಿಶೇಷವಾಗಿ ಬೌಲರ್‌ಗಳ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಗಂಭೀರ್, “ಇಂತಹ ಪಿಚ್‌ಗಳಿಂದ ಬೌಲರ್‌ಗಳ ವೃತ್ತಿಜೀವನವೇ ನಾಶವಾಗುತ್ತದೆ” ಎಂದು ಎಚ್ಚರಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಡ್ರೆಸ್ಸಿಂಗ್ ರೂಮ್ ತಲುಪಲು ಪ್ರತಿಯೊಬ್ಬ ಬೌಲರ್ ವರ್ಷಗಟ್ಟಲೆ ಕಠಿಣ ಪರಿಶ್ರಮ ಪಟ್ಟಿರುತ್ತಾರೆ. ಆದರೆ ಪಂದ್ಯದಲ್ಲಿ ಅವರಿಗೆ ಯಾವುದೇ ರೀತಿಯ ನೆರವು ಸಿಗದ ಪಿಚ್‌ಗಳನ್ನು ಸಿದ್ಧಪಡಿಸಿದರೆ, ಅವರ ಆತ್ಮವಿಶ್ವಾಸ ಕುಗ್ಗಿ ಕೆರಿಯರ್ ಕೊನೆಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಬೌಲರ್‌ಗಳು ನಮ್ಮ ದೇಶದ ಆಸ್ತಿಯಾಗಿದ್ದು, ಅವರ ಹಿತರಕ್ಷಣೆ ಮುಖ್ಯ” ಎಂದು ಅವರು ಹೇಳಿದ್ದಾರೆ.

ಬ್ಯಾಟಿಂಗ್ ಮತ್ತು ಬೌಲಿಂಗ್ ಜಿದ್ದಾಜಿದ್ದಿ ಇರಬೇಕು

ಇದೇ ವೇಳೆ ವೈಟ್-ಬಾಲ್ (ಸೀಮಿತ ಓವರ್‌ಗಳ) ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ನಡುವೆ ಸಮಾನ ನಿಯಮಗಳು ಇರಬೇಕು ಎಂದು ಗಂಭೀರ್ ಒತ್ತಾಯಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಸಂಪೂರ್ಣವಾಗಿ ಬ್ಯಾಟರ್‌ಗಳ ಆಟವಾಗಿ ಬದಲಾಗುತ್ತಿರುವುದರ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ಕೇವಲ ರನ್‌ಗಳ ಸುರಿಮಳೆಯನ್ನಷ್ಟೇ ಅಲ್ಲ, ಬ್ಯಾಟ್ ಮತ್ತು ಬಾಲ್ ನಡುವಿನ ಜಿದ್ದಾಜಿದ್ದಿನ ಹೋರಾಟವನ್ನು ನೋಡಲು ಬಯಸುತ್ತಾರೆ. ಬೌಲರ್‌ಗಳಿಗೂ ಸಮಾನ ಅವಕಾಶ ಸಿಕ್ಕಾಗ ಮಾತ್ರ ಕ್ರಿಕೆಟ್‌ನ ಗುಣಮಟ್ಟ ಹೆಚ್ಚಲು ಸಾಧ್ಯ ಎಂದಿದ್ದಾರೆ.

38.3 ಓವರ್‌ಗಳಲ್ಲಿ ಎರಡೂ ತಂಡಗಳಿಂದ ಒಟ್ಟು 501

ಇದಕ್ಕೂ ಮುನ್ನ ಗುವಾಹಾಟಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲೂ ಇಂತಹದ್ದೇ ಪರಿಸ್ಥಿತಿ ಎದುರಾಗಿತ್ತು. ಅಲ್ಲಿ ವಿಂಡೀಸ್​ ನೀಡಿದ್ದ 406 ರನ್‌ಗಳ ಬೃಹತ್ ಗುರಿಯನ್ನು ಭಾರತ ತಂಡ 39 ಎಸೆತಗಳು ಬಾಕಿ ಇರುವಂತೆಯೇ ಬೆನ್ನಟ್ಟಿತ್ತು. ಆಗಲೂ ಗಂಭೀರ್ ಪಿಚ್ ವಿನ್ಯಾಸದ ವಿರುದ್ಧ ಅಸಮಾಧಾನಗೊಂಡಿದ್ದರು. ಈಗ ರಾಂಚಿಯಲ್ಲೂ ಕೇವಲ 38.3 ಓವರ್‌ಗಳಲ್ಲಿ ಎರಡೂ ತಂಡಗಳಿಂದ ಒಟ್ಟು 501 ರನ್‌ಗಳು ಹರಿದುಬಂದಿರುವುದು ಟಿ-20 ಇತಿಹಾಸದಲ್ಲೇ ಎರಡನೇ ಅತಿ ದೊಡ್ಡ ಮೊತ್ತವಾಗಿದೆ. ಭಾರತ 6 ಓವರ್‌ಗಳ ಒಳಗೆ 58 ರನ್‌ಗಳಿಗೆ 3 ವಿಕೆಟ್ ಪಡೆದು ಉತ್ತಮ ಆರಂಭ ಪಡೆದಿದ್ದರೂ, ಶಾಯ್ ಹೋಪ್ (102*) ಮತ್ತು ಶೆರ್ಫೇನ್ ರುದರ್‌ಫೋರ್ಡ್ (84) ಅವರ ಅಬ್ಬರದಿಂದಾಗಿ ವೆಸ್ಟ್ ಇಂಡೀಸ್ ದಾಖಲೆಯ ರನ್ ಚೇಸ್ ಸಾಧಿಸಿತು. ಈ ಮೂಲಕ 5 ಪಂದ್ಯಗಳ ಸರಣಿ ಈಗ 1-1 ಸಮಬಲಗೊಂಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed