Last Updated:
Abhijeet Dipke’s Grandmother: ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜಿತ್ ದಿಪ್ಕೆಗೆ ಶಾಕ್ ಎದುರಾಗಿದೆ. ಅಭಿಜಿತ್ ದಿಪ್ಕೆ ಅವರ ಅಜ್ಜಿ ವಿಧಿವಶರಾಗಿರೋ ಸುದ್ದಿ ಬಂದಿದೆ. 85 ವರ್ಷದ ಸಾವಿತ್ರಿಬಾಯಿ ಶಂಕರ್ ದೀಪ್ಕೆ ಅವರು ತಮ್ಮ ಸ್ವಗ್ರಾಮದಲ್ಲಿ ನಿಧನರಾಗಿದ್ದಾರೆ.
ಮಹಾರಾಷ್ಟ್ರ: ಕಾಕ್ರೋಚ್ ಜನತಾ ಪಕ್ಷದ (CJP – Cockroach Janata Party) ಸಂಸ್ಥಾಪಕ ಅಭಿಜಿತ್ ದಿಪ್ಕೆಗೆ (Abhijeet Dipke) ಶಾಕ್ ಎದುರಾಗಿದೆ. ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Central Election Commissioner Gyanesh Kumar) ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿಂದು (Delhi) ಸಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮುಂಬೈನಿಂದ (Mumbai) ದೆಹಲಿಗೆ ತೆರಳಿದ್ದ ಅಭಿಜಿತ್ ದಿಪ್ಕೆಯವ್ರನ್ನು ವಿಮಾನದಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದರು. ಇದರ ಬೆನ್ನಲ್ಲೇ ಅಭಿಜಿತ್ ದೀಪ್ಕೆ ಅವರ ಅಜ್ಜಿ (Abhijeet Dipke’s Grandmother) ವಿಧಿವಶರಾಗಿರೋ ಸುದ್ದಿ ಬಂದಿದೆ. 85 ವರ್ಷದ ಸಾವಿತ್ರಿಬಾಯಿ ಶಂಕರ್ ದೀಪ್ಕೆ ಅವರು ತಮ್ಮ ಸ್ವಗ್ರಾಮದಲ್ಲಿ ನಿಧನರಾಗಿದ್ದಾರೆ.
ಅಭಿಜಿತ್ ದೀಪ್ಕೆ ಅವರ ಅಜ್ಜಿ ಸಾವಿತ್ರಿಬಾಯಿ ಶಂಕರ್ ದೀಪ್ಕೆ ಅವರು ನಿಧನರಾಗಿದ್ದಾರೆ. ಸಾವಿತ್ರಿಬಾಯಿ ಶಂಕರ್ ದೀಪ್ಕೆ ಅವರು ಮಹಾರಾಷ್ಟ್ರ ರಾಜ್ಯದ ಹಿಂಗೋಲಿ ಜಿಲ್ಲೆಯ ತಮ್ಮ ಸ್ವಗ್ರಾಮ ಸಂತುಕ್ ಪಿಂಪ್ರಿಯಲ್ಲಿ ತಮ್ಮ 85 ನೇ ವಯಸ್ಸಿನಲ್ಲಿ ಶನಿವಾರ ನಿಧನರಾದರು.
ಸಾವಿತ್ರಿಬಾಯಿ ಶಂಕರರಾವ್ ದೀಪ್ಕೆ ಅವರು ಬೆಳಿಗ್ಗೆ 11.30 ಕ್ಕೆ ಸಂತುಕ್ ಪಿಂಪ್ರಿ ಗ್ರಾಮದಲ್ಲಿರುವ ತಮ್ಮ ತಂದೆಯ ಮನೆಯಲ್ಲಿ ಕೊನೆಯುಸಿರೆಳೆದರು. ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಇದಕ್ಕೂ ಮೊದಲು ಹಿಂಗೋಲಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆರೋಗ್ಯ ಕೊಂಚ ಸುಧಾರಿಸಿದ ಕಾರಣ ಅವರನ್ನು ಅವರ ತಂದೆ ಮನೆಗೆ ವಾಪಸ್ ಕರೆ ತರಲಾಗಿತ್ತು. ಆದರೆ ಇಂದು 85 ವರ್ಷದ ಸಾವಿತ್ರಿಬಾಯಿ ಶಂಕರ್‌ರಾವ್ ದೀಪ್ಕೆ ನಿಧನರಾಗಿದ್ದಾರೆ.
ಅಜ್ಜಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅಭಿಜಿತ್ ದೀಪ್ಕೆ ಅವರ ತಂದೆ ಭಗವಾನ್ ದೀಪ್ಕೆ ಮತ್ತು ಅನಿತಾ ದೀಪ್ಕೆ ಅವರು ಗ್ರಾಮಕ್ಕೆ ತೆರಳಿದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇನ್ನು ದೆಹಲಿ ಪೊಲೀಸರು ಅವರ ಅಜ್ಜಿಯ ನಿಧನದ ಬಗ್ಗೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರಿಗೆ ಮಾಹಿತಿ ನೀಡಿದ್ದಾರೆ. ಬಂಧನದಲ್ಲಿರುವಾಗ ಪ್ರತಿಭಟನೆಯನ್ನು ಮುಂದುವರಿಸಬೇಕೆ ಅಥವಾ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಮನೆಗೆ ಮರಳಬೇಕೆ ಎಂಬುದು ಈಗ ಅವರ ನಿರ್ಧಾರ. ಅಂದಹಾಗೆ ಅಭಿಜಿತ್ ದೀಪ್ಕೆ ಅವರ ಅಜ್ಜಿಯ ಅಂತ್ಯಕ್ರಿಯೆಯನ್ನು ನಾಳೆ ಅಂದರೆ ಭಾನುವಾರ, ಅಕ್ಟೋಬರ್ 11ರಂದು ಬೆಳಿಗ್ಗೆ 10 ಗಂಟೆಗೆ ನೆರವೇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಅಭಿಜೀತ್ ದಿಪ್ಕೆ ಅವರನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೀಗಾಗಿ ನಾವು ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಆದರೆ ನಾವು ಅವರ ಪೋಷಕರನ್ನು ಸಂಪರ್ಕಿಸಿದ್ದೇವೆ, ಮತ್ತು ಅವರು ಸಂತುಕ್ ಪಿಂಪ್ರಿ ಗ್ರಾಮಕ್ಕೆ ತೆರಳುತ್ತಿದ್ದಾರೆ ಎಂದು ಅಭಿಜಿತ್ ದಿಪ್ಕೆ ಅವರ ಸೋದರಸಂಬಂಧಿ ತಿಳಿಸಿದ್ದಾಗಿ ದಿ ಹಿಂದೂ ವರದಿ ಮಾಡಿದೆ.
ಆಗಸ್ಟ್ 15 ರಂದು ಹಿಂಗೋಲಿ ಜಿಲ್ಲೆಯಿಂದ ‘ಸ್ಕೂಲ್ ಥಿಕ್ ಕರೋ’ ಅಭಿಯಾನವನ್ನು ಪ್ರಾರಂಭಿಸಿದಾಗ ಅಭಿಜೀತ್ ದೀಪ್ಕೆ ತನ್ನ ಅಜ್ಜಿಯನ್ನು ಭೇಟಿಯಾಗಿದ್ದನು. ಅದಾದ ಬಳಿಕ ಮತ್ತೊಮ್ಮೆ ಭೇಟಿಯಾಗಿದ್ದರು ಎಂದು ಅವರ ಸೋದರ ಸಂಬಂಧಿ ಹೇಳಿದ್ದಾರೆಯ ಕಳೆದ 20-25 ದಿನಗಳಿಂದ ಅವರು ಅಜ್ಜಿಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ” ಎಂದು ಮೂಲಗಳು ತಿಳಿಸಿವೆ.
ಇನ್ನು ದೆಹಲಿ ಪ್ರತಿಭಟೆನೆ ಹೊರಟಿದ್ದ ಸಿಜೆಪಿ ನಾಯಕರಾದ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ದೆಹಲಿ ಪೊಲೀಸರು ರಾಷ್ಟ್ರ ರಾಜಧಾನಿಯಲ್ಲಿ ಅವರ ವಿಮಾನ ಇಳಿದ ತಕ್ಷಣ ವಿಮಾನದ ಒಳಗಿನಿಂದ ಬಂಧಿಸಿದ್ದಾರೆ ಎಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹೇಳಿಕೊಂಡಿದೆ.














