Last Updated:
ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಭಾರತ ಶ್ರೀಲಂಕಾವನ್ನು 165 ರನ್ಗಳಿಂದ ಸೋಲಿಸಿತು. ಇದರಿಂದ 2 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿತು. ಭಾರತದ ನಾಯಕ ಶುಭಮನ್ ಗಿಲ್ ಈ ಗೆಲುವಿನಿಂದ ಸಂತೋಷಗೊಂಡಿದ್ದಾರೆ.
ಗಾಲೆ(Galle)ಯಲ್ಲಿ ನಡೆದ ಭಾರತ (India) ಮತ್ತು ಶ್ರೀಲಂಕಾ (Sri Lanka) ಮೊದಲ ಟೆಸ್ಟ್(Test)ನಲ್ಲಿ ಭಾರತ 165 ರನ್ಗಳಿಂದ ಗೆದ್ದಿದೆ. ಭಾರತ ನೀಡಿ 372 ರನ್ಗಳನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ ಐದನೇ ದಿನ 206 ರನ್ಗಳಿಗೆ ಆಲೌಟಾಯಿತು. ಈ ಗೆಲುವಿನಿಂದ ಭಾರತ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಇದು ಭಾರತದ 600ನೇ ಟೆಸ್ಟ್ ಪಂದ್ಯ(Match)ವಾಗಿತ್ತು.














