Last Updated:
ಗಾಲೆ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲ್ಲುವ ಹಂತಕ್ಕೆ ಬಂದಿದೆ. ಈಗ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಭಾರತ ವಿರುದ್ಧ ಶ್ರೀಲಂಕಾ ನಾಯಕ ಧನಂಜಯ ಡಿ ಸಿಲ್ವಾ ಅಂಪೈರ್ಗೆ ದೂರು ಸಲ್ಲಿಸಿದ್ದಾರೆ.
ಗಾಲೆ (Galle) ಟೆಸ್ಟ್(Test)ನಲ್ಲಿ ಭಾರತ (India) ತಂಡ ಶ್ರೀಲಂಕಾ(Sri Lanka)ಗೆ 372 ರನ್ಗಳ ಗುರಿ ಕೊಟ್ಟಿದೆ. ಮೊದಲ ಇನ್ನಿಂಗ್ಸ್ನಲ್ಲಿ ದೊಡ್ಡ ಮುನ್ನಡೆ ಪಡೆದಿದ್ದರಿಂದ ಭಾರತ ತಂಡ ಪಂದ್ಯವನ್ನು ಹಿಡಿತದಲ್ಲಿಟ್ಟುಕೊಂಡಿದೆ. ಭಾರತದ ಎರಡನೇ ಇನ್ನಿಂಗ್ಸ್ 193 ರನ್ಗಳಲ್ಲಿ ಮುಗಿಯಿತು. ಶ್ರೀಲಂಕಾ ನಾಲ್ಕನೇ ಇನ್ನಿಂಗ್ಸ್ನಲ್ಲಿ ದೊಡ್ಡ ಗುರಿಯನ್ನು ಚೇಸ್ ಮಾಡಬೇಕಾಗಿದೆ. ಆದ್ದರಿಂದ ಪಿಚ್(Pitch)ನ ಸ್ಥಿತಿ ತುಂಬಾ ಮುಖ್ಯವಾಗಿದೆ.














