IND vs SL XI: ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ ಸಿರಾಜ್! 6,6,6 ಸಿಡಿಸಿ ಡ್ರಾ ಆಗುತ್ತಿದ್ದ ಪಂದ್ಯವನ್ನ ಗೆಲ್ಲಿಸಿದ ಮಿಯಾ ಭಾಯ್ | ಕ್ರೀಡಾ ಸುದ್ದಿ | ACTPnews

ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟ ಸಿರಾಜ್


Last Updated:


ಪಂದ್ಯದ ಕೊನೆಯ ಓವರ್‌ನಲ್ಲಿ ಭಾರತ ತಂಡದ ಗೆಲುವಿಗೆ 16 ರನ್‌ಗಳ ಅವಶ್ಯಕತೆಯಿತ್ತು. ಹಾಗಾಗಿ ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳಬಹುದು ಎಂದು ಎಲ್ಲರೂ ಭಾವಿಸಿದ್ದರು. ಪ್ರಮುಖ ಕಾರಣ ಕ್ರೀಸ್​​ನಲ್ಲಿದ್ದದ್ದು ಬೌಲರ್ ಮೊಹಮ್ಮದ್ ಸಿರಾಜ್​. ಸಿರಾಜ್ ಬೌಲರ್​ ಆಗಿರುವುದರಿಂದ ಅವರಿಂದ 16 ರನ್​ ಸಿಡಿಸುವುದು ಅಸಾಧ್ಯ ಎಂದೇ ನಂಬಲಾಗಿತ್ತು. ಆದರೆ ಸಿರಾಜ್ ಎಲ್ಲರ ಲೆಕ್ಕಾಚಾರವನ್ನ ಉಲ್ಟಾ ಮಾಡಿದರು.

ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟ ಸಿರಾಜ್
ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟ ಸಿರಾಜ್

ಶ್ರೀಲಂಕಾ ಇಲೆವೆನ್ (India Sri Lanka XI)​ ವಿರುದ್ಧದ 3 ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಕೊನೆಯ ಎಸೆತದಲ್ಲಿ ಜಯ ಸಾಧಿಸಿದೆ. ಟೀಮ್ ಇಂಡಿಯಾ ಸ್ಟಾರ್ ಬೌಲರ್​ ಮೊಹಮ್ಮದ್ ಸಿರಾಜ್ ಬ್ಯಾಟಿಂಗ್​​ನಲ್ಲೂ ಅಬ್ಬರಿಸಿ ಶ್ರೀಲಂಕಾ ಇಲೆವೆನ್ ತಂಡವನ್ನ ಧೂಳೀಪಟ ಮಾಡಿದರು. ಡ್ರಾ ಕಡೆಗೆ ಸಾಗುತ್ತಿದ್ದ ಪಂದ್ಯವನ್ನು ಕೊನೆಯ ಓವರ್‌ನಲ್ಲಿ ಸತತ 3 ಸಿಕ್ಸರ್ ಬಾರಿಸುವ ಮೂಲಕ ಭಾರತ ತಂಡಕ್ಕೆ ಸಿರಾಜ್ ಐತಿಹಾಸಿಕ ಜಯ ತಂದುಕೊಟ್ಟಿದ್ದಾರೆ. ಟಿ20ಯಂತೆ ಬ್ಯಾಟ್ ಬೀಸಿದ ಸಿರಾಜ್ ಕೇವಲ 15 ಎಸೆತಗಳಲ್ಲಿ 32 ರನ್​ ಸಿಡಿಸಿ ಗೆಲುವಿನ ರೂವಾರಿಯಾದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed