Last Updated:
ಕೊಲಂಬೊದ ಸಿಂಹಳೀಸ್ ಸ್ಫೋರ್ಟ್ಸ್ ಕ್ಲಬ್ನಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡನೇ ಟೆಸ್ಟ್ ಪಂದ್ಯವು ರೋಚಕ ಡ್ರಾನಲ್ಲಿ (Draw) ಅಂತ್ಯಗೊಂಡಿದೆ.
ಕೊಲಂಬೊದ ಸಿಂಹಳೀಸ್ ಸ್ಫೋರ್ಟ್ಸ್ ಕ್ಲಬ್ನಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡನೇ ಟೆಸ್ಟ್ ಪಂದ್ಯವು ರೋಚಕ ಡ್ರಾನಲ್ಲಿ (Draw) ಅಂತ್ಯಗೊಂಡಿದೆ. ಭಾರತದ ಬೃಹತ್ ಮೊತ್ತದ ಎದುರು ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 290 ರನ್ಗಳಿಗೆ ಆಲೌಟ್ ಆಗಿ ಫಾಲೋ-ಆನ್ ಪಡೆದಿದ್ದ ಶ್ರೀಲಂಕಾ ತಂಡ, ದ್ವಿತೀಯ ಇನ್ನಿಂಗ್ಸ್ನಲ್ಲಿ ಅದ್ಭುತವಾಗಿ ಹೋರಾಡಿ ಪಂದ್ಯವನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 2ನೇ ಇನ್ನಿಂಗ್ಸ್ ಬಹುತೇಕ 154 ಓವರ್ ಆಡಿದ ಶ್ರೀಲಂಕಾ ತಂಡ 9 ವಿಕೆಟ್ ಕಳೆದುಕೊಂಡು 429 ರನ್ಗಳಿಸಿದ್ದ ವೇಳೆ ಎರಡೂ ತಂಡಗಳ ಆಟಗಾರರು ಡ್ರಾ ಮಾಡಿಕೊಳ್ಳಲು ಒಪ್ಪಿಕೊಂಡರು. ಭಾರತ 1-0ಯಲ್ಲಿ ಸರಣಿ ಗೆಲುವು ಸಾಧಿಸಿತು.














