Last Updated:
ಆಗಸ್ಟ್ 23ರಿಂದ ಕೊಲಂಬೊ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಟೆಸ್ಟ್ ಪಂದ್ಯ ಆಡಲಿದೆ. ಈ ಪಂದ್ಯದಲ್ಲಿ ಕುಲದೀಪ್ ಯಾದವ್ ಅವರಿಗೆ ಆಡುವ 11ರಲ್ಲಿ ಸ್ಥಾನ ಸಿಗುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ಬಗ್ಗೆ ಸ್ಪಿನ್ ಬೌಲಿಂಗ್ ಕೋಚ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಭಾರತ (India) ತಂಡ ಮೊದಲ ಟೆಸ್ಟ್ (Test) ಪಂದ್ಯವನ್ನು 165 ರನ್ಗಳಿಂದ ಗೆದ್ದು ಶ್ರೀಲಂಕಾ (Sri Lanka) ವಿರುದ್ಧದ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಎರಡನೇ ಮತ್ತು ಕೊನೆಯ ಪಂದ್ಯ ಆಗಸ್ಟ್ 23ರಂದು ಕೊಲಂಬೊ(Colombo)ದ ಎಸ್ಎಸ್ಸಿ ಮೈದಾನದಲ್ಲಿ ನಡೆಯಲಿದೆ. ಶ್ರೀಲಂಕಾ ವಿರುದ್ಧದ ಗಾಲೆ (Galle) ಟೆಸ್ಟ್ ಮುಗಿದ ನಂತರ, ಟೀಮ್ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಆಡಿದ್ದ ಕುಲ್ದೀಪ್ ಯಾದವ್ (Kuldeep Yadav) ಈ ಪಂದ್ಯದಲ್ಲಿ ಆಡುತ್ತಾರೋ? ಇಲ್ಲವೋ? ಎಂಬ ಸಂದೇಹ ಇದೆ.














